ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ
ಜೂ. 30ರ ದಿನಾಂಕ ನಿಗದಿಯಾಗಿದೆ.
ಅಂದು ನೂತನ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಪ್ರಕಟಣೆ ತಿಳಿಸಿದೆ.
ನಿಗದಿಯಾದ ಮೀಸಲಾತಿ ಅನ್ವಯ ಪ್ರಸ್ತುತ ಅವಧಿಗೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಉಪಮೇಯರ್ ಹಿಂದುಳಿದ ಬಿ ವರ್ಗಕ್ಕೆ ನಿಗದಿಯಾಗಿದ್ದು ಈ ಬಾರಿ ಪೂರ್ವ ಕ್ಷೇತ್ರದ ವ್ಯಾಪ್ತಿಗೆ ಗೌನ್ ಭಾಗ್ಯ ನಿಶ್ಚಿತ ಎಂದೇ ಹೇಳಲಾಗುತ್ತಿದೆ.
ಪೂರ್ವ ಕ್ಷೇತ್ರದ ವ್ಯಾಪ್ತಿಗೆ ಬರುವ ಹಾಲಿ ಪೂರ್ವ ಅಧ್ಯಕ್ಷ ಮಂಜುನಾಥ ಕಾಟ್ಕರ್ ಪತ್ನಿ ಶೀಲಾ ಕಾಟ್ಕರ್, ಬರದ್ವಾಡ ಮೇಯರ್ ಆಗುವ ವೇಳೆ ಕೂಡ ರೇಸ್ ನಲ್ಲಿ ಇದ್ದ
ಮೀನಾಕ್ಷಿ ವಂಟಮೂರಿ , ಪ್ರೀತಿ ಖೋಡೆ , ಪೂಜಾ ಶೇಜವಾಡಕರ, ಜ್ಯೋತಿ ಪಾಟೀಲ,ಹಾಗೂ ಅನಿತಾ ಚಳಗೇರಿ ಹೆಸರುಗಳೂ ಮುಂಚೂಣಿಗೆ ಬರುವ ಸಾಧ್ಯತೆಯಿದೆ.
ಪೂರ್ವ ಕ್ಷೇತ್ರಕ್ಕೆ ಒತ್ತು ನೀಡುವ ದೃಷ್ಟಿಯಿಂದ ಆ ಕ್ಷೇತ್ರಕ್ಕೆ ಈ ಬಾರಿ ನಿಕ್ಕಿ ಎನ್ನಲಾಗುತ್ತಿದೆಯಾದರೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ ಅವರುಗಳ ಗ್ರೀನ್ ಸಿಗ್ನಲ್ ಅಂತಿಮ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.
ಹಿಂದುಳಿದ ಬಿ ವರ್ಗಕ್ಕೆ ಉಪಮೇಯರ್ ಸ್ಥಾನ ಮೀಸಲಿದ್ದು ಮೇಯರ್ ಪಟ್ಟ ಯಾವ ಕ್ಷೇತ್ರದ ಪಾಲಾಗುವದೆಂಬುದನ್ನು ಅವಲಂಬಿಸಿ ನಿರ್ಧಾರ ಪ್ರಕಟಗೊಳ್ಳಲಿದೆ .