*ನಾಗಲಾವಿ ರೇಲ್ವೆ ನಿಲ್ದಾಣ ಬಳಿ ಘಟನೆ*
ಧಾರವಾಡ: ತಾಲೂಕಿನ ರಾಮಾಪೂರ ಹದ್ದಿನಲ್ಲಿ ಕಾರು ಸಹಿತ ಓರ್ವನನ್ನು ಬೆಂಕಿ ಹಚ್ಚಿ ಸುಟ್ಟ ಘಟನೆ ನಡೆದಿದೆ.

ನಾಗಲಾವಿ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಗ್ರಾಮೀಣ ಸಿಪಿಐ ಶಿವಾನಂದ ಕಮತಗಿ ಅವರು ಭೇಟಿ ನೀಡಿದ್ದಾರೆ.
ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಪ್ರಕರಣ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಕಾರು ಮತ್ತು ಕಾರಿನಲ್ಲಿ ಇದ್ದವರ ಕುರಿತು ತನಿಖೆ ನಡೆಸಲಾಗುತ್ತಿದೆ.




