*ಪ್ರೀತಂ, ಸೀಮಾ, ಹರಿವಾಣ*, *ಹುರಳಿ, ವಾಲ್ಮೀಕಿ, ಈಶ್ವರಗೌಡರಿಗೆ ಪಟ್ಟ*
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಬಿಜೆಪಿಯ ಆರು ಮೋರ್ಚಾಗಳಿಗೆ ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿದ್ದಾರೆ.
ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರೀತಂ ಅರಕೇರಿ, ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ ಹೆಬ್ಬೂರು, ಶಕ್ತಿ ಹಿರೇಮಠ,
ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸೀಮಾ ಲದವಾ, ಪ್ರ.ಕಾಗಳಾಗಿ ಮಾಲತಿ ಹೂಲಿಕಟ್ಟಿ, ಪೂಜಾ ರಾಯ್ಕರ್ ನಿಯುಕ್ತಿ ಗೊಂಡಿದ್ದಾರೆ.
ಎಸ್ ಸಿ ಮೋರ್ಚಾ ಅಧ್ಯಕ್ಷರಾಗಿ ಹಿರಿಯ ಕಾರ್ಯಕರ್ತರಾದ ಹನುಮಂತ ಹರಿವಾಣ, ಪ್ರ.ಕಾಗಳಾಗಿ ಮಂಜುನಾಥ ಬಿಜವಾಡ, ಸುಭಾಷ್ ಅಂಕಲಕೋಟಿ, ಎಸ್ ಟಿ ಮೋರ್ಚಾ ಸಾರಥ್ಯ ಅಶೋಕ್ ವಾಲ್ಮೀಕಿಗೆ ನೀಡದ್ದು, ಹನುಮಂತ ಗೌಡರ, ಮಾರುತಿ ಚಾಕಲಬ್ಬಿ, ನೇಮಕ ಮಾಡಲಾಗಿದೆ.
ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಪ್ರವೀಣ ಹುರಳಿ,ಪ್ರ.ಕಾ.ಗಳಾಗಿ ರವೀಂದ್ರ ಯಲಕಾನ, ಶ್ರೀನಿವಾಸ ಕೋಟಿಯಾನ , ರೈತ ಮೋರ್ಚಾ ಅಧ್ಯಕ್ಷರಾಗಿ ಈಶ್ವರಗೌಡ ಪಾಟೀಲ್ ನೇಮಕಗೊಂಡಿದ್ದು, ಬಸವರಾಜ ಜಾಬಿನ, ಮಂಜುನಾಥ ನೀರಲಕಟ್ಟಿ ಪ್ರಧಾನ ಕಾರ್ಯದರ್ಶಿಯಾಗಿ ಇದ್ದಾರೆ.
ಕಳೆದ ಒಂದು ತಿಂಗಳಿನಿಂದ ವಿವಿಧ ಮೋರ್ಚಾಗಳ ನೇಮಕವಾಗುವ ಗುಸುಗುಸು ಇಂದು ಅಂತಿಮಗೊಂಡಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ್ ಬೆಲ್ಲದ ತಮ್ಮ ತಮ್ಮ ಅನುಯಾಯಿಗಳಿಗೆ ಪಟ್ಟ ಕಟ್ಟುವಲ್ಲಿ ಯಶಸ್ವಿ ಆಗಿದ್ದಾರೆ.