*ಡಿಸಿ, ಎಸ್ಪಿ ಸಮ್ಮುಖದಲ್ಲಿ ಸರೆಂಡರ್ – *ಶಾಂತಿಗಾಗಿ ನಾಗರಿಕ ವೇದಿಕೆಯ ಡಾ.ಇಸಾಬೆಲ್ಲಾ ತಂಡದ ಯತ್ನ ಯಶಸ್ವಿ*
ಚಿಕ್ಕಮಗಳೂರು: ಶರಣಾಗದೆ ಉಳಿದಿದ್ದ ಶೃಂಗೇರಿ ಮೂಲದ ನಕ್ಸಲ್ ಕೋಟೆ ರವೀಂದ್ರ ಇಂದು (ಫೆ.1)ಜಿಲ್ಲಾಡಳಿತದ ಮುಂದೆ ಶರಣಾಗಿದ್ದಾರೆ. ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರು ರವೀಂದ್ರ ಜತೆ ಮಾತುಕತೆ ನಡೆಸಿ ಆತನ ಮನವೊಲಿಸಿದ್ದು, ಶರಣಾಗತಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ತಿಂಗಳು ಜ.8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ 6 ಜನ ನಕ್ಸಲರು ಶರಣಾಗಿದ್ದರಾದರೂ ರವೀಂದ್ರ ಮಾತ್ರ ಶರಣಾಗಿರಲಿಲ್ಲ. ಶೃಂಗೇರಿ ತಾಲೂಕು ಕಿಗ್ಗಾ ಸಮೀಪದ ಕೋಟೆಹೊಂಡ ಮರಾಠಿ ಕಾಲೋನಿಯ ರವೀಂದ್ರನ ಸಂಪರ್ಕಕ್ಕಾಗಿ ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರು ಶ್ರಮಿಸಿದ್ದರು.
ಈತನ ಮೇಲೆ ಚಿಕ್ಕ ಮಗಳೂರಿನಲ್ಲಿ 13 , ಅಲ್ಲದೇ ಕೇರಳದಲ್ಲಿ 8 ಪ್ರಕರಣಗಳು ದಾಖಲಾಗಿತ್ತು.ಶಾಂತಿಗಾಗಿ ವೇದಿಕೆಯಲ್ಲಿದ್ದ ಪೇಡೆ ನಗರಿಯ ಸಾಮಾಜಿಕ ಕಾರ್ಯಕರ್ತೆ,ಸಾಧನಾ ಸಂಸ್ಥೆಯ ಡಾ ಇಸಾಬೆಲ್ಲಾ ಜೇವಿಯರ್, ರಮೇಶ್ ನಗರಕರ, ವಿ ಎಸ್.ಶ್ರೀಧರ, ವೆಂಕಟೇಶ್, ಕೆ.ಎಲ್.ಅಶೋಕ,ಸುರೆಶ ನಾಯಕ,ಗೌಸ್ ಮೋಹಿದ್ಧೀನ, ನ್ಯಾಯವಾದಿ ಶ್ರೀಪಾದ ಜೊತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ವಿಕ್ರಂ ಅಮಟೆ ಸಮ್ಮುಖದಲ್ಲಿ ಶರಣಾಗತಿ ಪ್ರಕ್ರಿಯೆ ನಡೆಯಿತು.
ಇದರೊಂದಿಗೆ ರಾಜ್ಯ ನಕ್ಸಲ್ ಮುಕ್ತ ರಾಜ್ಯವಾದಂತಾಗಿದೆ.