*ಹುಬ್ಬಳ್ಳಿಯಲ್ಲಿ ಒಂದೇ ದಿನ ಎರಡು ತಿರುವು*
ಹುಬ್ಬಳ್ಳಿ : ವಾಣಿಜ್ಯ ರಾಜಧಾನಿಯಲ್ಲಿ ನಡೆದ ನೇಹಾ ಹಿರೇಮಠ ಮತ್ತು ಅಂಜಲಿ ಹತ್ಯೆ ಪ್ರಕರಣಗಳು ಸಿಐಡಿ ತನಿಖೆ ನಡೆಯುತ್ತಿದ್ದು, ಇಂದು ಎರಡು ಮಹತ್ವದ ಘಟನೆಗಳು ನಡೆದಿದ್ದು ಪ್ರೀತಿ ನಿರಾಕರಿಸಿದ್ದಕ್ಕೆ ಅಂಜಲಿ ಹತ್ಯೆ ಮಾಡಿದ ವಿಕೃತ ಗಿರೀಶ ಸಾವಂತ (ವಿಶ್ವ)ನನ್ನು ಜೂ.16ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಇನ್ನೊಂದೆಡೆ ರಾಷ್ಟ್ರದಾದ್ಯಂತ ಸುದ್ದಿ ಮಾಡಿದ್ದ ಬಿವಿಬಿ ವಿದ್ಯಾರ್ಥಿನಿ ನೇಹಾ ಎಸ್ಸಿ ( ಬೇಡ ಜಂಗಮ) ಪ್ರಮಾಣ ಪತ್ರ ಪಡೆದಿರುವ ದಾಖಲೆಯನ್ನು ಸಮತಾ ಸೇನೆಯ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಬಿಡುಗಡೆ ಮಾಡಿದ್ದಾರೆ.
ಸಿಐಡಿ ಕಸ್ಟಡಿ ಅವಧಿ ಇಂದು ಮುಕ್ತಾಯವಾದ ಹಿನ್ನೆಲೆಯಲ್ಲಿ ಗಿರೀಶನನ್ನು ಹುಬ್ಬಳ್ಳಿಯ ೩ನೇ ಹೆಚ್ಚುವರಿ ದಿವಾಣಿ ಮತ್ತು ಜೆಎಂಎಫ್ಸಿ ಕೋರ್ಟಗೆ ಹಾಜರುಪಡಿಸಿದ್ದು, ಕೋರ್ಟ ಜೂ. 16ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇನ್ನೊಂದೆಡೆ ನೇಹಾ ಹಿರೇಮಠ ಹತ್ಯೆಯ ತನಿಖೆ ನಡೆದಿರುವಾಗಲೇ ಪ್ರಬಲ ಲಿಂಗಾಯತ ಸಮಾಜದ ಪಾಲಿಕೆ ಸದಸ್ಯ ನಿರಂಜನ ಹಿರೇiಠ ಪುತ್ರಿ ಪರಿಶಿಷ್ಠ ಜಾತಿ ( ಎಸ್ ಸಿ) ಪ್ರಮಾಣ ಪತ್ರ ಪಡೆದಿರುವುದನ್ನು ಸಮತಾ ಸೇನಾ ಹಾಗೂ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ದಾಖಲೆ ಬಿಡುಗಡೆ ಮಾಡಿದ್ದು ಮುಖ್ಯಮಂತ್ರಿ , ಗೃಹ ಸಚಿವರಿಗೆ ಪತ್ರ ಬರೆದು ಸರ್ಟಿಫಿಕೆಟ್ ರದ್ದತಿಗೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಆಗ್ರಹಿಸಿದೆ.
ನಿರಂಜನ ಹಿರೇಮಠ ಹುಬ್ಬಳ್ಳಿಯ ರಹವಾಸಿಯಾಗಿದ್ದು, ಆದರೆ ಬೆಂಗಳೂರಿನ ಹೊಂಗಸಂದ್ರದ ವಿಳಾಸದ ಮೇಲೆ ಬೇಡ ಜಂಗಮ ( SC ) ಪ್ರಮಾಣ ಪತ್ರ ಪಡೆದಿದ್ದು ತಕ್ಷಣ ಇದನ್ನು ರದ್ದುಪಡಿಸಿ ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಎ ಶಿಸ್ತುಕ್ರಮ ವಹಿಸಲು ಡಿಸಿಆರ್ಇ ಎಡಿಜಿಪಿ ಬೆಂಗಳೂರ ಅವರಲ್ಲಿ ದೂರು ದಾಖಲಿಸದಿದ್ದಲ್ಲಿ ಬೀದಿಗಿಳಿಯುವ ಎಚ್ಚರಿಕೆ ನೀಡಿದ್ದಾರಲ್ಲದೇ ನಿರಂಜನ ಅವರ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆಗ್ರಹಿಸಿದೆ.