ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ತಿಮ್ಮಸಾಗರ ರಸ್ತೆಯ ಪಾಳು ಬಿದ್ದ ಕಟ್ಟಡವೊಂದರಲ್ಲಿ ಅಫೀಮ್ ಮಾರಾಟ ಮಾಡುತ್ತಿದ್ದ ಮೂವರು ಅಂತರಾಜ್ಯ ಪೆಡಲರ್ ಗಳನ್ನು
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರ ನೇತೃತ್ವದ ತಂಡವು ಬಂಧಿಸಿದೆ.
ರಾಜಸ್ಥಾನ ಮೂಲದ ವಿಕಾಸ್ ಬಿಷ್ಣೊಯ್, ಜೈಸಾರಾಮ್ ಚೌದರಿ, ರಾಮರಾಮ ಬಿಷ್ಣೊಯ್ ಎಂಬ 03 ಡ್ರಗ್ಸ್ ಪೆಡ್ಲರ್ ಗಳನ್ನು ವಶಕ್ಕೆ ಪಡೆದು ಆರೋಪಿತರಿಂದ 23,500/-ರೂ ಮೌಲ್ಯದ 46 ಗ್ರಾಂ ಅಫೀಮು, ಒಂದು ದ್ವಿಚಕ್ರ ವಾಹನ, ಮೂರು ಮೊಬೈಲ್ ಗಳು, ಸೇರಿದಂತೆ ಒಟ್ಟು 1,29,500/- ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿರುತ್ತಾರೆ.
ಹುಬ್ಬಳ್ಳಿ ಮತ್ತು ರಾಜಸ್ಥಾನದ ನಡುವೆ ಗಾಂಜಾ ಮತ್ತು ಆಫೀಮನ ದೊಡ್ಡ ಜಾಲ ಇದೆ ಎನ್ನಲಾಗುತ್ತಿದ್ದು ನೂತನ ಆಯುಕ್ತ ಶಶಿಕುಮಾರ್ ಬಂ ನಂತರ ಒಂದೊಂದಾಗಿ ಹೊರ ಬರುತ್ತಿದೆಯಾದರೂ ಒಂದೆರಡು ದೊಡ್ಡ ತಿಮಿಂಗಿಲಗಳು ನೆರೆಯ ಗೋವಾ ಮುಖಾಂತರ ದಂಧೆ ನಡೆಸುತ್ತಿದೆ ಎನ್ನಲಾಗಿದೆ.