*ತಿಂಗಳೊಳಗೆ ಪಟ್ಟಿ ನೀಡಲು ಸೂಚನೆ*
ಹುಬ್ಬಳ್ಳಿ : ರಾಜ್ಯದ ವಿವಿಧ ನಿಗಮಗಳ ಮತ್ತು ಮಂಡಳಿಗಳಿಗೆ ನಿರ್ದೇಶಕರನ್ನು, ಸದಸ್ಯರನ್ನು ಆಯ್ಕೆ ಮಾಡಲು ಗೃಹ ಸಚಿವ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಮೂವರ ಸಮಿತಿಯೊಂದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಚಿಸಿದ್ದಾರೆ.
ರಾಜ್ಯದ ಕಾರ್ಮಿಕ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಮತ್ತು ಶಿವಾಜಿ ನಗರ ಶಾಸಕ ರಿಜ್ವಾನ ಅರ್ಷದ ಸಮಿತಿಯ ಸದಸ್ಯರಾಗಿದ್ದಾರೆ.
ಲೋಕಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ಸರ್ಕಾರ ಅನೇಕ ಶಾಸಕರಿಗೆ ಅಲ್ಲದೇ 44 ಕಾರ್ಯಕರ್ತರಿಗೆ ನಿಗಮ ಮತ್ತು ಮಂಡಳಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ನೀಡಿತ್ತಾದರೂ ನಿರ್ದೇಶಕರನ್ನು ಮತ್ತು ಸದಸ್ಯರನ್ನು ನೇಮಕ ಮಾಡಿರಲಿಲ್ಲ.
ಸಮಿತಿಯು ಒಂದು ತಿಂಗಳೊಳಗೆ ನಿರ್ದೇಶಕರು ಮತ್ತು ಸದಸ್ಯರ ಪಟ್ಟಿ ನೀಡುವಂತೆ ಸೂಚಿಸಲಾಗಿದೆ.ಈಗಾಗಲೇ ಡಿಸಿಸಿ ಸಮಿತಿಗಳು ಅಲ್ಲದೇ ಉಸ್ತುವಾರಿ ಸಚಿವರು ಮುಖಂಡರು ಅನೇಕರ ಹೆಸರುಗಳನ್ನು ಸಲ್ಲಿಸಿವೆ.
ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ, ವಾಯುವ್ಯ ಸಾರಿಗೆ, ಮಹಾನಗರ ಪಾಲಿಕೆ ನಾಮನಿರ್ದೇಶನಕ್ಕೆ ಪೈಪೋಟಿ ನಿಶ್ಚಿತವಾಗಿದೆ.