*ಹಳೇ ಹುಬ್ಬಳ್ಳಿ ಪೊಲೀಸರ ಕಾರ್ಯಾಚರಣೆ*
ಹುಬ್ಬಳ್ಳಿ: ಹುಬ್ಬಳ್ಳೀ ಧಾರವಾಡ ಪೊಲೀಸರ ಮಾದಕರ ವಸ್ತುಗಳ ಕುಳಗಳ ಬೇಟೆ ಮುಂದುವರಿದಿದ್ದು ಮತ್ತೆ 12 ಜನರನ್ನು ಬಂಧಿಸಿ1 ಕೆಜಿ 365ಗ್ರಾಂ ಗಾಂಜಾವನ್ನು ಹಳೇ ಹುಬ್ಬಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬುಧವಾರ ರಾತ್ರಿ ಅರವಿಂದನಗರದ ಪಿ.ಟಿ.ಕ್ವಾಟರ್ಸ್ ನ ಪಾಳು ಬಿದ್ದ ಕಟ್ಟಡದಲ್ಲಿ ಗಾಂಜಾ ಮಾರಾಟ ನಡೆದಿದೆ ಎಂಬ ಖಚಿತ ಮಾಹಿತಿ ಆಧರಿಸಿ ಹಳೇ ಹುಬ್ಬಳ್ಳಿ ಇನ್ಸಪೆಕ್ಟರ್ ಸುರೇಶ ಯಳ್ಳೂರ ಹಾಗೂ ಸಿಬ್ಬಂದಿ ದಾಳಿ ಮಾಡಿ
ಒಂದು ಲಕ್ಷ ಮೌಲ್ಯದ ಗಾಂಜಾ, 9 ಮೊಬೈಲ್, ಮೂರು ಬೈಕ್, ಎರಡು ಸಾವಿರ ನಗದು ಸೇರಿ ಒಟ್ಟು4.52 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದೆ.
ಗೋಡಕೆ ಪ್ಲಾಟಿನ ಅಭಿಷೇಕ ಹನಮಂತ, ಗಣೇಶ ಪೇಟೆ, ಹಳೇ ಹುಬ್ಬಳ್ಳಿ ಮತ್ತು ಆನಂದ ನಗರ ಸುತ್ತ ಮುತ್ತಲಿನ ಮಹ್ಮದಆಯಾಜ್ ಜೈನುಲಾಬುದ್ದೀನ, ಇಸ್ಮಾಯಿಲ್ ಮೆಹಬೂಬಾಲಿ, ಜಾಪರ ಅಲಿಯಾಸ್ ಬಾಂಬೆಜಾಫರ ಮಕ್ಕುಲ್, ಜುಬೇರಹ್ಮದ ದಾದಾಪೀರ, ಪುರಕಾನ್ ನಿಸಾರಹ್ಮದ, ಶಾನವಾಜ ಗೌಸಮೋದಿನ, ಸೋಹಿಲ್ ನಜೀರಹ್ಮದ, ಮಹ್ಮದಸಾಧೀಕ ರೀಯಾಜ, ರೋಶನ್ ಸೋಯಬ್ಅಲಿಯಾಸ್ ಬಬ್ಲೂ ಜಮೀಲಾಅಹ್ಮದ್, ಸಲೀಂ ಹಜರತಸಾಬ, ಕರೀಂ ಜಾಂಗೀರಖಾನ ಇವರುಗಳೇ ಬಂಧಿಸಲ್ಪಟ್ಟ ಕುಳಗಳಾಗಿದ್ದಾರೆ.
ಬೆಳಿಗ್ಗೆ ಹಳೇ ಹುಬ್ಬಳ್ಳಿ ಠಾಣೆಯಲ್ಲೇ ಸುದ್ದಿಗಾರರಿಗೆ ಈ ವಿವರ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸಿಪಿಐ ಸುರೇಶ ಯಳ್ಳೂರ ಅವರ ತಂಡದ ಕಾರ್ಯ ಶ್ಲ್ಯಾಘಿಸಿದರು. ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್. ಇತರ ಅಧಿಕಾರಿಗಳು ಇದ್ದರು.
ನೂತನ ಆಯುಕ್ತರು ಅಧಿಕಾರ ವಹಿಸಿದ ದಿನದಿಂದ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿದ್ದು ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ಸಹ ಸದ್ದಿಲ್ಲದೇ ಈ ಕುಳಗಳ ಹೆಡೆಮುರಿ ಕಟ್ಟುವ ಕಾರ್ಯ ನಡೆದಿದ್ದು, ಆಯುಕ್ತರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು ಈ ಅಕ್ರಮ ದಂಧೆಗೆ ಸಂಪೂರ್ಣ ಬ್ರೇಕ್ ಹಾಕಲಿ ಎಂಬುದು ಆಶಯವಾಗಿದೆ.