ಹುಬ್ಬಳ್ಳಿ: ಉತ್ತರ ಕರ್ನಾಟಕದ ಬಡ ರೋಗಿಗಳ ಪಾಲಿನ ಜೀವದಾಯಿನಿ ಎನಿಸಿಕೊಂಡಿರುವ ಕೆಎಂಸಿ ಆಸ್ಪತ್ರೆಯ ನೂತನ ನಿರ್ದೇಶಕರಾಗಿ ಡಾ ಈಶ್ವರ ಹೊಸಮನಿ ನೇಮಕಗೊಂಡಿದ್ದು,ಅಧಿಕಾರ ಸ್ವೀಕರಿಸಿದ್ದಾರೆ.
ಇದುವರೆಗೆ ಹಂಗಾಮಿ ನಿರ್ದೇಶಕರಾಗಿದ್ದ ಡಾ.ಎಫ್.ಎಸ್.ಕಮ್ಮಾರ ಅವರ ಸ್ಥಾನದಲ್ಲಿ ಡಾ. ಹೊಸಮನಿ ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮೂಲತಃ ಬದಾಮಿಯವರಾದ ಡಾ. ಈಶ್ವರ ಹೊಸಮನಿ ಹುಬ್ಬಳ್ಳಿಯ ಇದೇ ಕಾಲೇಜಿನಲ್ಲಿ 1983ರಲ್ಲಿ ಎಂಬಿಬಿಎಸ್ ಹಾಗೂ ಎಂಎಸ್ ಮುಗಿಸಿದ್ದು, ಇಲ್ಲಿಯೇ ಜನರಲ್ ಸರ್ಜರಿ ವಿಭಾಗದ ಮುಖ್ಯಸ್ಥರಾಗಿ ಹಾಗೂ ಕೆಎಂಸಿ ಮಾಜಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.
ಮುಂದಿನ ವರ್ಷ ಮೇ ತಿಂಗಳಲ್ಲಿ ಡಾ.ಹೊಸಮನಿ ನಿವೃತ್ತಿ ಹೊಂದಲಿದ್ದಾರೆ. ಈ ಹಿಂದೆ ಎರಡು ಮೂರು ಸಲ ನಿರ್ದೇಶಕ ಸ್ಥಾನಕ್ಕೆ ಇವರ ಹೆಸರು ಕೇಳಿ ಬಂದಿತ್ತು. ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪ್ರಯತ್ನ ಈ ಬಾರಿ ಫಲ ನೀಡಿದೆ.