*ಅಧ್ಯಕ್ಷರಾಗಿ ಪ್ರದೀಪ ಗೌಡ ಪಾಟೀಲ/ ಹುಣಸೀಮರದ ಗುಂಪಿಗೆ ಸೋಲು*
ಹುಬ್ಬಳ್ಳಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಮತ್ತು ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಅವರ ಬಣ ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ರವಿವಾರ ನಡೆದ ಮತದಾನದಲ್ಲಿ ಅಧ್ಯಕ್ಷರಾಗಿ ಪ್ರದೀಪಗೌಡ ಪಾಟೀಲ ೯೫೪ ಮತಗಳನ್ನು ಪಡೆದು ಜಯಭೇರಿ ಬಾರಿಸಿದರೆ,
ಕಳೆದ ಒಂದು ದಶಕ ಕಾಲ ಪಟ್ಟದಲ್ಲಿ ಮುಂದುವರಿದಿದ್ದ ಗುರುರಾಜ ಹುಣಶಿಮರದ ಅವರು ೮೬೮ ಮತ ಪಡೆದು ೮೬ ಮತಗಳ ಅಂತರದ ಪರಾಭವಗೊಂಡರು. ಸಿದ್ದಣ್ಣ ಕಂಬಾರ ಕೇವಲ ೧೧೬ ಮತಗಳನ್ನು ಮಾತ್ರ ಪಡೆದರು.
ರವಿವಾರ ಮತದಾನ ನಂತರ ಮತಗಳ ಎಣಿಕೆ ನಡೆದು ಸೋಮವಾರ ಬೆಳಗಿನಜಾವ ವರೆಗೆ ನಡೆದು ಅಧ್ಯಕ್ಷ ಮತ್ತು ಮಹಿಳಾ ಸದಸ್ಯರ ಆಯ್ಕೆ ನಡೆದಿತ್ತು. ಇತರ ಪದಾಧಿಕಾರಿಗಳ ಮತ ಎಣಿಕೆ ನಿನ್ನೆ ಸಾಯಂಕಾಲ ನಡೆದು ಈ ಕೆಳಗಿನವರು ಆಯ್ಕೆಯಾದರು.
ವಿಜೇತರ ಪಟ್ಟಿ ಇಂತಿದೆ.
ಸಾಮಾನ್ಯ (೧) ಶಂಕರ ಕುಂಬಿ 1176 (೨) ಪ್ರಕಾಶ ಭಾವಿಕಟ್ಟಿ (೩) ಸಂತೋಷ ಪಟ್ಟಣಶೆಟ್ಟಿ 1092 (೪) ಮಡಿವಾಳಪ್ಪ ಶಿರಿಯನ್ನವರ 1082 (೫) ಚಂದ್ರಶೇಖರ ಮನಗುಂಡಿ 1081(೬) ಮನೋಜ ಸಂಗೋಳಿ 1058 (೭)ಬಸವರಾಜ ಸೂರಗೊಂಡ 1051(೮) ಶಿವಶರಣ ಕಲಬಶೆಟ್ಟರ 1042 (೯) ಶಶಿಶೇಖರ ವಿ ಡಂಗಣವರ 1003(೧೦) ಬಸವರಾಜ ಗೊಲಪನವರ 993. (೧೧) ರಾಜಶೇಖರ ಉಪ್ಪಿನ 988 (೧೨) ವಿರೇಶ ಕೆಲಗೇರಿ. 977(೧೩) ರವಿಕುಮಾರಬಡ್ನಿ. 962 (೧೪) ಎಸ್ ಎಸ್ ನಿಡವಣಿ 916 (೧೫) ಮಂಜುನಾಥ ಮುಗ್ಗನವರ 906 (೧೬) ಮಹೇಶ ಬಿಳೇಹಾಲ 898 (೧೭) ಆನಂದ ಗಡೇಕಾರ 863 (೧೮) ಷಣ್ಮುಖಪ್ಪ ಬೆಟಗೇರಿ 860 (೧೯) ಮೃತ್ಯುಂಜಯ ಬನೂರ 847 (೨೦) ಬಸವಂತಪ್ಪ ತೋಟದ 838ಚುನಾಯಿತರಾದರು.
ಮಹಿಳಾ ಘಟಕ: (೧) ಜಯಶ್ರೀ ಪಾಟೀಲ 1562 (೨) ಸವಿತಾ ಅಮರಶೆಟ್ಟಿ 1532 (೩) ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ 1492 (೪) ಸುವರ್ಣ ಬಿರಾದಾರ 1487 (೫) ನಾಗರತ್ನ ಹಡಗಲಿ 1462 (೬) ಸಂದ್ಯಾ ಅಂಬಡಗಟ್ಟಿ 1351(೭) ಪಾರ್ವತಿ ಹಾಲಬಾವಿ 1263 (೮) ಬಸಂತಿ ಹಪ್ಪಳದ 1247(೯) ಮುಕ್ತಾ ಸವದಿ 1189 (೧೦) ಸುಧಾ ಕಬ್ಬುರ 1086 ಇವರು ಆಯ್ಕೆ ಆಗಿದ್ದಾರೆ.
10 ಮಹಿಳಾ ಸ್ಥಾನಗಳಿಗೆ ಒಟ್ಟು 11 ಜನರು ಕಣದಲ್ಲಿದ್ದರು. ಅವರ ಪೈಕಿ ಪ್ರಭಾವತಿ ಒಡ್ಡೀನ್ ಪರಾಭವಗೊಂಡರು.