*ಕುಸಿದುಬಿದ್ದ ಕಲಕುಂಟ್ಲಾ ಕೆಎಂಸಿ ತುರ್ತು ಚಿಕಿತ್ಸಾ ಘಟಕದಲ್ಲಿ*
ಕೇಶ್ವಾಪುರ ಠಾಣಾಧಿಕಾರಿ ಕಂಟ್ರೋಲ್ ರೂಂ ಗೆ ವರ್ಗಾವಣೆ
ರಾಷ್ಟ್ರೀಯ ಮಹಿಳಾ ಆಯೋಗ ಎಂಟ್ರಿ*
ಹುಬ್ಬಳ್ಳಿ : ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು ಕಮಲ ರಾಜ್ಯ ಘಟಕದ ಅಧ್ಯಕ್ಷೆ ಮಹಿಳೆ ಮನೆಗೆ ಭೇಟಿ ಕೊಟ್ಟಿದ್ದರೆ, ಮತ್ತೊಂದೆಡೆ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು ತನ್ಮಧ್ಯೆ ಕಾಂಗ್ರೆಸ್ ಕಾರ್ಪೊರೇಟರ್ ಸುವರ್ಣ ಕಲಕುಂಟ್ಲಾ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ಸಂಜೆ ಪಾಲಿಕೆ ಕಾಂಗ್ರೆಸ್ ಸದಸ್ಯೆ ಸುವರ್ಣಾ ಕಲಕುಂಟ್ಲಾ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿ ದೂರು ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಸುವರ್ಣಾ ಕಲಕುಂಟ್ಲಾ, ನಗರದ ಉಣಕಲ್ ನಲ್ಲಿ ಸಂಬಂಧಿ ಮನೆಯಲ್ಲಿರುವ ಬಗ್ಗೆ ಮಾಹಿತಿ ಪಡೆದ ಕೇಶ್ವಾಪುರ ಠಾಣೆ ಪೊಲೀಸರು ವಶಕ್ಕೆ ಪಡೆಯಲು ಹೋಗಿದ್ದರು. ಈ ವೇಳೆ ಹೈ ಡ್ರಾಮಾ ನಡೆದಿದ್ದು ಎದೆನೋವು ಅಂತ ಸುವರ್ಣಾ ಕಲಕುಂಟ್ಲಾ ಕುಸಿದು ಬಿದ್ದಿದ್ದಿದ್ದಾರೆ. ಕೂಡಲೇ ಅವರನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಂಡಿ ಇವರ ಸಂಬಂಧ ದಾಖಲಾದ ಪ್ರಕರಣಗಳಲ್ಲಿ ತನಿಖೆ ನಡೆಸಲು ತನಿಖಾಧಿಕಾರಿಯಾಗಿ ಎಸಿಪಿ ಶಿವರಾಜ್ ಕಟಕಬಾವಿ ಇವರನ್ನು ನೇಮಿಸಿ ಪೊಲೀಸ್ ಕಮೀಷನರ್ ರವರು ಆದೇಶ ಮಾಡಿದ್ದಾರೆ.
ಅಲ್ಲದೆ ಕೇಶವಾಪುರ ಪೊಲೀಸ್ ಇನ್ಸ್ಪೆಕ್ಟರ್ ಎಸ್ ಕೆ ಹಟ್ಟಿ ಇವರನ್ನು ಈ ಕೂಡಲೇ ಜಾರಿಗೆ ಬರುವಂತೆ ಕಂಟ್ರೋಲ್ ರೂಂ ನಲ್ಲಿ ವರದಿ ಮಾಡಲು ಕಮೀಷನರ್ ಸೂಚಿಸಿದ್ದಾರೆ.
ಘಂಟಿಕೇರಿ ಪಿಐ ಜಾದವರವರನ್ನು ಕೇಶವಾಪುರ ಪೊಲೀಸ್ ಠಾಣಾದಲ್ಲಿ ಹೆಚ್ಚುವರಿ ಪ್ರಭಾರ ವಹಿಸಿಕೊಳ್ಳಲು ಸೂಚಿಸಲಾಗಿದೆ.
ಕೇಶ್ವಾಪುರ ಠಾಣೆಯ ಪೊಲೀಸರು ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯನ್ನು ಬಂಧಿಸಲು ಹೋಗಿದ್ದ ವೇಳೆ ನಡೆದ ವಿವಸ್ತ್ರ ಪ್ರಕರಣ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿತ್ತು. ಹೀಗಾಗಿ ನಿನ್ನೆ ಕೇಶ್ವಾಪುರ ಠಾಣೆ ಮುಂದೆ ಬಿಜೆಪಿ ನಾಯಕರು ಬೃಹತ್ ಹೋರಾಟ ನಡೆಸಿದ್ದರು. ಇದಕ್ಕೆಲ್ಲಾ ಕುಮ್ಮಕ್ಕು ನೀಡಿರೋ ಪಾಲಿಕೆ ಸದಸ್ಯೆ ಸುವರ್ಣಾ ಕಲಕುಂಟ್ಲಾ ಮತ್ತು ಆಕೆಯ ಬೆಂಬಲಿಗರ ವಿರುದ್ದ ಪ್ರಕರಣ ದಾಖಲಿಸಿಕೊಂಡು, ಅವರ ವಿರುದ್ದ ಕ್ರಮವಾಗಬೇಕು ಅಂತ ಆಗ್ರಹಿಸಿದ್ದರು.ಈ ಹಿನ್ನೆಲೆಯಲ್ಲಿ
ನಿನ್ನೆ ರಾತ್ರಿ ಸುಜಾತಾ ಹಂಡಿ ಸಹೋದರ ಮರಿಯಾದಾಸ್ ನೀಡಿದ ದೂರಿನ ಮೇಲೆ ಕೇಶ್ವಾಪುರ ಠಾಣೆಯಲ್ಲಿ ಸುವರ್ಣಾ ಕಲಕುಂಟ್ಲಾ ಸೇರಿ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಬೆಳಿಗ್ಗೆ ಸುಜಾತಾ ಹಂಡಿ ನಿವಾಸಕ್ಕೆ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯೆಕ್ಷೆ ಸಿ ಮಂಜುಳಾ ಭೇಟಿ ನೀಡಿ ಕುಟುಂಬಕ್ಕೆ ದೈರ್ಯ ಹೇಳಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರೋ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಘಟನೆಯನ್ನು ಖಂಡಿಸಿರೋ ಆಯೋಗ, ಈ ಬಗ್ಗೆ ಐದು ದಿನದಲ್ಲಿ ವರದಿ ನೀಡುವಂತೆ ಡಿಜಿಪಿಗೆ ಪತ್ರ ಬರೆದು ಸೂಚಿಸಿದ್ದಾರೆ.
ಪೊಲೀಸರ ಕ್ರಮಕ್ಕೆ ಕಾಂಗ್ರೆಸ್ ಮುಖಂಡರು ಕಿಡಿಕಾರಿದ್ದು ನಿನ್ನೆ ಕೇಶ್ವಾಪುರ ಠಾಣೆ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಿದರೆ ಇಂದು ಕೇಶ್ವಾಪುರ ಠಾಣೆಗೆ ಕಾಂಗ್ರೆಸ್ ನಾಯಕರ ನಿಯೋಗ ಆಗಮಿಸಿ, ಪೊಲೀಸರಿಗೆ ಮನವಿ ಸಲ್ಲಿಸಿದ್ದು. ಸುಜಾತಾ ಹಂಡಿ ಸೇರಿದಂತೆ ಏಳು ಜನರ ವಿರುದ್ಧ ದೂರು ನೀಡಲಾಗಿತ್ತು. ಆದ್ರೆ ಸುಜಾತಾ ಹಂಡಿ ಬಂಧನ ಮಾತ್ರವಾಗಿದೆ. ಉಳಿದವರ ಬಂಧನ ಮಾಡಬೇಕು. ಬಿಜೆಪಿ ಪ್ರತಿಭಟನೆ ಮಾಡಿದ್ದಕ್ಕೆ ವಿನಾಕಾರಣ ಕಾಂಗ್ರೆಸ್ ನವರನ್ನು ಬಂಧಿಸುವ ಕೆಲಸ ಮಾಡಬಾರದು ಅಂತ ಆಗ್ರಹಿಸಿದ್ದಾರೆ.
ಮಾನವೀಯತೆಗೆ ಕೊಳ್ಳಿ ಇಟ್ಟ ಕಾಂಗ್ರೆಸ್ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ನಾಳೆ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ ಹಾಗೂ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ, ಶಾಸಕರಾದ ಅರವಿಂದ್ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರದೀಪ್ ಶೆಟ್ಟರ್ ಅವರ ನೇತೃತ್ವದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದೆ.
ನಾಳೆ ಮಧ್ಯಾಹ್ನ 12-30ಕ್ಕೆ
ಪ್ರತಿಭಟನಾ ಮೆರವಣಿಗೆ ಅಂಬೇಡ್ಕರ್ ಪ್ರತಿಮೆಯ ಮುಂಭಾಗದಿಂದ ತಹಶೀಲ್ದಾರ್ ಕಚೇರಿವರೆಗೆ ನಡೆಯಲಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹ ಹುಬ್ಬಳ್ಳಿಯ ಘಟನೆಗೆ ಕಿಡಿ ಕಾರಿದ್ದಾರೆ. ನಾಳೆ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೆ ಅಂತ ಕಾಯ್ದು ನೋಡಬೇಕಿದೆ.



