ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ಮತ್ತು ಭದ್ರಾಪುರ ಮಧ್ಯೆ ಸಾಯಂಕಾಲ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹಾವೇರಿಯ ಲೋಕಾಯುಕ್ತ ಇನ್ಸಪೆಕ್ಟರ್ ಒಬ್ಬರು ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ.

2003ರ ಬ್ಯಾಚಿನ ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಕೆಲಕಾಲ ಕರ್ತವ್ಯ ನಿರ್ವಹಿಸಿದ್ದ ಪಂಚಾಕ್ಷರಯ್ಯ ಸಾಲಿಮಠ ಎಂಬುವವರೆ ಸಾವನ್ನಪ್ಪಿದವರಾಗಿದ್ದಾರೆ.

ಪ್ರಸಕ್ತ ಹಾವೇರಿಯ ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಂಚಾಕ್ಷರಯ್ಯ ಕಾರು ಕೂಡಾ ಪೂರ್ಣವಾಗಿ ಸುಟ್ಟು ಹೋಗಿದೆ.ಗದಗಿನಲ್ಲಿಯೂ ಇವರು ಕಾರ್ಯ ನಿರ್ವಹಿಸಿದ್ದರು.
ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಗದಗಿಗೆ ಹೋಗುವ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಅವರೆ ಕಾರು ಚಾಲನೆ ಮಾಡುತ್ತಿದ್ದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಡೀಸೇಲ್ ಟ್ಯಾಂಕ್ ಒಡೆದು ಬೆಂಕಿ ಹೊತ್ತಿಕೊಂಡು ಸಂಪೂರ್ಣ ಬೆಂದು ಹೋಗಿದ್ದಾರೆ.
ಸಾಯಂಕಾಲ ಏಳರ ನಂತರ ಈ ಅವಘಡ ಆರೇರ ಬ್ರಿಜ್ ಬಳಿ ಸಂಭವಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಣ್ಣಿಗೇರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




