ಹುಬ್ಬಳ್ಳಿ : ರಾಜ್ಯ ಸರ್ಕಾರ ಮೂವರು ಹೆಚ್ಚುವರಿ ಅಡ್ವೊಕೇಟ್ ಜನರಲ್ ರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಹುಬ್ಬಳ್ಳಿ ಮೂಲದ ಪ್ರದೀಪ್ ಗಾಂವ್ಕರ್ ಒಬ್ಬರಾಗಿದ್ದಾರೆ.

ತಾರಾನಾಥ ಪೂಜಾರಿ, ಶ್ರೀಕಾಂತ್ ಪಾಟೀಲ್ ಕೆ ಇನ್ನಿಬ್ಬರಾಗಿದ್ದು ಸಿ.ಎಸ್.ಪ್ರದೀಪ, ಸಂತೋಷ ಗೋಗಿ ಹಾಗೂ ಎನ್. ದೇವಿದಾಸ ಅವರನ್ನು ಬಿಡುಗಡೆಗೊಳಿಸಿ ಈ ಮೂವರನ್ನು ಕಾನೂನು, ನ್ಯಾಯ, ಮತ್ತು ಮಾನವ ಹಕ್ಕುಗಳ ಇಲಾಖೆ ಅಧೀನ ಕಾರ್ಯದರ್ಶಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಸ ಪ ಗಾಂವ್ಕರ್ ಅವರ ಮೊಮ್ಮಗ ಪ್ರದೀಪ್ ಗಾಂವ್ಕರ್ ಅವರು ದಿವಂಗತ ನ್ಯಾಯಮೂರ್ತಿ ಎಸ್.ಆರ್.ನಾಯಕ್ ಅವರ ಪುತ್ರಿ ನಿಶಾ ಅವರನ್ನು ವಿವಾಹವಾಗಿದ್ದಾರೆ.
ಪ್ರದೀಪ್ ಅವರು ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದು, ತಮ್ಮ ಶಾಲಾ ಶಿಕ್ಷಣ ಮತ್ತು ಪಿಯು ಶಿಕ್ಷಣ ಸೇಂಟ್ ಮೇರಿಸ್ ಹೈಸ್ಕೂಲ್ ಮತ್ತು ಪಿ.ಸಿ. ಜಾಬಿನ್ ಸೈನ್ಸ್ ಕಾಲೇಜಿನಲ್ಲಿ ಮಾಡಿದ್ದು, ನಂತರ ಅವರು ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಎಂಜಿನಿಯರಿಂಗ್ನಿಂದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನದಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ತದನಂತರ ಭಾರತ ಮತ್ತು ಯುಎಸ್ನಲ್ಲಿ ವಿಪ್ರೋ ಟೆಕ್ನಾಲಜೀಸ್, ಫಿಡೆಲಿಟಿ ಇನ್ವೆಸ್ಟ್ಮೆಂಟ್ಸ್ ಮತ್ತು ಎಂಫಸಿಸ್ನಂತಹ ಕಂಪನಿಗಳಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದರು. ನಂತರ ಅವರು ಸಾಫ್ಟ್ವೇರ್ ಉದ್ಯಮವನ್ನು ತೊರೆದು ಎಲ್ಎಲ್ಬಿ ಪದವಿ ಪಡೆದು ಪ್ರಸ್ತುತ ಬೆಂಗಳೂರಿನ ಕರ್ನಾಟಕದ ಹೈಕೋರ್ಟ್ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.




