*ಮಗುವಿಗೆ ಬೈದಿದ್ದಕ್ಕೆ ಗಂಡ, ಅತ್ತೆ,ಮಾವ ಸೇರಿ ಥಳಿಸಿದರು /ಮಹಿಳಾ ಠಾಣೆ ಮೆಟ್ಟಿಲೇರಿದ ಶ್ರಾವಣಿ*/*ಮಾವನ ತಲೆಗೂ ಗಾಯ*
ಹುಬ್ಬಳ್ಳಿ: ಕನ್ನಡ ದ ಹನ್ನೊಂದನೇ ಬಿಗ್ ಬಾಸ್ ಸ್ಪರ್ಧೆ ಆರಂಭವಾಗುವ ದಿನವೇ ಈ ಹಿಂದೆ ಇದೇ ಬಿಗ್ ಬಾಸ್ ಸ್ಪರ್ಧೆಯಲ್ಲಿ ಪಾಲ್ಗೊಂಡ ಹುಬ್ಬಳ್ಳಿ ವಿಶ್ವೇಶ್ವರ ನಗರ ಬಳಿಯ ಸಮೀರ್ ಆಚಾರ್ಯ ತನ್ನ ಪಾಲಕರ ಜೊತೆಗೂಡಿ ಪತ್ನಿ ಶ್ರಾವಣಿ ಮೇಲೆ ಹಲ್ಲೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಮಗಳು ಅಳುತ್ತಿದ್ದ ಕಾರಣಕ್ಕೆ ಬೆದರಿಸಿದ ಕಾರಣಕ್ಕೆ ಸೊಸೆ ಶ್ರಾವಣಿಯನ್ನು ಸಮೀರ್ ಆಚಾರ್ಯ ಅವರ ತಂದೆ ಬೈದಿದ್ದಾರೆ. ಇದೇ ವಿಷಯ ಬೆಳೆದು ದೊಡ್ಡದಾಗಿದೆ. ಪತಿ
ಸಮೀರ್ ತಮ್ಮ ತಂದೆ ತಾಯಿ ಜೊತೆ ಸೇರಿಕೊಂಡು ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಗ್ ಬಾಸ್ ಸ್ಪರ್ಧೆಯ ನಂತರ ಇಬ್ಬರೂ ಬೇರೆ ಟಿವಿ ಶೋ ದಲ್ಲಿಯೂ ಮಿಂಚಿದ್ದರು.ಯು ಟ್ಯೂಬ್, ಇನಸ್ಟಾಗ್ರಾಂ ನಲ್ಲಿಯೂ ಸಾಕಷ್ಟು ಕಾಣಿಸಿಕೊಳ್ಳುತ್ತಿದ್ದರು.
ಘಟನೆ ವೇಳೆ ಇನ್ಸ್ಟಾಗ್ರಾಂನಲ್ಲಿ ಲೈವ್ ಹೋಗಿದ್ದ ಶ್ರಾವಣಿ ಫೋನ್ ಒಡೆದು ಹಾಕಿದ್ದು ಅವರ ಕೈ, ಮುಖಕ್ಕೆ ಗಾಯಗಳಾಗಿವೆ.
ಶ್ರಾವಣಿ ನ್ಯಾಯಕ್ಕಾಗಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದು,ಸಮೀರ್ ಆಚಾರ್ಯ ತಂದೆ ಸೊಸೆ ಮೇಲೆ ದೂರು ನೀಡಲು ಮುಂದಾಗಿದ್ದಾರೆನ್ನಲಾಗಿದೆ.
ಶ್ರಾವಣಿ ಅವರು ಮಾವ, ಅತ್ತೆ ಹಾಗೂ ಗಂಡ ಹಲ್ಲೆ ನಡೆಸಿದ್ದಾರೆ ಎಂದಿದ್ದು ಆದರೆ ಹೆಚ್ಚಿನ ಯಾವುದೇ ಮಾತನಾಡಿಲ್ಲ.
ಸಮೀರ್ ತಂದೆ ರಾಘವೇಂದ್ರ ಮಣ್ಣೂರಗೂ ತಲೆಗೆ ಗಾಯಗಳಾಗಿವೆ ಎನ್ನಲಾಗಿದೆ.
ಸಮೀರ್ ಹಾಗೂ ಶ್ರಾವಣಿ ಇಬ್ಬರೂ *ಒಲಿದ ಜೀವ ಜೊತೆಯಲಿರಲು ಬಾಳು ಸುಂದರ* ಎಂದು ಗುನು ಗುನಿಸುತ್ತಾ ಪರಸ್ಪರ ಪ್ರೀತಿಸಿ ಮದುವೆಯಾದವರು.