*ಮುನವಳ್ಳಿ ಮೂಲದ ಹಳೆ ವಿದ್ಯಾರ್ಥಿಯಿಂದ ದುಷ್ಕೃತ್ಯಕ್ಕೆ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಪುತ್ರಿ ಬಲಿ/ ಆರೋಪಿ ವಿದ್ಯಾನಗರ ಪೊಲೀಸರ ವಶದಲ್ಲಿ*
ಹುಬ್ಬಳ್ಳಿ: ನಗರದ ಪ್ರತಿಷ್ಟಿತ ಬಿವಿಬಿ ಕಾಲೇಜು ಕ್ಯಾಂಪಸ್ ನಲ್ಲೇ ಎಂಸಿಎ ವಿದ್ಯಾರ್ಥಿನಿಯನ್ನು ಅದೇ ಕಾಲೇಜಿನ ಹಳೆಯ ವಿದ್ಯಾರ್ಥಿ ಇಂದು ಸಂಜೆ ವೇಳೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನಯ್ಯಾ ಹಿರೇಮಠ್ ಎಂಬುವವರ ಪುತ್ರಿ ನೇಹಾ ಹಿರೇಮಠ (24) ಸಾವನ್ನಪ್ಪಿದವಳಾಗಿದ್ದಾಳೆ.
ಬಿವಿಬಿಯಲ್ಲಿ ಎಂಸಿಎ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದರೆ ಇಂದು ಕಾಲೇಜಿನಲ್ಲಿ ಪರೀಕ್ಷೆಗೆ ಬಂದಿದ್ದ ವೇಳೆ ಮಾಸ್ಕ್ ಧರಿಸಿ ಬಂದು ಬೆಳಗಾವಿ ಜಿಲ್ಲೆಯ ಮುನವಳ್ಳಿ ಮೂಲದ ಫಯಾಜ್ ಕುಂದುನಾಯ್ಕ ಏಕಾಏಕಿ ಕುತ್ತಿಗೆಗೆ ಚಾಕು ಹಾಕಿದ್ದು, ಬಳಿಕ ಬೆನ್ನು, ಹೊಟ್ಟೆಗೆ 9ಬಾರಿ ಇರಿದಿದ್ದಾನೆ.
ಅಷ್ಟಾಗಲೇ ನೇಹಾ ರಕ್ತದ ಮಡುವಿನಲ್ಲಿ ಬಿದಿದ್ದು, ಕೂಡಲೇ ಸ್ಥಳೀಯ ಸಹಪಾಠಿಗಳು ಹಾಗೂ ಕಾಲೇಜಿನ ಪ್ರೊಫೆಸರ್’ಗಳು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಚಿಕಿತ್ಸೆ ಫಲಿಸದೇ ನೇಹಾ ಮೃತಪಟ್ಟಿದ್ದಾಳೆ.ಮೃತ ನೇಹಾಳ ತಾಯಿ ಮಗಳನ್ನು ಕರೆ ತರಲು ಕ್ಯಾಂಪಸ್ ದಲ್ಲಿ ಇದ್ದಾಗಲೇ ಫಟನೆ ನಡೆದಿದೆ.
ಕಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದ್ದು, ಪೋಲಿಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದು, ಆರೋಪಿ ವಶಕ್ಕೆ ತೆಗೆದುಕೊಂಡಿದ್ದಾರೆ. ಈತ ಇಲ್ಲಿಯೇ ಬಿಸಿಎ ಮಾಡಿದ್ದ.
ಫಯಾಜ್ ಕೆಲ ದಿನಗಳಿಂದ ನೇಹಾ ಬೆನ್ನು ಬಿದ್ದಿದ್ದ. ಆದರೆ ನೇಹಾ ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ
ಕೊಲೆ ಮಾಡಿ ಪರಾರಿಯಾಗುತ್ತಿದ್ದಾಗ ಫಯಾಜ್ನ್ನ್ನು ಅಲ್ಲಿದ್ದ ವ್ಯಕ್ತಿಗಳು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.ಈತ ಮುನವಳ್ಳಿ ಮೂಲದ ಶಿಕ್ಷಕ ದಂಪತಿ ಪುತ್ರ ಎನ್ನಲಾಗಿದೆ.
ವಿಷಯ ತಿಳಿದು ಕಿಮ್ಸ್ ಆಸ್ಪತ್ರೆಗೆ ಶಾಸಕ ಪ್ರಸಾದ್ ಅಬ್ಬಯ್ಯ ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿದ್ದಾರೆ.