*ಏ.2ರ ಭಕ್ತರ ಸಭೆಯತ್ತ ಎಲ್ಲರ ಚಿತ್ತ / ಬಿಜೆಪಿ ಪಾಳಯದಲ್ಲಿ ನಡುಕ*
ಹುಬ್ಬಳ್ಳಿ : ಧಾರವಾಡ ಕ್ಷೇತ್ರದ ಅಭ್ಯರ್ಥಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಬದಲಿಸಲು ನೀಡಿದ ಬಿಜೆಪಿ ಹೈಕಮಾಂಡ್ ಗೆ ನೀಡಿದ ಗಡುವು ಮುಗಿದಿದ್ದು ಆದರೆ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಜೋಶಿಯವರನ್ನು ಸೋಲಿಸುವುದು ಅನಿವಾರ್ಯವಾಗಿದೆ ಎಂದು ರಾಜ್ಯದಾದ್ಯಂತ ದೊಡ್ಡ ಮಟ್ಟದ ಭಕ್ತರನ್ನು ಹೊಂದಿರುವ ಶಿರಹಟ್ಟಿಯ ಫಕ್ಕಿರೇಶ್ವರ ಭಾವೈಕ್ಯತಾ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಇಂದು ಮತ್ತೆ ಗುಡುಗಿದ್ದಾರೆ.
ಪೃಥ್ವಿ ಪೆರಡೈಸ್ ಹೊಟೆಲ್ನ ಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜೋಶಿಯವರಿಂದ ಕೇವಲ ಲಿಂಗಾಯತ ಸಮಾಜ ನೊಂದಿಲ್ಲಾ .ಎಲ್ಲಾ ಸಮಾಜದವರು ಅವರಿಂದ ನೊಂದಿದ್ದಾರೆ. ತಮ್ಮ ಹೇಳಿಕೆ ಕೊಟ್ಟ ನಂತರ ಬಹುಸಂಖ್ಯಾತ ಅನೇಕ ನಾಯಕರು ದೂರವಾಣಿ ಕರೆ ಮಾಡಿ, ಪ್ರತ್ಯಕ್ಷ ಹಾಗೂ ಪರೋಕ್ಷ ಬೆದರಿಸುವ ಕೆಲಸ ಕೂಡ ಮಾಡಿದ್ದಾರೆ . ಭಕ್ತ ಸಮೂಹ
ಒತ್ತಡಕ್ಕೆ ಮಣಿಯಬಹುದೇ ಎಂಬ ದುಗುಡದಲ್ಲಿದೆ. ಆದರೆ ನಾನು ಇಟ್ಟ ಹೆಜ್ಜೆ ಹಿಂದೆ ಸರಿಯುವುದಿಲ್ಲ.
ಜೋಶಿಯವರು ಮಾತ್ರ ಸೋಲಲೇ ಬೇಕು ಎಂದರು.
ನಾಡಿದ್ದು ಏ.2ರಂದು ಧಾರವಾಡದಲ್ಲಿ ಬೆಳಿಗ್ಗೆ ಭಕ್ತರ ಸಭೆ ಕರೆದಿದ್ದು, ಅಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರಲ್ಲದೇ ತಾವು ಯಾವುದೇ ಪಕ್ಷದ ಪರ ವಿರೋಧಿಗಳು ಅಲ್ಲ ಎಂದೂ ಸ್ಪಷ್ಟಪಡಿಸಿದರು.
ಇದು ನನ್ನ ವೈಯಕ್ತಿಕ ತಿರ್ಮಾನ. ಉಳಿದ ಯಾವುದೇ ಮಠದವರಿಗೆ ಸಂಬಂದಿಸಿದ್ದಲ್ಲ. ಜೋಶಿಯವರಿಗೆ ಹತ್ತು ವರ್ಷ ಅವರಿಗೆ ನಾವು ಸಮಯ ಕೊಟ್ಟಿದ್ದೇವೆ. ಮತ್ತೆ ಅವರಿಗೆ ಅವಕಾಶ ಕೊಡುವ ಪ್ರಮೇಯ ಬರುವುದಿಲ್ಲ ಎಂದು ಹೇಳಿದರು.
ಕೇಂದ್ರ ಸಚಿವರು ಜೋಷಿ ನಮ್ಮ ಶಕ್ತಿಯನ್ನ ದಮನ ಮಾಡುವ ಕಾರ್ಯ ಮಾಡುತ್ತಿದ್ದಾರೆ.ಅನೇಕ ಸ್ವಾಮೀಜೀಗಳಿಗೆ ಜೋಶಿಯವರು ಒತ್ತಡಕ್ಕೆ ಸಿಲುಕಿಸಿ ಹೇಳಿಕೆ ಕೊಡಿಸುತ್ತಿದ್ದಾರೆ
ಧಾರವಾಡ ಮುರುಘಾಮಠದ ಸ್ವಾಮೀಜಿಗಳ ವಿಚಾರದಲ್ಲಿ ಇದು ಆಗಿದೆ.ಅವರ ಮೇಲೆ ದಾಳಿ ಮಾಡಿ ಹೆದರಿಸುವ ಕೆಲಸ ಮಾಡಿದ್ದಾರೆಂದರು.
ಕೆಲ ಲಿಂಗಾಯತ ಶಾಸಕರು ಜೋಶಿ ಅವರು ನಮ್ಮನ್ನ ಕೈಹಿಡಿದು ಕರೆದುಕೊಂಡು ಬಂದು ಶಾಸಕರನ್ನಾಗಿ ಮಾಡಿದ್ದಾರೆ ಎನ್ನುತ್ತಿದ್ದಾರೆ.ಅವರು ಶಾಸಕರು ಆಗಲು ಜೋಶಿ ಕಾರಣರಲ್ಲ ಮತದಾರರು.ಅವರನ್ನ ಅವಕಾಶ ಹಾಗೂ ಕೈಹಿಡಿದುಕೊಂಡು ಬಂದಿರುವುದು ಪಕ್ಷ ಹೊರತು ಜೋಶಿಯವರಲ್ಲ ಎಂದು ದಿಂಗಾಲೇಶ್ವರ ಸ್ವಾಮೀಜಿ ಸ್ಪಷ್ಟ ಪಡಿಸಿದರಲ್ಲದೇ
ಬಿಜೆಪಿಯವರಿಗೆ ಜೋಶಿ ಅವರು ಅನಿವಾರ್ಯವಾದರೆ ನಮಗೆ ಇಲ್ಲಿನ ನೊಂದ ಜನತೆ ಅನಿವಾರ್ಯ ಎಂದರು.
ಕ್ಷಮಿಸುವಂತೆ ಕೇಳಲು ಬಂದವರಿಗೆ ಸೂಕ್ತ ಉತ್ತರ ನೀಡಿರುವೆ
ನಮ್ಮ ವಿರುದ್ದ ಎಲ್ಲಾ ಶಸ್ತ್ರ ವಿದ್ಯೆ ಪ್ರಯೋಗ ಮಾಡುತ್ತಿದ್ದಾರೆ
ಅವುಗಳನ್ನ ಎದುರಿಸಲು ಸಿದ್ಧ ಎನ್ನುವ ಮೂಲಕ ಎಲ್ಲರೂ ದಿ.2ವರೆಗೆ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದಾರೆ.