*ಸಂಘಟಿತ ಅಪರಾಧ ಮಾಡುವ ಕುಳಗಳಿಗೆ ಕಮೀಷನರ್ ಶಾಸ್ತಿ*
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೊಲೆ, ಕೊಲೆ ಯತ್ನ, ದರೋಡೆ, ಹಲ್ಲೆಗಳಂತಹ ಪ್ರಕರಣದಲ್ಲಿ ಭಾಗಿಯಾಗಿದ್ದ 45 ಅಪರಾಧಿಗಳನ್ನು ಏಕಕಾಲಕ್ಕೆ 6 ತಿಂಗಳು ಗಡಿಪಾರು ಮಾಡಲಾಗಿದೆ.
ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಇಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಚುನಾವಣೆ, ಗಲಭೆಗಳಂತಹ ಪ್ರಕರಣ ನಡೆದಾ ಗ ಗಡಿಪಾರು ಮಾಡಲಾಗುತ್ತಿತ್ತು. ಈಗ ಅವಳಿನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ತಡೆಯುವ ಉದ್ದೇಶದಿಂದ ಮಾಡಲಾಗುತ್ತಿದೆ ಎಂದು ಹೇಳಿದರು.
ಹುಬ್ಬಳ್ಳಿ ಧಾರವಾಡ ಅವಳನಗರದಲ್ಲಿ ನಡೆದಿರುವ, ಕೊಲೆ, ಸುಲಿಗೆ, ಕೊಲೆಗೆ ಪ್ರಯತ್ನ, ಸರಗಳ್ಳತನ, ಮಾದಕ ವಸ್ತು ಮಾರಾಟ/ಸೇವನೆ, ಭೂ ಮಾಫಿಯಾ, ಮಹಿಳೆ ಮತ್ತು ವಿದ್ಯಾರ್ಥಿನಿಯರ ಅಪಹರಣ, ಚುಡಾಯಿಸುವುದು ಅಲ್ಲದೆ ಸಂಘಟಿತ ಅಪರಾಧಗಳಾದ, ಮಟಕಾ, ಗ್ಯಾಂಬ್ಲಿಂಗ್, ಕ್ರಿಕೇಟ ಬೆಟ್ಟಿಂಗ್ ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಹೇಳಿದರು.
ಈ ಪ್ರಕ್ರಿಯೇ (ಗಡಿಪಾರು) ಮುಂದುವರೆಯುತ್ತದೆ.
ಈ ಗಡಿಪಾರು ವ್ಯಕ್ತಿಗಳ ನಿರ್ದಿಷ್ಟ ಅವಧಿವರೆಗೆ ಇದ್ದು, ಗಡಿಪಾರು ಮಾಡುವಂತೆ ವ್ಯಕ್ತಿಗಳ ಚಲನವಲನಗಳ ಮತ್ತು ಇವರ ಕಾರ್ಯಚಟುವಟಿಕೆಗಳ ಮೇಲೆ ಸೂಕ್ತ ನಿಗಾವಹಿಸಿ ಈ ಕಛೇರಿಗೆ ಮಾಹಿತಿ ತಿಳಿಸುವಂತೆ “ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಕೊಲೆ ಆರೋಪ ಹೊತ್ತ 8, ಕೊಲೆ ಪ್ರಯತ್ನ ಮಾಡಿದ 12, ಸುಲಿಗೆ ಆರೋಪ ಹೊತ್ತ ಮೂವರು,ಮನೆಗಳ್ಳತನ, ಮಾನಭಂಗ, ಅಪಹರಣ, ಅಬಕಾರಿ ಕಾಯ್ದೆ ಉಲ್ಲಂಘನೆ ಮತ್ತು ಹಲ್ಲೆ ಅರೋಪ ಹೊತ್ತ ತಲಾ ಓರ್ವರು,ಮಟಕಾ, ಜೂಜಾಟ, ಬೆಟ್ಟಿಂಗ್ ದಂಧೆ ನಿರತ ಆರು ಜನ, ಮಾದಕ ವಸ್ತು ಕಾಯ್ದೆ ಅಡಿ 09 ಜನ, ದೊಂಭಿ ಎಬ್ಬಿಸುತ್ತಿದ್ದ ಇಬ್ಬರನ್ನು ಗಡಿಪಾರು ಮಾಡಲಾಗಿದೆ.
ಧಾರವಾಡದ ಚೇತನ ಮೇಟಿ, ಅಡ್ಡ ಸೊಹೈಲ್, ಹುಬ್ಬಳ್ಳಿ ಹೊಸೂರಿನ ರಾಹುಲ್ ಪ್ರಭು ಸೇರಿದಂತೆ ನಲವತೈದು ಆರೋಪಿಗಳು ಗಡಿಪಾರುಗೊಂಡವರು.