*ತಡೆಯಾಜ್ನೆ ಬೆನ್ನಲ್ಲೇ ಕೇಸರಿ ಪಡೆಯಲ್ಲಿ ಭುಗಿಲೆದ್ದಿದ್ದ ಅಸಮಾಧಾನ* /*ಚುನಾವಣೆ ದಿನಾಂಕಕ್ಕೆ ದಿನಗಣನೆ*
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಉಪಮೇಯರ್ ಚುನಾವಣೆ ಈ ಹಿಂದಿನ ಮೀಸಲಾತಿಯಂತೇಯೇ ನಡೆಯುವದು ನಿಶ್ಚಿತವಾಗಿದೆ. ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಧಾರವಾಡ ಹೈಕೋರ್ಟನಲ್ಲಿ
(WP 103203/2025 ) ದಾಖಲಿಸಿದ ಕೇಸನ್ನು ವಾಪಸ ಪಡೆದಿದ್ದು ಹೈಕೋರ್ಟನಲ್ಲಿ ಸದರಿ ಕೇಸ ವಿಲೇವಾರಿಯಾಗಿದೆ.
ಪ್ರಸ್ತುತ ಅವಧಿಗೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಉಪಮೇಯರ್ ಸಾಮಾನ್ಯರಿಗೆ ನಿಗದಿಯಾಗಿದೆ. ಮೇಯರ ಮೀಸಲಾತಿ ಮಹಿಳಾ ಮೀಸಲಾತಿ ವಿರುದ್ದ ದಾಖಲಿಸಿದ ಪ್ರಕರಣದಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತಾದರೂ ಸ್ವತಃ ಮೆಣಸಿನಕಾಯಿ ವಾಪಸ ಪಡೆದಿದ್ದು ಆ ಕಾರಣಕ್ಕೆ ಹೈಕೋರ್ಟನಲ್ಲಿ ಸದರಿ ಕೇಸ ವಿಲೇವಾರಿಯಾಗಿದ್ದು ಚುನಾವಣೆಗೆ ಇದ್ದ ಅಡೆತಡೆ ನಿವಾರಣೆಯಾಗಿದೆ. ಪ್ರಾದೇಶಿಕ ಆಯುಕ್ತರು ನಿಗದಿಪಡಿಸಿದ ದಿನದಂದು ಈ ತಿಂಗಳ ಅಂತ್ಯದಲ್ಲಿ ಅಥವಾ ಮುಂದಿನ ತಿಂಗಳು ಮೊದಲ ವಾರದಲ್ಲಿ ಚುನಾವಣೆ ಮುಹೂರ್ತ ನಿಗದಿಯಾಗಲಿದೆ.
ಈಗಾಗಲೇ ಮಹಾನಗರ ಪಾಲಿಕೆಯಿಂದ ಚುನಾವಣೆ ದಿನಾಂಕ ನಿಗದಿ ಮಾಡುವಂತೆ ಪತ್ರ ರವಾನೆ ಯಾಗಿದ್ದು ಬೆಳಗಾವಿಯ ಪ್ರಾದೇಶಿಕ ಆಯುಕ್ತರು 21 ದಿನಗಳ ಕಾಲಾವಕಾಶ ನೀಡಿ ದಿನಾಂಕ ನಿಗದಿಪಡಿಸುವರು.
ಪ್ರಸ್ತುತ ಬಿಜೆಪಿ ಆಡಳಿತ ಅವಧಿಯಲ್ಲಿ ಧಾರವಾಡದ ಈರೇಶ ಅಂಚಟಗೇರಿ, ಸೆಂಟ್ರಲ್ ವ್ಯಾಪ್ತಿಯ ವೀಣಾ ಬರದ್ವಾಡ ಹಾಗೂ ಪ್ರಸಕ್ತ ಪಶ್ಚಿಮ ಕ್ಷೇತ್ರದ ರಾಮಣ್ಣ ಬಡಿಗೇರ ಅವರುಗಳಿಗ ‘ಗೌನ್ ಭಾಗ್ಯ’ ದೊರೆತಿದ್ದು ಈ ಹಿನ್ನೆಲೆಯಲ್ಲಿ ಇಪ್ಪತ್ನಾಲ್ಕನೇ ಮೇಯರ್ ಪಟ್ಟ ಪೂರ್ವ ಕ್ಷೇತ್ರದ ಪಾಲಾಗುಗುವದು ನಿಶ್ಚಿತ.
ಶಿವು ಮೆಣಸಿನಕಾಯಿ ಅವರು ಮೀಸಲಾತಿಗೆ ತಡೆಯಾಜ್ನೆ ಬಂದುದು ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ಅಪಸ್ವರಕ್ಕೆ ಕಾರಣವಾಗಿತ್ತು. ಜಿಲ್ಲಾ ಅಧ್ಯಕ್ಷರಿಗೆ, ಕೋರ್ ಕಮಿಟಿಯಲ್ಲಿ ಸಹ ಚರ್ಚೆ ಆಗಿದೆ ಇದ್ದುದು ಹಲವಾರು ಅಸಮಾಧಾನಕ್ಕೆ ಕಾರಣವಾಗಿತ್ತು.
ಪೂರ್ವ ಕ್ಷೇತ್ರದ ವ್ಯಾಪ್ತಿಗೆ ಬರುವ ಹಾಲಿ ಪೂರ್ವ ಅಧ್ಯಕ್ಷ ಮಂಜುನಾಥ ಕಾಟ್ಕರ್ ಪತ್ನಿ ಶೀಲಾ ಕಾಟ್ಕರ್, ಬರದ್ವಾಡ ಮೇಯರ್ ಆಗುವ ವೇಳೆ ಕೂಡ ರೇಸ್ ನಲ್ಲಿ ಇದ್ದ
ಮೀನಾಕ್ಷಿ ವಂಟಮೂರಿ, ಪ್ರೀತಿ ಖೋಡೆ, ಪೂಜಾ ಶೇಜವಾಡಕರ,ಜ್ಯೋತಿ ಪಾಟೀಲ,ಹಾಗೂ ಅನಿತಾ ಚಳಗೇರಿ ಮಾಜಿ ಮೇಯರ್ ರಾಧಾಬಾಯಿ ಸಫಾರೆ ಹೆಸರುಗಳೂ ಮುಂಚೂಣಿಗೆ ಬರುವ ಸಾಧ್ಯತೆಯಿದೆ. ತಡೆಯಾಜ್ನೆ ಯಿಂದ ಸ್ಥಗಿತಗೊಂಡ ಚಟುವಟಿಕೆ ಮತ್ತೆ ಆರಂಭಗೊಂಡಿದೆ.
ಈಗಾಗಲೇ ಆಕಾಂಕ್ಷಿ ಕಾರ್ಪೋರೇಟರ್ಗಳು ತಮ್ಮ ನಾಯಕರ ಮೂಲಕ ಒತ್ತಡ ಆರಂಭಿಸಿದ್ದಾರೆ .