*ಹಾಲಿ ಸ್ವಾಮೀಜಿಗೆ ನಾವಾಗಿ ಪೀಠ ಬಿಡಲು ಹೇಳಿಲ್ಲ, ಅವರೇ ಮಲಪ್ರಭಾ ದಂಡೆಯಲ್ಲಿ ಪೀಠ ಸ್ಥಾಪಿಸುವುದಾಗಿ ಹೇಳಿದ್ದಾರೆ / ಹುಬ್ಬಳ್ಳಿಯಲ್ಲಿ ಕಾಶಪ್ಪನವರ ಹೇಳಿಕೆ*
ಹುಬ್ಬಳ್ಳಿ; ಕೂಡಲಸಂಗಮದಲ್ಲಿರುವ ಪಂಚಮಸಾಲಿ ಪೀಠಕ್ಕೆ ಪರ್ಯಾಯ ಸ್ವಾಮೀಜಿಗಳ ನೇಮಕದ ಚಿಂತನೆ ನಡೆದಿದ್ದು ಆದಷ್ಟು ಶೀಘ್ರದಲ್ಲಿಯೇ ಹೊಸ ಶ್ರೀಗಳ ನೇಮಕ ಮಾಡಲಾಗುವುದು ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಯಮೃತ್ಯುಂಜಯ ಸ್ವಾಮೀಜಿಗಳನ್ನು ನಾವಾಗಿಯೇ ಪೀಠ ಬಿಟ್ಟು ಹೋಗಿ ಅಂತ ಹೇಳಿಲ್ಲ ಅವರೇ ಬೇರೆ ಪೀಠ ಕಟ್ಟಿಕೊಳ್ಳುವುದಾಗಿ ಹೇಳಿದ್ದಾರೆಂದರು.
ಮಹಾನ್ ನಾಯಕರೊಬ್ಬರು ಅವರಿಗಾಗಿ , ಪೀಠಕ್ಕಾಗಿ ಹುಬ್ಬಳ್ಳಿ – ಬೆಳಗಾವಿ ನಡುವೆ ಪೀಠಕ್ಕಾಗಿ ಭೂಮಿ ಖರೀದಿಸಿದ್ದಾರೆ
ಮತ್ತೊಂದು ಕಡೆ ಸ್ವಾಮೀಜಿಗಳು ಮಲಪ್ರಭಾ ನದಿ ದಂಡೆ ಮೇಲೆ ಪೀಠ ಕಟ್ಟೋದಾಗಿ ಹೇಳಿದ್ದಾರೆ. ಇಷ್ಟೆಲ್ಲ ಹೇಳಿದ ಮೇಲೆ ಶ್ರೀಗಳು ಅಲ್ಲಿಗೆ ಹೋಗಲಿ ಎಂದು ಹೇಳಿದರು.
ನಮ್ಮ ಧರ್ಮದ ಆಚಾರ ವಿಚಾರ ಪ್ರಚಾರ ಮಾಡಲು, ಬಸವ ತತ್ವ ಪ್ರಚಾರಕ್ಕಾಗಿ ಪರ್ಯಾಯ ಸ್ವಾಮೀಜಿಗಳನ್ನು ನೇಮಕ ಮಾಡಿಕೊಳ್ಳುತ್ತೇವೆ .ಈ ನಿಟ್ಟಿನಲ್ಲಿ ಆದಷ್ಟು ಬೇಗ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಟ್ರಸ್ಟಿಗೆ ನಾವು ನಾವು ಉದ್ದೇಶ ಪೂರ್ವಕವಾಗಿ ಬೀಗ ಹಾಕಿಲ್ಲ
ಟ್ರಸ್ಟ್ ನ ಭದ್ರತೆ ದೃಷ್ಟಿಯಿಂದ ನಾವು ಬೀಗಹಾಕಿದ್ದೇವೆ ಆದರೆ ಸ್ವಾಮಿಜಿಗಳು ಕೆಲವರಿಗೆ ಕುಮ್ಮಕ್ಕು ಕೊಟ್ಟು ಬೀಗ ಒಡೆಯಿಸಿದ್ದಾರೆ
ಬೀಗ ಒಡೆದಂತವರಿಗೆ ಸ್ವಾಮೀಜಿಗಳು ಸನ್ಮಾನವನ್ನು ಮಾಡಿದ್ದಾರೆ . ಕೆಲವರನ್ನು ನನ್ನ ವಿರುದ್ಧ ಎತ್ತಿ ಕಟ್ಟು ಪ್ರಯತ್ನವನ್ನ ಶ್ರೀಗಳು ಮಾಡುತ್ತಿದ್ದಾರೆ ಎಷ್ಟೇ ಜನರನ್ನು ಎತ್ತಿಕಟ್ಟಲಿ, ನಾನು ಹೆದರಲ್ಲ .ಸ್ವಾಮೀಜಿ ಒಂದು ಪಕ್ಷದ ಬ್ಯಾನರ್ ಅಡಿ ಹೋಗಿ ಕೂರುತ್ತಿದ್ದಾರೆ ಓರ್ವ ವ್ಯಕ್ತಿಯ ಪರವಾಗಿ ಮಾತ್ರ ಸ್ವಾಮೀಜಿ ಮಾತನಾಡುತ್ತಿದ್ದಾರೆಂದರು.
ಪಂಚಮಸಾಲಿ ಮುಖಂಡ ನೀಲಕಂಠ ಅಸೂಟಿ ಸ್ವಾಮೀಜಿ ಪೀಠದಲ್ಲಿ ಇರುತ್ತಿರಲಿಲ್ಲ. ಎರಡು ವರ್ಷದಿಂದ ಕೂಡಲಸಂಗಮ ಮಠಕ್ಕೆ ಸ್ವಾಮೀಜಿ ಬಂದೇ ಇಲ್ಲ ಎಂದರು.