*ಕೇಂದ್ರ ಸಚಿವ ಜೋಶಿಯವರಿಂದ ರಾಮೇಶ್ವರ ಶಿವಲಿಂಗ ದರ್ಶನಕ್ಕೆ ಆಯೋಜನೆ/ ಇಡಿ ರಾತ್ರಿ ಸಂಗೀತ ಶಿವಾರಾಧನೆ*
ಹುಬ್ಬಳ್ಳಿ : ಮಹಾಶಿವರಾತ್ರಿ ಅಂಗವಾಗಿ ದಿ. 8ರಂದು ಇಲ್ಲಿನ ದೇಶಪಾಂಡೆ ನಗರದ ಕರ್ನಾಟಕ ಜಿಮಖಾನ ಮೈದಾನದಲ್ಲಿ ಹಿಂದುಗಳ ಪವಿತ್ರ ಕ್ಷೇತ್ರ ಅಯೋಧ್ಯಾ ಪ್ರಭು ಶ್ರೀರಾಮ ಮಂದಿರದ ಮಾದರಿ ಮೈದಳೆಯಲಿದೆ.
ಈ ಮಂದಿರದಲ್ಲಿ ಶ್ರೀ ರಾಮೇಶ್ವರ ಶಿವಲಿಂಗದ ದಿವ್ಯ ದರ್ಶನ ಅವಳಿ ನಗರದ ಎಲ್ಲ ಶಿವಭಕ್ತರಿಗೆ ದರ್ಶನ
ಮಾಡಿಸುವ ಸಂಕಲ್ಪದೊಂದಿಗೆ ಮಹಾಶಿವರಾತ್ರಿಯನ್ನು ಆಚರಿಸಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯುವರು ಕಲ್ಪಿಸಿದ್ದು ಕಳೆದ ಬಾರಿಯೂ ಅವಳಿನಗರದ ಜನತೆಗೆ ಕಾಶಿ ವಿಶ್ವನಾಥನ ದರ್ಶನ ಭಾಗ್ಯ ಕಲ್ಪಿಸಿದ್ದರು.
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿದ್ದು ಅವರಿಗೆ ಧಾರವಾಡ ಟಿಕೆಟ್ ಬಹುತೇಕ ನಿಶ್ಚಿತವಾಗಿದ್ದರೂ ಮೊದಲ ಪಟ್ಟಿಯಲ್ಲಿ ಬಿಡುಗಡೆಯಾಗಿಲ್ಲ. ಹೀಗಿದ್ದರೂ ಅವರು ಶಿವರಾತ್ರಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಮುಂದಾಗಿದ್ದು ಅವರೂ ಪಾಲ್ಗೊಳ್ಳಲಿದ್ದಾರೆ.
ದಿ. 8ರಂದು ಬೆಳಿಗ್ಗೆ ಮಹಾಪೂಜೆ,ಪಂಡಿತ
ರುದ್ರಮುನಿ ಮಹಾಸ್ವಾಮಿಗಳು, ಹಿರೇಮಠ ಇವರ ದಿವ್ಯ ನೇತೃತ್ವದಲ್ಲಿ ಮಹಾಶಿವನ ಪೂಜಾ ಕಾರ್ಯಗಳು ಜರುಗಲಿವೆ.
ಶಿವಪುರಾಣದಲ್ಲಿ ಪರಶಿವನು ಪಾರ್ವತಿಗೆ ‘ಶಿವರಾತ್ರಿಯಂದು ನನ್ನನ್ನುಪೂಜಿಸುವ ಭಕ್ತರಿಗೆ ನಾನು ವಿಶೇಷವಾಗಿ ಅನುಗ್ರಹಿಸುತ್ತೇನೆ’ ಎಂದು
ಸ್ವತಃ ಹೇಳಿದ್ದಾನೆ ಅಂತೆಯೇ ಕೈಲಾಸವಾಸಿ ಶಿವನ ಪರಮಪ್ರಿಯ
ಮಹಾಶಿವರಾತ್ರಿಯನ್ನು ಸಾವಿರಾರು ಶಿವಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಶೇಷವಾಗಿ ಆಚರಿಸುವಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮಹಾಶಿರಾತ್ರಿಯ ದಿನ ನಮ್ಮೆಲ್ಲರ ಪುಣ್ಯಕ್ಷೇತ್ರ ಶ್ರೀ ರಾಮೇಶ್ವರ ಶಿವಲಿಂಗ
ಪ್ರತಿಷ್ಠಾಪನೆಯ ಮೂಲಕ ಭಕ್ತರಿಗೆಲ್ಲ ದಿವ್ಯದರ್ಶನ ಭಾಗ್ಯವನ್ನು
ಮತ್ತು ಅಯೊಧ್ಯೆಯ ಪ್ರಭು ಶ್ರೀ ರಾಮನ ದೇವಸ್ಥಾನದ
ಮಾದರಿಯನ್ನು ಈ ಬಾರಿ ಹುಬ್ಬಳ್ಳಿಯಲ್ಲಿ ನಿರ್ಮಿಸಲಾಗಿದೆ.
ಶಿವ ಭಕ್ತರಿಗೆ ಇದೊಂದು ಅವಕಾಶವೆಂದು ಭಾವಿಸಿರುವ
ಜೋಶಿಯವರು ಮಹಾಶಿವರಾತ್ರಿಯನ್ನು ಆಚರಿಸುವ ಮೂಲಕ ಇಡೀ ನಗರದ ಶಿವನ ಭಕ್ತರನ್ನು ಶಿವಧ್ಯಾನದ ಸಂಗೀತ ಸರೋವರದಲ್ಲಿ
ಮೀಯಲು ಅವಕಾಶ ಮಾಡಿಕೊಟ್ಟಿದ್ದಾರೆ.
ರಾಮೇಶ್ವರನನ್ನು ಪ್ರತ್ಯಕ್ಷವಾಗಿ ಕಾಣಲು ಹಾಗೂ ಕಣ್ಮನಸೆಳೆಯಲು ಜಗಮಗಿಸುವ ವಿದ್ಯುತ್ ದ್ವೀಪದ ಅಲಂಕಾರವನ್ನೂ ಸಹ ಮಾಡಲಾಗಿದೆ. ಈ ಸಮಯದಲ್ಲಿ ಭಕ್ತರಿಗೆ ಅಹೋರಾತ್ರಿ ಪ್ರಸಾದ ವಿನಿಯೋಗ ಇರುತ್ತದೆ. ಇದರೊಂದಿಗೆ ಭಕ್ತರಿಗೆ ಉಚಿತವಾಗಿ ಪಂಚಮುಖಿ ರುದ್ರಾಕ್ಷಿವಿತರಣೆ ಮಾಡಲಾಗುವುದು.ಅಂದು ಸಂಜೆ 6-30ಕ್ಕೆ ಕೇಂದ್ರ ಸಚಿವ ಜೋಶಿ ಅವರು‘ಸಂಗೀತದೊಂದಿಗೆ ಶಿವನಾಮ ಸ್ಮರಣೆ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಾಡಿನ ಹೆಸರಾಂತ ವಿವಿಧ ಕಲಾವಿದರುಗಳಿಂದ ಭಕ್ತಿಸಂಗೀತದ ರಸದೌತಣ ಏರ್ಪಡಿಸಲಾಗಿದೆ. ಸಂಗೀತ ಶಿವಾರಾಧನೆ ಹೆಸರಿನಡಿಯಲ್ಲಿನಡೆಯುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ರಾತ್ರಿ 8 ಗಂಟೆಯಿಂದ ಗಾಯಕಯವ ಕಲಾವಿದ ಸಿದ್ಧಾರ್ಥ ಬೆಳ್ಮಣ್ಣು ಹಾಗೂ ತಂಡದಿಂದ ಶಿವ ಸಂಗೀತ’ ಹಾಗೂಹುಬ್ಬಳ್ಳಿಯ ಕಲಾಸುಜಯ ತಂಡದಿಂದ ಸಂಜೆ 7 ರಿಂದ 8 ರ ವರೆಗೆ ಶಿವತಾಂಡವ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ.