*ವಿದ್ಯಾಗಿರಿ ಮನೆ ದರೋಡೆ ಪ್ರಕರಣ*/ *ಪಿಎಸ್ಐ ಸಹಿತ ಇಬ್ಬರಿಗೆ ಗಾಯ*
ಹುಬ್ಬಳ್ಳಿ : ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ಗಂಡ ಹೆಂಡತಿಯ ಕೈಕಾಲು ಕಟ್ಟಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿ ಪರಾರಿಯಾಗಿದ್ದ ನಟೋರಿಯಸ್ ಚಡ್ಡಿ ಗ್ಯಾಂಗ್ ದರೋಡೆಕೋರನ ಮೇಲೆ ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರು ಇಂದು ಬೆಳಿಗ್ಗೆ ಫೈರಿಂಗ್ ಮಾಡಿದ್ದಾರೆ.
ಕಳೆದ 6 ತಿಂಗಳ ಹಿಂದೆ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎಸ್ಡಿಎಂ ಆಸ್ಪತ್ರೆಯ ಹಿಂಭಾಗದ ಅಶೋಕ ಕದಂ ಎಂಬುವರ ಮನೆ ಬಾಗಿಲಿಗೆ ಕಲ್ಲು ಒಗೆದು ಬಾಗಿಲು ಮುರಿದು ರಾತ್ರಿ ಸಮಯದಲ್ಲಿ ಮನೆಯಲ್ಲಿದ್ದ ದಂಪತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದರೋಡೆ ಮಾಡಿ ಪರಾರಿಯಾಗಿದ್ರು . ಈ ಪ್ರಕರಣವನ್ನು ಬೆನ್ನತ್ತಿದ್ದ ವಿದ್ಯಾಗಿರಿ ಠಾಣೆಯ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಆರೋಪಿಗಳು ಆಂಧ್ರಪ್ರದೇಶದ ಕರ್ನುಲ್’ನ ನಟೋರಿಯಸ್ ಚಡ್ಡಿ ಗ್ಯಾಂಗ್ ಕೈವಾಡ ಗೊತ್ತಾಗಿದೆ.
ಈ ಪ್ರಕರಣವನ್ನು ಬೆನ್ನತ್ತಿದ್ದ ವಿದ್ಯಾಗಿರಿ ಪೊಲೀಸರು ಈ ಪ್ರಕರಣ ಮಾಸುವ ಮುನ್ನವೇ ಇದೆ ಗ್ಯಾಂಗ್ ನವಲೂರಿನಲ್ಲಿ ಶುಕ್ರವಾರ ರಾತ್ರಿ ಮನೆಯೊಂದನ್ನು ದರೋಡೆ ಮಾಡಲು ಯೋಜನೆ ಮಾಡಿದ್ದ , ವೇಳೆ ವಿದ್ಯಾಗಿರಿ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು . ಆ ವೇಳೆ ಆತ್ಮರಕ್ಷಣೆಗಾಗಿ ಪಿ.ಎಸ್.ಐ ಪ್ರಮೋದ ದರೊಡೆಕೋರ ಪಾಲಾ ವೆಂಕಟೇಶ್ವರ ರಾವ್ ಮೇಲೆ ಗುಂಡು ಹಾರಿಸಿದ್ದಾರೆ .
ಸದ್ಯ ಘಟನೆಯಲ್ಲಿ ಪಿ.ಎಸ್.ಐ ಪ್ರಮೋದ ಸೇರಿದಂತೆ ಓರ್ವ ಪೊಲೀಸ್ ಕಾನ್ಸಟೆಬಲ್ಗೆ ಗಾಯವಾಗಿದೆ . ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ .ಫೈರಿಂಗ್ ಮಾಡಿದ ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್ ನೇತೃತ್ವದಲ್ಲಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ನಟೋರಿಯಸ್ ದರೋಡೆ ಮಾಡುವ ಚಡ್ಡಿ ಗ್ಯಾಂಗ್ ಕರ್ನಾಟಕದ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದರೋಡೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಪೊಲೀಸರು ಇನ್ನೂ ಹೆಚ್ಚಿನ ತನಿಖೆ ನಡೆಸಿದ್ದಾರೆ.