*ಹೈಕೋರ್ಟ್ ಗೆ ರಾಜ್ಯ ಸರ್ಕಾರದ ಹೇಳಿಕೆ / ಹೆಚ್ಚಿನ ಪರಿಹಾರಕ್ಕೆ ನಾಳೆ ಕುರುಬ ಸಮುದಾಯದಿಂದ ಮೆರವಣಿಗೆ*
ಬೆಂಗಳೂರು : ಹುಬ್ಬಳ್ಳಿಯ ಐದು ವರ್ಷದ ಬಾಲಕಿಯ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಎನ್ಕೌಂಟರ್ ಆದ ಬಿಹಾರ ಮೂಲದ ಕಾಮ ಪಿಶಾಚಿ ರಿತೇಶ್ ಕುಮಾರ್ ಮೃತದೇಹದ ಶವಸಂಸ್ಕಾರಕ್ಕೆ ತಡೆ ನೀಡಬೇಕೆಂದು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈ ಕೋರ್ಟ್ಗೆ ಆರೋಪಿ ರಿತೇಶ್ ಮೃತದೇಹವನ್ನು ದಹನ ಮಾಡದೆ ಸಮಾಧಿ ಮಾಡಲಾಗುವುದು ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ತಿಳಿಸಿದೆ.
ಮುಂದಿನ ತನಿಖೆಗೆ ಲಭ್ಯವಾಗುವಂತೆ ಮಾಡುವ ಸಲುವಾಗಿ ಆರೋಪಿಯ ಮೃತದೇಹವು ಪ್ರಮುಖ ಸಾಕ್ಷ್ಯವಾಗಿದ್ದು, ಅದನ್ನು ದಹನ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಮಾನವ ಹಕ್ಕುಗಳ ಪರ ಹೋರಾಡುತ್ತಿರುವ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಂಘಟನೆ ಮತ್ತು ಡಾ.ಮಧು ಭೂಷಣ್ ಎಂಬುವರು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಇಂದು ನಡೆಸಿತು.
ಈ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಈ ರೀತಿಯ ಪ್ರಕರಣಗಳಲ್ಲಿ ಮೃತದೇಹವನ್ನು ದಹನ ಮಾಡುವುದಿಲ್ಲ. ಆದರೆ, ಮುಂದಿನ ತನಿಖೆಗೆ ನೆರವಾಗಬೇಕು ಎಂಬ ಕಾರಣದಿಂದ ಸಮಾಧಿ ಮಾಡಲಾಗುವುದು ಎಂದರು. ರಿತೇಶ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಬೇಕು. ಅದರ ವಿಡಿಯೊ ಮಾಡಬೇಕು. ರಿತೇಶ್ ಮೃತದೇಹದ ಮಾದರಿಗಳನ್ನು ಸಂಗ್ರಹಿಸಿಡಬೇಕು. ಈ ಸಂಬಂಧ ಅಫಿಡವಿಟ್ ಸಲ್ಲಿಸಲು ನ್ಯಾಯಾಲಯ ಆದೇಶಿಸಿದ್ದು ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ತನ್ಮಧ್ಯೆ ಪೊಲೀಸರ ಕ್ರಮಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದ್ದು, ಇನ್ನೊಂದೆಡೆ ಬಾಲಕಿ ಕುಟುಂಬಕ್ಕೆ ಹೆಚ್ಚಿನ ಪರಿಹಾರಕ್ಕೆ ಕುರುಬ ಸಮುದಾಯದ ಸಂಘಟನೆಗಳು ನಾಳೆ ಮೆರವಣಿಗೆ ನಡೆಸಲಿವೆ.
ರಾಜ್ಯ ಸರಕಾರ ಮತ್ತು ಕೆಂದ್ರ ಸರಕಾರ ಹೆಚ್ಚಿನ ಪರಿಹಾರ ಘೋಷಣೆ ಮಾಡಬೆಕೆಂದು ಆಗ್ರಹಿಸಿ ನಾಳೆ ಮುಂಜಾನೆ 11.55. ಕ್ಕೆ ದಾರವಾಡ ಜಿಲ್ಲೆಯ ಕುರುಬ ಸಮಾಜದ ನೇತ್ರುತ್ವದಲ್ಲಿ, ಜಗಧ್ಗರು ಶ್ರೀ ರೇವಣಸಿದ್ದೆಶ್ವರ ಮಹಾ ಸಂಸ್ಥಾನ ಮಠದ ಬಸವರಾಜ್ ದೇವರ ಸಾನಿದ್ಯದಲ್ಲಿ ಈ ಮರವಣಿಗೆ ನಡೆಯಲಿದ್ದು ಜಿಲ್ಲೆಯ ಕುರುಬ ಸಮುದಾಯದ ಎಲ್ಲ ರಾಜಕೀಯ ಮುಖಂಡರುಗಳು ಎಲ್ಲಾ ತಾಲೂಕಿನ ಕುರುಬ ಸಮುದಾಯದ ಪಧಾದಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗಳ್ಳಬೇಕೆಂದು ಜಿಲ್ಲಾ ಕುರುಬ ಸಮುದಾಯದ ಮುಖಂಡ ಶಿವಾನಂದ ಮುತ್ತಣ್ಣವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
*ಮಹತ್ವದ ಸುದ್ದಿ*
1) ಅಯೋಧ್ಯೆ :ರಾಮ ಮಂದಿರವನ್ನು ಗುರಿಯಾಗಿಸಿ ಸೋಮವಾರ ತಡರಾತ್ರಿ ರಾಮ ಜನ್ಮಭೂಮಿ ಟ್ರಸ್ಟ್ಗೆ ಬೆದರಿಕೆ ಇಮೇಲ್ ಬಂದಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯದ ಭದ್ರತೆಯನ್ನು ಹೆಚ್ಚಿಸಲು ಸೂಚಿಸಲಾಗಿದೆ. ಅಲ್ಲದೆ ಅಯೋಧ್ಯೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
2) ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿ ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಪಕ್ಷದ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ವಿರುದ್ಧ ಜಾರಿ ನಿರ್ದೇಶನಾಲಯ ಇಂದು ಆರೋಪಪಟ್ಟಿ ಸಲ್ಲಿಸಿದ್ದು,ವಿಶೇಷ ನ್ಯಾಯಾಲಯವು 25ರಂದು ವಿಚಾರಣೆ ನಡೆಸಲಿದೆ.
3) ಜಾತಿ ಗಣತಿಗೆ ಒಕ್ಕಲಿಗರ ಸಂಘದ ತೀವ್ರ ವಿರೋಧ.