ಗದಗ : ಕಳೆದ ಶನಿವಾರ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ 5 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾ ಬಲೆಗೆ ಬಿದ್ದಿದ್ದು
ಇಂದು ಪೊಲೀಸ್ ಠಾಣೆಯಲ್ಲೇ 10 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಶಹರ ಪೊಲೀಸ್ ಠಾಣೆಯ ಎಎಸ್ಐ
ಸಿ. ವಿ. ಇಂಗಳಹಳ್ಳಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಅರ್ಜಿಯೊಂದನ್ನು ವಜಾ ಮಾಡಲು ಈ ಎಎಸ್ಐ 13 ಸಾವಿರ ರೂ. ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ನಗರದ ಹುಡ್ಕೋ ಕಾಲನಿಯ ನಿವಾಸಿ ವಿರೇಶ ಪೂಜಾರ
ದೂರು ಆಧರಿಸಿ ಬುಧವಾರ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾ ಅಧಿಕಾರಿಗಳು ಇಂಗಳಹಳ್ಳಿ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಾದ ವಿಜಯ ಬಿರಾದಾರ, ಪರಮೇಶ ಕವಟಗಿ, ಎಸ್.ಎಸ್. ತೇಲಿ, ಎಂ. ಎಂ. ಅಯ್ಯನಗೌಡ್ರ ಇತರರು ಇದ್ದರು.



