*ನಗರಸಭಾ ಅಧ್ಯಕ್ಷೆ ಪುತ್ರ ಸಹಿತ ಕೊಪ್ಪಳ ಮೂಲದವರ ಕಗ್ಗೊಲೆ*
ಗದಗ : ಇಲ್ಲಿನ ದಾಸರ ಓಣಿ ನಿವಾಸಿ ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಮನೆಯಲ್ಲಿ ಇಂದು ಬೆಳಗಿನ ಜಾವ ಅವರ ಪುತ್ರ ಸೇರಿದಂತೆ ನಾಲ್ವರನ್ನು ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿದ್ದು ಇಡೀ ಅವಳಿನಗರವೇ ಬೆಚ್ಚಿ ಬೀಳುವಂತಾಗಿದೆ.
ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಬಾಕಳೆ (27)ಕೊಪ್ಪಳದಿಂದ ಬಂದ ಸಂಬಂಧಿಗಳಾದ ಪರಶುರಾಮ (55), ಅವರ ಪತ್ನಿ ಲಕ್ಷ್ಮೀ (45) ಪುತ್ರಿ ಆಕಾಂಕ್ಷಾ (16 ) ಕೊಲೆಯಾದವರಾಗಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರೆಲ್ಲರೂ ಮನೆಯ ಮೇಲಿನ ಕೊಠಡಿಯಲ್ಲಿ ಮಲಗಿದ್ದರೆನ್ನಲಾಗಿದೆ.
ಮಾಜಿ ನಗರಸಭಾ ಉಪಾಧ್ಯಕ್ಷರಾದ ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್ನ ಮದುವೆ ನಿಶ್ಚಿತಾರ್ಥ( ದಿ.17) ಕಾರ್ಯಕ್ರಮಕ್ಕೆ ಬಂದ ಸಂಬಂಧಿಗಳಲ್ಲದೇ ವಿವಾಹವಾಗಲಿದ್ದ ಯುವಕನೂ ಕೊಲೆಯಾಗಿದೆ. ಮನೆಯ ಮೇಲೆ ಗದ್ದಲ ಕೇಳಿ ಪ್ರಕಾಶ ಬಾಕಳೆ ಪೊಲೀಸರಿಗೆ ಕರೆ ಮಾಡಿದ್ದು ಪೊಲೀಸರಿಗೆ ಕರೆ ಮಾಡಿದ ತಕ್ಷಣ ಪರಾರಿಯಾಗಿದ್ದಾರೆ. ಸಂಬಂಧಿಗಳಿಂದಲೇ ಈ ಕೃತ್ಯ ನಡೆದಿರಬಹುದೆಂದು ಸಂಶಯಿಸಲಾಗಿದೆ. ಮೃತ ದೇಹಗಳ ಮೇಲೆ ಆಭರಣಗಳು ಹಾಗೆ ಇದ್ದು ಇದು ದರೋಡೆಗಾಗಿ ನಡೆದ ಘಟನೆ ಅಲ್ಲ ಎನ್ನಲಾಗುತ್ತಿದೆ.
ನಡೆದ ತಕ್ಷಣ ಸ್ಥಳಕ್ಕೆ ಎಸ್ ಪಿ ಬಿ.ಎಸ್. ನೇಮಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರಲ್ಲದೇ ಬೆಳಿಗ್ಗೆ ಐಜಿಪಿ ವಿಕಾಸಕುಮಾರ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಶ್ವಾನದಳ, ಬೆರಳಚ್ಚು ತಂಡ ತಂಡಗಳು ಇಂಚಿಂಚೂ ಪರಿಶೀಲನೆ ನಡೆಸಿದೆ.
ಘಟನಾ ಸ್ಥಳಕ್ಕೆ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಸಹ ಭೇಟಿ ನೀಡಿದ್ದು ಕೊಲೆಗಡುಗಡುಕರ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು ಐಜಿಪಿ ವಿಕಾಸಕುಮಾರ ಎಸ್ ಪಿ ನೇತ್ರತ್ವದಲ್ಲಿ ಐದು ತಂಡ ರಚಿಸಿದ್ದು ಶೀಘ್ರ ಬಂಧಿಸುವ ಭರವಸೆ ನೀಡಿದ್ದಾರೆ.
ನಿನ್ನೆ ಹುಬ್ಬಳ್ಳಿಯಲ್ಲಿ ಎಂ ಸಿಎ ವಿದ್ಯಾರ್ಥಿನಿ ಭೀಕರ ಕೊಲೆ ಬೆನ್ನಲ್ಲೇ ಗದುಗಿನಲ್ಲಿ ನಾಲ್ವರ ಹತ್ಯೆ ನಡೆದಿದೆ.