*ಹಳೇ ಹುಬ್ಬಳ್ಳಿ ಪೊಲೀಸರ ಕಾರ್ಯಾಚರಣೆ / ಇಲಾಖೆ ಸಿಬ್ಬಂದಿ ಸೇರಿ ಇತರರು ವಶಕ್ಕೆ*
ಹುಬ್ಬಳ್ಳಿ : ಕಾರ್ಮಿಕ ಇಲಾಖೆಯ 101 ಲ್ಯಾಪ್ ಟಾಪ್ ಕಳ್ಳತನ ಪ್ರಕರಣದಲ್ಲಿ ಹಳೇ ಹುಬ್ಬಳ್ಳಿ ಇನ್ಸಪೆಕ್ಟರ್ ಸುರೇಶ ಯಳ್ಳೂರ ನೇತೃತ್ದದ ತಂಡ ಆರು ಜನ ಇಲಾಖೆಯ ಸಿಬ್ಬಂದಿ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಸಿಬ್ಬಂದಿ ಸೇರಿ ಒಟ್ಟೂ 26 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
45ಲಕ್ಷ ರೂ ಗಳ 83ಲ್ಯಾಪ್ ಟಾಪ್, ಎರಡು ಆಟೋ, ಎರಡು ಬೈಕ್ ಹಾಗೂ ಒಂದು ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ ಮಾಧ್ಯಮಗೋಷ್ಠಿಯಲ್ಲಿ ಹಳೆ ಹುಬ್ಬಳ್ಳಿ ಪೊಲೀಸರ ಸಾಧನೆ ಶ್ಲ್ಯಾಘಿಸಿ ವಿವರ ನೀಡಿದರು.
ಹಾವೇರಿ ಜಿಲ್ಲೆಯ ಕಾರ್ಮಿಕರ ಮಕ್ಕಳಿಗೆ ನೀಡುವ ಸಲುವಾಗಿ ಬೆಳಗಾವಿಯಿಂದ ತಂದು ಕಾರ್ಮಿಕ ಇಲಾಖೆಯಲ್ಲಿ ಇಡಲಾಗಿತ್ತು. ಅಗಸ್ಟನಲ್ಲಿ ಪರಿಶೀಲನೆ ಮಾಡಿದಾಗ ಸುಮಾರು 55ಲಕ್ಷದ ಸುಮಾರು 101 ಲ್ಯಾಪಟಾಪ್ ಕಳುವಾಗಿದೆ ಎಂಬುದು ಬೆಳಕಿಗೆ ಬಂದ ನಂತರ ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತರು ಹಳೇ ಹುಬ್ಬಳ್ಳಿಗೆ ದೂರು ನೀಡಿದ್ದರು.
ಯಳ್ಳೂರ ಹಾಗೂ ತಂಡ ತನಿಖೆ ನಡೆಸಿದಾಗ ಅಲ್ಲೇ ಕೆಲಸ ನಿರ್ವಹಿಸುವ ದೀಪಕ ನಾಯಕ ಮತ್ತು ಕೃಷ್ಣ ಕಬ್ಬೇರ ಎಂಬಿಬ್ಬರು ಕಳುವು ಮಾಡಿರುವುದು ಬೆಳಕಿಗೆ ಬಂದಿದೆ. ಇವರಿಗೆ ಸಹಾಯ ಮಾಡಿದವರ ಜಾತಕ ಜಾಲಾಡಿದಾಗ
ಇಬ್ಬರು ಎಸ್ ಡಿ ಎ ಮತ್ತು ಗುತ್ತಿಗೆ ಆದರದ ಮೇಲೆ ಕೆಲಸ ಮಾಡುವ 4ಸಿಬ್ಬಂದಿಗಳು ಕೃತ್ಯ ಮಾಡಿದ್ದರು.
101 ಲ್ಯಾಪ್ ಟಾಪ್ ಗಳನ್ನ 6 ತಿಂಗಳು ಕಾಲದಲ್ಲಿ ಕಿಟಕಿಯಿಂದ ಇಳಿದು ಕಳುವು ಮಾಡಿದ್ದಾರೆಂದರು.
ಇಲಾಖೆಯಿಂದ ಲ್ಯಾಪಟಾಪ್ ಮಾರಾಟ ಮಾಡೋಕೆ ಹೇಳಿದ್ದಾರೆ ಅಂತ ಮಾರಾಟ ಮಾಡಿದ್ದು ,ಉಳಿದ ಸುಮಾರು 16ಜನ ಲ್ಯಾಪ್ ಟಾಪ್ ಕಳ್ಳತನಕ್ಕೆ ಪ್ರೇರಣೆ ನೀಡಿದ್ದು ಬಂಧಿತರು 26 ಜನ ಆಗಿದ್ದಾರೆಂದರು. ಇದರಲ್ಲಿ ಇಲಾಖೆಯ ಯಾವುದೇ ಹಿರಿಯ ಅಧಿಕಾರಿಗಳ ಕೈವಾಡ ಕಂಡು ಬಂದಿಲ್ಲವಾಗಿದೆ ಎಂದರು.
ಸುಭಾಸ ಕುರಡಿಕೇರಿ,ಶ್ರೀನಿವಾಸ ಕೌಡೆಣ್ಣವರ, ಸಾಯಿನಾಥ ಕೊರವರ, ನಾಗರಾಜ ಅಂಬಿಗೇರ, ಪ್ರಕಾಶ ನಿಟ್ಟೂರ, ಋತಿಕ್ ಕ್ಯಾರಕಟ್ಟಿ, ಫೈರೋಜ ಕೊಳ್ಳೂರ, ಮಲ್ಲಿಕಾರ್ಜುನ ಹಂಚಿನಾಳ, ಮೇಘನ್ ಕಠಾರೆ, ಅರ್ಜುನ ವಾಲೀಕಾರ, ದಾದಾಪೀರ ಮುಜಾಹಿದ, ವಿನಾಯಕ ಹಿರೇಮಠ, ರಾಹುಲ್ ಕಮಡೊಳ್ಳಿ, ಅಭಿ ಛಲವಾದಿ, ಮಹಾಂತೇಶ ಇಜಾರದ, ಸುನೀಲ ಹುಬ್ಬಳ್ಳಿ, ಪ್ರಜ್ವಲ ಬಾಗಲಕೋಟ, ಹರೀಶ ಸಗಡಿ, ರಂಜಾನ್ ಹಂಪಿಹೊಳಿ,ಮಂಜುನಾಥ ಕ್ಯಾರಕಟ್ಟಿ, ನಾಗರಾಜ ಸರವಿ,ದರ್ಶನ್ ಲಗಟಗೇರಿ, ಚನ್ನಬಸಪ್ಪ ಬಿಸರಳ್ಳಿ, ರೇಣುಕಾ ಬಿಸರಳ್ಳಿ ಬಂಧನಕ್ಕೊಳಗಾದ ಇತರರಾಗಿದ್ದಾರೆ.