*ಅಕ್ರಮ ಕುಳ ಬಾಂಡ್ ರವಿ ಬೆಂಬಲಿಸಿದ ನಡೆ ಚರ್ಚೆಗೆ ಗ್ರಾಸ / ಕ್ಷಮೆಗೆ ಹಲವರ ಆಗ್ರಹ*
ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ರವಿವಾರ ಸಾರ್ವಜನಿಕರು, ಮಾಧ್ಯಮದ ಎದುರು ತರಾಟೆ ತೆಗೆದುಕೊಂಡ ಘಟನೆ ವೈರಲ್ ಆಗಿದ್ದು ಆದರೀಗ ರೌಡಿ ಶೀಟರ್ ಪರ ಬ್ಯಾಟಿಂಗ್ ಮಾಡಿದರೇ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ.
ನಿಮಗೆ ಏನಿದೆ ಅಧಿಕಾರ ಹೊಡೆಯೋಕ್ಕೆ, ಯಾವ ಆಧಾರದ ಮೇಲೆ ಹೊಡೆದೀರಿ, ನಾನೇ ನಿಮಗೆ ನಾಲ್ಕು ಗುದ್ಧಿದ್ರೆ, ಹೇಗೆ ಹೊಡೆದಿರಿ ನೀವು, ನಾಳೆ ನಾನೇ ಪೋಲಿಸ್ ಠಾಣೆಯ ಮುಂದೆ ಧರಣಿ ಕೊಡುತ್ತೇನೆ ಎಂದು
ತಮ್ಮ ನಿವಾಸಕ್ಕೆ ಧಾರವಾಡದ ಉಪನಗರ ಠಾಣೆಯ ಇನ್ಸ್ಪೆಕ್ಟರ್ ನಾಗಯ್ಯ ಕಾಡದೇವರಮಠ ದೀಪಾವಳಿ ಹಬ್ಬದ ಶುಭಾಶಯ ತಿಳಿಸಲು ಆಗಮಿಸಿದ ವೇಳೆಯಲ್ಲಿ ಧಾರವಾಡ ಗೊಲ್ಲರ ಓಣಿಯ ರವಿ ಗೊಲ್ಲರ ಉರ್ಫ್ ಬಾಂಡ್ ರವಿ ಇನ್ಸ್ಪೆಕ್ಟರ್ ವಿನಾಕಾರಣ ಹಲ್ಲೆ ಮಾಡತ್ತಾರೆ. ಸುಳ್ಳು ಕೇಸ್ ದಾಖಲಿಸತ್ತಾರೆಂದು ಹೇಳಿದ ಹಿನ್ನೆಲೆಯಲ್ಲಿ ಜೋಷಿ ತರಾಟೆಗೆ ತೆಗೆದುಕೊಂಡರಲ್ಲದೇ
ಜನರನ್ನು ಕರೆದು ಹೊಡೆಯೋ ಅಧಿಕಾರ ಏನಿದೆ ಎಂದು ಕಿಡಿಕಾರಿದ್ದರು.
ಆದರೆ ಪೊಲೀಸ್ ಅಧಿಕಾರಿಯನ್ನ ಹೀನವಾಗಿ ಅಪಮಾನಿಸಿದ ಕೇಂದ್ರ ಸಚಿವರ ನಡೆಗೆ ವ್ಯಾಪಕ ಖಂಡನೆ ಸಹ ವ್ಯಕ್ತವಾಗಿದೆ .ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಒತ್ತಾಯ ಕೇಳಿಬರುತ್ತಿದೆ.
ದೀಪಾವಳಿ ಹಬ್ಬದ ಶುಭಾಷಯಗಳನ್ನ ಕೋರಲು ಸೌಜನ್ಯದ ಭೇಟಿ ನೀಡಿದ ಪೊಲೀಸ್ ಅಧಿಕಾರಿಯನ್ನು ಭಾಜಪ ಕಾರ್ಯಕರ್ತರಂತೆ ಭಾವಿಸಿ ನಿಂದಿಸಿ ಅಪಮಾನಿಸಿದ ಕೇಂದ್ರ ಸಚಿವರ ನಡೆಯನ್ನು ವಿದ್ಯಾನಗರ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ,
ಸಮತಾ ಸೇನಾ ಕರ್ನಾಟಕ ತೀವ್ರವಾಗಿ ಖಂಡಿಸಿದೆ.
ಹಿಂದೆ ತಮ್ಮದೇ ಸರ್ಕಾರದ ಅವಧಿಯಲ್ಲಿ ಅಮಾಯಕರ ವಿರುದ್ದ ಇದೇ ಅಧಿಕಾರಿಗಳನ್ನ ಬಳಸಿ 107-109-110 ಗಳಡಿ ಪ್ರಕರಣ ದಾಖಲಿಸಿದದದನ್ನ ಮತ್ತು ಅನವಶ್ಯಕವಾಗಿ ಜಾತಿವಾದಿ ಧೋರಣೆಯಿಂದ ಗಡಿಪಾರು- ಗೂಂಡಾಕಾಯ್ದೆಯಡಿ ಬಂಧನ ಗಳನ್ನ ಮಾಡಿಸಿ ಪೊಲೀಸ ಇಲಾಖೆ ಮತ್ತು ಅಧಿಕಾರಿಗಳನ್ನ ಬಳಸಿ ನಡೆಸಿದ ದೌರ್ಜನ್ಯ ವನ್ನ ಮಾನ್ಯ ಕೇಂದ್ರ ಸಚಿವರು ಮರೆತಂತಿದೆ ಈಗ ಚುನಾವಣೆ ಸಮೀಪಿಸಿದ ಕಾರಣಕ್ಕೆ ಜನಸ್ಪಂದನೆ ಹೆಸರಲ್ಲಿ ಪೊಲೀಸ ಅಧಿಕಾರಿಗಳನ್ನ ಹೀನವಾಗಿ ಸಾರ್ವಜನಿಕವಾಗಿ ಅಪಮಾನಿಸುವದನ್ನ ಸಮತಾಸೇನಾ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಖಂಡಿಸಿದ್ದು ಹೀಗೆ ಕೇಂದ್ರಮಂತ್ರಿಗಳೇ ನಡೆದರೆ ಇವರ ಪಕ್ಷದ ಇತರರ ನಡೆ ಹೇಗಿರಬಹುದು ಎಂದಿದ್ದಾರೆ.
ಈ ವಿಷಯವಾಗಿ ಸಂವಿಧಾನವನ್ನ ಗೌರವಿಸೊ ಇರಾದೆ ಇದ್ದಲ್ಲಿ ಮಾನ್ಯ ಕೇಂದ್ರ ಸಚಿವರು ಕ್ಷಮಾಪಣೆ ಕೋರಲಿ ಇಲ್ಲವಾದಲ್ಲಿ ಸಂಧರ್ಭಾನುಸಾರ ಸದರಿಯವರ ಈ ನಡೆಯನ್ನ ಸೂಕ್ತವೇದಿಕೆಗಳಲ್ಲಿ ತೀವ್ರವಾಗಿ ನವ ವಿರೋಧಿಸುವ ಹೋರಾಟ ರೂಪಿಸಲಾಗುವದೆಂದು ಉಳ್ಳಿಕಾಶಿ ಹೇಳಿದ್ದಾರೆ.
ಪೊಲೀಸರು ತಪ್ಪು ಮಾಡಿದಲ್ಲಿ ಕ್ರಮ ಕೈಗೊಳ್ಳಲಿ.ಆದರೆ ಕಾರ್ಯಕರ್ತರ ಎದುರು ಹೀಗೆ ಖಾಕಿ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿರುವದು ಖಂಡನೀಯ ಎಂದು ಉಳ್ಳಾಗಡ್ಡಿಮಠ ಹೇಳಿದ್ದಾರೆ.
*ಬಾಂಡ್ ರವಿ ಹಿನ್ನೆಲೆ* :
ಬಾಂಡ್ ರವಿ ಧಾರವಾಡ ಶಹರ ಠಾಣೆ ವ್ಯಾಪ್ತಿಯಲ್ಲಿ ಎಲೆ ತಟ್ಟುವ ಕಾಯಕ, ಬಡ್ಡಿ ವ್ಯವಹಾರ, ವಸೂಲಿ ದಂಧೆ ಮುಂತಾದವುಗಳನ್ನು ನಡೆಸುತ್ತಿರುವ ಭೂಪನಾಗಿದ್ದು, ಶಹರ ಠಾಣೆಯಲ್ಲಿ 5-6 ಪ್ರಕರಣಗಳಿವೆ. ಇನ್ಸ್ಪೆಕ್ಟರ್ ಕಾಡದೇವರಮಠ ಉಳಿದ ಅಕ್ರಮ ಕುಳಗಳಿಗೆ ಕಿವಿ ಹಿಂಡಿದಂತೆ ಬಿಸಿ ಮುಟ್ಟಿಸಿದ್ದಾರೆ.
ಈತನ ಅಟ್ಟಹಾಸ, ತೆಲುಗು ಸಿನೆಮಾ ಮಾದರಿ ವಸೂಲಿ ಬಗ್ಗೆ ವಿವಿಧ ಕತೆಗಳು ಇವೆ ಎನ್ನಲಾಗಿದೆ.
ಈ ಹಿಂದೆ ವಿನಯ್ ಅವರ ಹಿಂದೆ ಇದ್ದ ಈತ 2018ರಲ್ಲಿ ಅವರ ಸೋಲಿನ ನಂತರ ಅಮೃತ ದೇಸಾಯಿ ಅಂಗಳಕ್ಕೆ ಬಂದವರು ಎನ್ನಲಾಗಿದೆ.