ಧಾರವಾಡ :ಬಹು ಪ್ರತಿಷ್ಠೆಯಾಗಿ ಪರಿಣಿಮಿಸಿರುವ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಸಹಕಾರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಇದೇ ದಿ.31 ರಂದು ನಡೆಯಬೇಕಿದ್ದ
ಚುನಾವಣೆಗೆ ಸಹಕಾರ ಸಂಘಗಳ ಸಂಯುಕ್ತ ನಿಬಂಧಕರು ಇಂದು ತಡೆಯಾಜ್ಞೆ ನೀಡಿದ್ದಾರೆ.
ಧಾಮುಲ್ ಅಧ್ಯಕ್ಷ ಶಂಕರ ಮುಗದ ಓಟಕ್ಕೆ ಬ್ರೆಕ್ ಹಾಕಲ ವಿರೋಧಿ ಕಾಂಗ್ರೆಸ್ ಮುಖಂಡರು ಸತತ ಪ್ರಯತ್ನ ಮಾಡುತ್ತಿದ್ದು ಈಗ ತಡೆಯಾಜ್ಞೆ ದೊರೆತಿದೆ.
ಸಂಘದ ಆಡಳಿತ ಮಂಡಳಿಯ ಚುನಾವಣೆಗೆ ಸಂಬಂಧಿಸಿದಂತೆ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರೂ
ಈ ಮಧ್ಯೆ ಸಹಕಾರ ಇಲಾಖೆಯ ಅಧಿಕಾರಿಗಳು ಸಂಘದ ಚುನಾವಣಾ ಪ್ರಕ್ರಿಯೆ ಆರಂಭಿಸಿ, ವೇಳಾಪಟ್ಟಿಯನ್ನು ಕೂಡ ಪ್ರಕಟಿಸಿದ್ದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಪಕ್ಷದ ಕೆಲವರು ಚುನಾವಣೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಚುನಾವಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದರು.
ಶನಿವಾರ ಪರಿಶೀಲನೆ ನಡೆಯಿತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪರಮೇಶ್ವರ ಕಾಳೆ ಮತ್ತಿತರರು ಚುನಾವಣಾ ಅಧಿಕಾರಿ ಗೆ ಘೇರಾವು ಹಾಕಿ,ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೆಲವರ ನಾಮಪತ್ರ ತಿರಸ್ಕರಿಸುವಂತೆ ಒತ್ತಾಯಿಸಿದಾಗ ಕೆಲ ಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಆಗ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಸಂಘದಿಂದ ಪ್ರಾತಿನಿಧ್ಯ ಹೊಂದಿ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೇರಿರುವ ಶಂಕರ ಮುಗದ ಅವರನ್ನು ವಿರೋಧಿಸುವ ಗುಂಪು,ಇಲಾಖೆಯ ಅಧಿಕಾರಿಗಳು
ನ್ಯಾಯಾಲಯದ ಆದೇಶ ಪಾಲಿಸುತ್ತಿಲ್ಲ ಆರೋಪ ಮಾಡಿದೆ. ಸಂಘದ 7 ಸಾಮಾನ್ಯ, 1 ಪರಿಶಿಷ್ಠ ಜಾತಿ, 1 ಪರಿಶಿಷ್ಠ ಪಂಗಡ, 2 ಹಿಂದುಳಿದ ವರ್ಗ ಮತ್ತು 2 ಮಹಿಳಾ ಮೀಸಲು ಸೇರಿದಂತೆ ಒಟ್ಟು 13 ಸ್ಥಾನಗಳಿಗೆ 31ಕ್ಕೆ ಚುನಾವಣೆ ನಡೆಯಬೇಕಿತ್ತು. ಸಂಘದ 219 ಸದಸ್ಯರು ನೂತನ ಆಡಳಿತ ಮಂಡಳಿ ಆಯ್ಕೆ ಮಾಡಬೇಕಿದೆ.