*ಮುಥಾ ವಾಗಮಲ್ ಬುರಾಜಿ ಸಮೂಹದ ಕಿರೀಟಕ್ಕೆ ಮತ್ತೊಂದು ಗರಿ*
ಹುಬ್ಬಳ್ಳಿ : ವಾಣಿಜ್ಯ ರಾಜಧಾನಿಯ ಪ್ರಮುಖ ಸಾಫ್ಟ್ವೇರ್ ಕಂಪನಿಯಾದ MWB ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇತ್ತೀಚೆಗೆ ಕರ್ನಾಟಕ ಸರ್ಕಾರದಿಂದ ಗೌರವಾನ್ವಿತ ಎಲಿವೇಟ್ 2023-24 ಪುರಸ್ಕಾರದೊಂದಿಗೆ ಗೌರವಿಸಲ್ಪಟ್ಟಿದೆ.
ಈ ಪ್ರತಿಷ್ಠಿತ ಮನ್ನಣೆಯು ಸಾಫ್ಟ್ವೇರ್ ಅಭಿವೃದ್ಧಿ, ಐಟಿ ತಂತ್ರಜ್ಞಾನ ಮತ್ತು ಸಾಫ್ಟವೇರ್ ಕ್ಷೇತ್ರದಲ್ಲಿ ಕಂಪನಿಯ ಅತ್ಯುತ್ತಮ ಕೊಡುಗೆಗಳನ್ನು ನೀಡುವಲ್ಲಿ ಹೊಸ ಹೆಜ್ಜೆ ಇಡುತ್ತಿರುವ ಹಿನ್ನೆಲೆಯಲ್ಲಿ ನೀಡಲ್ಪಟ್ಟಿದೆ.
ಸಂಸ್ಥೆಯ ನೈಪುಣ್ಯ ಮತ್ತು ಸಂಶೋಧನಾತ್ಮಕ ಯೋಜನೆಗಳು ಕೈಗಾರಿಕೆ, ಸಗಟು, ಚಿಲ್ಲರೆ ವ್ಯಾಪಾರ, ಸೇವೆ, ಆತಿಥ್ಯ ಮತ್ತು ಆರೋಗ್ಯ ರಕ್ಷಣೆ, ವೇಲನೆಸ್ ಸೇರಿದಂತೆ ವಿವಿಧ, ವ್ಯಾಪಾರ, ವಾಣಿಜ್ಯ, ಕೈಗಾರಿಕೆ ಮತ್ತು ಸೇವಾ ವಲಯಗಳಿಗೆ ಅಗತ್ಯ ಇರುವ ಮಾಹಿತಿ ತಂತ್ರಜ್ಞಾನ ಸಾಫ್ಟ್ವೇರ್ ಹಾಗೂ ಮೊಬೈಲ್ ಅಪ್ಲಿಕೇಶನ್ ಗಳ ತಯಾರಿಕೆ, ಮತ್ತು ಈ ವಲಯಗಳ ಬೇಡಿಕೆಗಳಿಗೆ ಪರಿಹಾರಗಳನ್ನು ಪೂರೈಸುತ್ತಿದೆ.
ಮುಂದುವರಿದ ವೆಬ್ ವಿನ್ಯಾಸ ಮತ್ತು ಡಿಜಿಟಲ್ ಮಾರ್ಕೆಟಿಂಗ್ನಲ್ಲಿ ಪರಿಣತಿಯೊಂದಿಗೆ, ಕಂಪನಿಯು ವಿಸ್ತರಣೆಗೆ ಸಿದ್ಧವಾಗಿದೆ.ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಮುಖೇಶ್ ಬಾಫನಾ, ಸಹ-ಸಂಸ್ಥಾಪಕ ಮತ್ತು ತಾಂತ್ರಿಕ ಮುಖ್ಯಸ್ಥ ದಿನೇಶ್ ಜೈನ್ ಅವರೊಂದಿಗೆ ದಶಕಗಳ ಅನುಭವ ಮತ್ತು ಪರಿಣಿತಿ ಯೊಂದಿಗೆ ಯಶಸ್ಸಿನ ಪಥದಲ್ಲಿ ಸಾಗುತ್ತಿದೆ.
ಆಹಾರ ಧಾನ್ಯ, ಬೇಳೆ ಕಾಳುಗಳ ವ್ಯಾಪಾರದಲ್ಲಿ ದಕ್ಷಿಣ ಭಾರತದಲ್ಲೇ ದೂಡ್ಡ ಹೆಸರಾಗಿರುವ ರಮೇಶ್ ಬಾಫನಾ ಸಾರಥ್ಯದ ಮುಂದಾ ವಾಗಮಲ್ ಬುರಾಜಿ ಸಮೂಹದ ಸಂಸ್ಥೆಗಳಲ್ಲಿ MWB ಟೆಕ್ನಾಲಜಿಸ್ ಸಹ ಒಂದಾಗಿದೆ.ಪ್ರಶಸ್ತಿಯನ್ನು ಸಚಿವ ಪ್ರಿಯಾಂಕ ಖರ್ಗೆ ಯವರಿಂದ ಮುಖೇಶ್ ಬಾಫನಾ ಸ್ವೀಕರಿಸಿದರು.