*5.80 ಲಕ್ಷದ 12 ವಿವಿಧ ಕಂಪನಿಯ ಬೈಕ್, ನಗದು ಜಪ್ತಿ*
ಹುಬ್ಬಳ್ಳಿ : ದ್ವಿ ಚಕ್ರ ವಾಹನಗಳ ಕಳ್ಳತನವನ್ನೆ ದಂಧೆಯಾಗಿಸಿಕೊಂಡಿದ್ದ ಆನಂದ ನಗರ ಮೂಲದ ಮಹಾಂತೇಶ್ ಕಲಾಲ್ ಎಂಬುವನನ್ನು ಹುಬ್ಬಳ್ಳಿ ಉಪನಗರ ಪೊಲೀಸರು ಬಂಧಿಸಿದ್ದಾರೆ.
ಇನ್ಸ್ಪೆಕ್ಟರ್ ಎಂ.ಎಸ್. ಹೂಗಾರ ಹಾಗೂ ತಂಡ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಂಧಿತನಿಂದ 5.80 ಲಕ್ಷ ಮೌಲ್ಯದ 12 ವಿವಿಧ ಕಂಪನಿಯ ಬೈಕ್ ಗಳು, 1.10 ಲಕ್ಷ ನಗದು ವಶಪಡಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.