*ವಾಣಿಜ್ಯ ರಾಜಧಾನಿಯಲ್ಲಿ ಎರಡನೇ ಶಾಖೆ*
ಹುಬ್ಬಳ್ಳಿ : ವಾಣಿಜ್ಯ ರಾಜಧಾನಿ ಹಿರಿಮೆಯ ಹುಬ್ಬಳ್ಳಿಯಲ್ಲಿ ಬಾಯಲ್ಲಿ ನೀರೂರಿಸುವ ಹೊಸ ಹೊಸ ತಿಂಡಿ ತಿನಿಸುಗಳನ್ನು ಪೂರೈಸುವ ಹೊಟೆಲ್ ,ರೆಸ್ಟಾರೆಂಟ್ಗಳು ತಲೆಯೆತ್ತುತ್ತಲೆ ಇರುತ್ತವೆ. ಇಂತಹ ಸಾಲಿನಲ್ಲಿ ಬೆಂಗಳೂರಿನಲ್ಲಿ ಅಲ್ಪ ಸಮಯದಲ್ಲೇ ಗ್ರಾಹಕರನ್ನು ತನ್ನೆಡೆಗೆ ಸೆಳೆದಿರುವ ’ದಿ ಆರೋಗ್ಯ ಕೆಫೆ’ ವಿದ್ಯಾನಗರ ಪ್ರದೇಶದ ಪ್ರವಾಸಿ ತಾಣ ತೋಳನಕೆರೆ ಎದುರು ರವಿವಾರ( ದಿ.10) ಆರಂಭಗೊಂಡಿದೆ.
ಮಲ್ಲಿಗೆಯಂತೆ ಅರಳಿದ ತಟ್ಟೆ ಇಡ್ಲಿ, ಘೀ ಪುಡಿ ಇಡ್ಲಿ, ಬಟನ್ ಇಡ್ಲಿ, ಓಪನ್ ದೋಸೆ, ಖಾಲಿ ದೋಸೆ, ಪಡ್ಡು, ಅಕ್ಕಿ ರೊಟ್ಟಿ, ಬಿಸಿ ಬೇಳೆ ಬಾತ್, ಲೆಮನ್ ರೈಸ್, ಪೈನಾಪಲ್ ಕೇಸರಿ ಬಾತ್,ಪುಳಿಯೋಗರೆ ಮುಂತಾದ ತಿಂಡಿ ತಿನಿಸುಗಳನ್ನು ಪೂರೈಸುವ ಈ ಸೆಲ್ಪ್ ಸರ್ವೀಸ್ ಹೊಟೆಲ್ನಲ್ಲಿ ಫಿಲ್ಟರ್ ಕಾಫಿ ಮತ್ತು ಚಹಾ ಸಹ ಲಭ್ಯವಿದೆ.
ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ದಿ ಆರೋಗ್ಯ ಕೆಫೆ ತೆರೆಯಲಾಗಿದ್ದು, ಗ್ರಾಹಕರ ಮನೆ ಮಾತನಾದ ನಂತರ ಹುಬ್ಬಳ್ಳಿಯಲ್ಲಿ ಆರಂಭಿಸಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಐದು ಶಾಖೆ ತೆರೆಯುವ ಯೋಜನೆ ಹೊಂದಿರುವುದಾಗಿ ಕೆಫೆ ಪಾಲುದಾರರಾದ ಮಾಜಿ ಸಂಸದ ಮಂಜುನಾಥ ಕುನ್ನೂರ ಪುತ್ರ ಚಂದನ ಕುನ್ನೂರ ಹಾಗೂ ನಗರದ ಪ್ರಸಿದ್ದ ಬಿಲ್ಡರ್ ಮತ್ತು ಡೆವಲಪರ್ ಆಗಿರುವ ಸೂರಜ್ ಅಳವಂಡಿ ಹೇಳುತ್ತಾರೆ
ಮನೆಯಲ್ಲಿಯೇ ತಯಾರಿಸಿದ ಮಸಾಲೆಯನ್ನು ಅಡುಗೆಗೆ ಬಳಸಲಾಗುತ್ತಿದ್ದು ಗುಣಮಟ್ಟಕ್ಕೆ ಹಾಗೂ ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ.
ಮಾಜಿ ಸಂಸದ ಮಂಜುನಾಥ ಕುನ್ನೂರ, ಗೋವಿಂದರೆಡ್ಡಿ ಅಳವಂಡಿ ಅವರು ಕೆಫೆಯನ್ನು ಉದ್ಘಾಟಿಸಿದರು.ಈ ವೇಳೆ ಯುವ ಮುಖಂಡ ರಾಜು ಕುನ್ನೂರ, ಉಭಯ ಕುಟುಂಬಗಳ ಬಂಧು ಬಳಗ ಹಾಗೂ ಆಪ್ತೇಷ್ಟರು ಇದ್ದರು. ಮಾಜಿ ಸಿಎಂ ಜಗದೀಶ ಶೆಟ್ಟರ್, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ್, ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು,ಆಗಮಿಸಿ ಉದ್ಯಮ ಯಶಸ್ವಿಯಾಗಲೆಂದು ಹಾರೈಸಿದರು.
’ತೋಳನಕೆರೆಗೆ ವಾಯು ವಿಹಾರಕ್ಕೆ ಬರುವ ನಾವು ಎರಡನೆ ದಿನವೇ ಇಲ್ಲಿನ ತಿಂಡಿಯನ್ನು ಸವಿದಿದ್ದು ವಿವಿಧ ಬಗೆಯ ದೋಸೆಗಳಂತೂ ಸೂಪರ್.’
ಐ.ಐ.ವಾಲಿ
ರವಿ ನಗರ ನಿವಾಸಿ