*ರಾಜೇಂದ್ರ ಕೊಕಟನೂರನಿಂದ ಮೋಸ – ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲು*
ಹುಬ್ಬಳ್ಳಿ : ಗಂಡ , ಹೆಂಡತಿಗೆ ಹೈಕೋರ್ಟನಲ್ಲಿ ಉದ್ಯೋಗ ಕೊಡಿಸುವುದಾಗಿ ಹಾಗೂ ಗೃಹ ಮಂಡಳಿಯ ನಿವೇಶನ ಕೊಡಿಸುವುದಾಗಿ ನಂಬಿಸಿ ನಗರದ ರಾಜೇಂದ್ರ ಕೊಕಟನೂರ ಎಂಬ ವ್ಯಕ್ತಿಯೊಬ್ಬರು ಸುಮಾರು 61.25 ಲಕ್ಷ ರೂ ವಂಚಿಸಿರುವ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಹುಬ್ಬಳ್ಳಿ ಹೊಸ ಕೋರ್ಟ ಸಂಕೀರ್ಣ ಬಳಿಯ ಸೃಷ್ಟಿ ಹೆರಿಟೇಜ್ ಅಪಾರ್ಟಮೆಂಟನ ನಿವಾಸಿ ರಾಜೇಂದ್ರ ಕೊಕಟನೂರ, ಇವರ ಪತ್ನಿ ಉಪಾ ರಾಜೇಂದ್ರ ಕೊಕಟನೂರ, ಪುತ್ರ ಕಾರ್ತೀಕ ಕೊಕಟನೂರ ಎಂಬುವವರೇ ವಂಚನೆ ಮಾಡಿದ್ದು ಈ ಕುರಿತು ವಂಚನೆಗೊಳಗಾದ ಸಾಪ್ಟವೇರ್ ಉದ್ಯೋಗಿಗಳಾದ ಶಾಂತಾ ಜಾಧವ ಹಾಗೂ ಮಿಥುನ ತೋಡ್ಕರ ದೂರು ದಾಖಲಿಸಿದ್ದಾರೆ.
ಸೃಷ್ಟಿ ಹೆರಿಟೇಜ್ನ ಪಕ್ಕದ ಪ್ಲಾಟನ ನಿವಾಸಿಗಳಾದ ಮಿಥುನ ಮತ್ತು ಶಾಂತಾರನ್ನು ಪರಿಚಯಿಸಿಕೊಂಡಿದ್ದಲ್ಲದೇ ನಿಕಟವರ್ತಿಗಳಂತೆ ನಟಿಸಿ ಆರೋಪಿಗಳು ಹೈಕೋರ್ಟನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದಲ್ಲದೇ ದ್ವಿತಿಯ ದರ್ಜೆ ಸಹಾಯಕರ ಹುದ್ದೆಯ ನಕಲಿ ನೇಮಕಾತಿಯ ಧಾರವಾಡ ಹೈಕೋರ್ಟನ ಆದೇಶ ಪತ್ರವನ್ನೂ ಸೃಷ್ಟಿಸಿ ನೈಜ ಎಂದು ನಂಬಿಸಿ 16 ಲಕ್ಷ ರೂ, ಗೃಹ ಮಂಡಳಿಯಲ್ಲಿ ನಿವೇಶನ ಕೊಡಿಸುವುದಾಗಿ ಹೇಳಿ 12ಲಕ್ಷ ಅಲ್ಲದೇ ಮಗನ ವಿವಾಹ , ಉದ್ಯೋಗಕ್ಕಾಗಿ 33.25ಲಕ್ಷ ರೂ ಪಡೆದು ವಾಪಸ್ ನೀಡದೇ ವಂಚಿಸಿದ್ದಾರೆ.ಅಲ್ಲದೇ ಹಣ ಪಡೆದುಕೊಂಡ ಬಗ್ಗೆ ಮತ್ತು ಕೊಡುವುದಾಗಿ ನಂಬಿಸಿ ಬಾಂಡ್ಗಳಲ್ಲಿ ಹಣ ಕೊಡುವುದಾಗಿ ಸಾಕ್ಷಿದಾರರ ಸಹಿಯನ್ನೂ ಕೊಕಟನೂರ ಮಾಡಿಸಿಕೊಟ್ಟಿದ್ದಾರೆ. ಅಲ್ಲದೇ ತಾನು ನಿವೃತ್ತ ಹಿರಿಯ ಪೊಲೀಸ ಅಧಿಕಾರಿಗಳ ಸಂಬಂಧಿ ಹೇಳಿಕೊಂಡೇ ಹಲವರಿಗೆ ವಂಚನೆ ಮಾಡಿದ್ದಾರೆನ್ನಲಾಗುತ್ತಿದೆ.
ವಿದ್ಯಾನಗರ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ್ದು ಕೊಕಟನೂರ ಮೇಲೆ ಇನ್ನೂ ಹಲವಾರು ಪ್ರಕರಣಗಳಿವೆ ಎಂದು ಹೇಳಲಾಗುತ್ತಿದೆ.