*ಸೆಂಟ್ರಲ್, ಪಶ್ಚಿಮದಲ್ಲಿ ಕಡಿಮೆ ವೋಟಿಂಗ್ ಬಿಜೆಪಿಗೆ ಚಿಂತೆ / ಗ್ರಾಮೀಣದಲ್ಲಿ ಕೈಗೆ ಗೃಹ ಲಕ್ಷ್ಮಿಯರ ಬಲ?*
*ಹುಬ್ಬಳ್ಳಿ:* ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನವಾಗಿದೆ. ರಾತ್ರಿ 9 ಗಂಟೆಯವರಗೆ ದೊರೆತ ಅಧಿಕೃತ ಮಾಹಿತಿಗಳ ಪ್ರಕಾರ ಅಂತಿಮವಾಗಿ ಶೇ. 74.35 ರಷ್ಟು ಮತದಾನವಾಗಿದೆ.
ಮೋದಿ ಗ್ಯಾರಂಟಿ ಮತ್ತು ಸಿದ್ದರಾಮಯ್ಯ ಗ್ಯಾರಂಟಿ ನಡುವೆಣ ಸುಮಾರು ಎಂದೇ ಬಿಂಬಿತವಾಗಿರುವ ಸಮರದಲ್ಲಿ ಬಿಜೆಪಿಯ ಉಕ್ಕಿನ ಕೋಟೆ ಗಳಾಗಿರುವ ಹುಬ್ಬಳ್ಳಿ ಧಾರವಾಡ ಸೆಂಟ್ರಲ್, ಪಶ್ಚಿಮದಲ್ಲಿ.ಶೇ.70ರ ಗಡಿ ದಾಟದಿರುವುದು ಸಣ್ಣ ಆತಂಕದ ಗೆರೆಗೆ ಕಾರಣವಾಗಿದೆ.
ಸಂಜೆ 5 ಗಂಟೆವರೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶೇ.67.15 ಮತದಾನವಾಗಿತ್ತು. ರಾತ್ರಿ 9 ಗಂಟೆವರೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ ಶೇ. 74.35 ಮತದಾನವಾಗಿದೆ.
ನವಲಗುಂದ ಕ್ಷೇತ್ರದಲ್ಲಿ ಶೇ. 76.92 ರಷ್ಟು ಮತದಾನವಾಗಿದೆ.
ಕುಂದಗೋಳ ಕ್ಷೇತ್ರದಲ್ಲಿ ಶೇ. 80 ರಷ್ಟು ಮತದಾನವಾಗಿದೆ.
ಧಾರವಾಡ ಕ್ಷೇತ್ರದಲ್ಲಿ ಶೇ. 75.83 ರಷ್ಟು ಮತದಾನವಾಗಿದೆ.
ಹುಬ್ಬಳ್ಳಿ ಧಾರವಾಡ (ಪೂರ್ವ) ಕ್ಷೇತ್ರದಲ್ಲಿ ಶೇ. 73.48 ರಷ್ಟು ಮತದಾನವಾಗಿದೆ.
ಹುಬ್ಬಳ್ಳಿ ಧಾರವಾಡ (ಸೆಂಟ್ರಲ್) ಕ್ಷೇತ್ರದಲ್ಲಿ ಶೇ. 66.85ರಷ್ಟು ಮತದಾನವಾಗಿದೆ.
ಹುಬ್ಬಳ್ಳಿ ಧಾರವಾಡ (ಪಶ್ಚಿಮ) ಕ್ಷೇತ್ರದಲ್ಲಿ ಶೇ. 67.16ರಷ್ಟು ಮತದಾನವಾಗಿದೆ.
ಕಲಘಟಗಿ ಕ್ಷೇತ್ರದಲ್ಲಿ ಶೇ. 82.26 ರಷ್ಟು ಮತದಾನವಾಗಿದೆ.
ಶಿಗ್ಗಾಂವ ಕ್ಷೇತ್ರದಲ್ಲಿ ಶೇ. 77.24 ರಷ್ಟು ಮತದಾನವಾಗಿದೆ.
ಎಲ್ಲ ಅಭ್ಯರ್ಥಿಗಳು, ಶಾಸಕರು ಮತದಾನ ಮಾಡಿದರೆ, ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಕೋರ್ಟ್ ಆದೇಶದ ಮೇರೆಗೆ ಬಂದು ಹಕ್ಕು ಚಲಾಯಿಸಿದರು.