*ದಿ.6ರಂದು ಖುದ್ದು ಹಾಜರಾತಿಗೆ ಆದೇಶ*
ಹುಬ್ಬಳ್ಳಿ : ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಕೊಲೆ ಮಾಡಿದ್ದ ಆರೋಪಿ ಫಯಾಜ್ ಜಾಮೀನು ಅರ್ಜಿಯನ್ನು ಇಂದು ಹುಬ್ಬಳ್ಳಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿದೆ.
ನ್ಯಾಯಾಧೀಶರಾದ ಪಲ್ಲವಿ ಬಿ.ಆರ್ . ದು ಈ ತೀರ್ಪು ನೀಡಿದ್ದಾರಲ್ಲದೇ ಆಗಸ್ಟ್ 06 ಕ್ಕೆ ವಿಚಾರಣೆ ಮುಂದೂಡಿದ್ದು,ಅಂದು ಫಯಾಜ್ ಖುದ್ದು ಹಾಜರಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ.
ಕಳೆದ 1 ವರ್ಷ 4 ತಿಂಗಳಿಂದ ಧಾರವಾಡ ಕಾರಾಗೃಹದಲ್ಲಿರುವ ಫಯಾಜ್ಗೆ ಜಾಮೀನಿನ ಮೇಲೆ ಹೊರ ತರುವ ಪ್ರಯತ್ನಕ್ಕೆ ಹಿನ್ನಡೆಯಾಗಿದ್ದು ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ನೇಹಾ ತಂದೆ ನಿರಂಜನ ಹಿರೇಮಠ ಹಾಗೂ ಕುಟುಂಬದವರು ನಿಟ್ಟುಸಿರು ಬಿಡುವಂತಾಗಿದೆ.
ಪೊಲೀಸರು ಬಂಧನ ಪ್ರಕ್ರಿಯೆ ಸರಿಯಾಗಿ ಮಾಡಿಲ್ಲ. ಪೋಷಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಆಧಾರದಲ್ಲಿ ಜಾಮೀನು ನೀಡಬೇಕೆಂದು ಫಯಾಜ್ ಪರ ವಕೀಲಾದ ಬೆಳಗಾವಿಯ ಝಡ್.ಎಂ. ಹತ್ತರಕಿ ವಾದ ಮಂಡಿಸಿದ್ದರು.ಆರೋಪಿ ಇಂದು ವಿಡಿಯೋ ವಿಡಿಯೋ ಕಾನ್ಸರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದನು.ಸಿಐಡಿ ಪರವಾಗಿ ಎಸ್ ಪಿಪಿ ಮಹೇಶ್ ವೈದ್ಯ, ನೇಹಾ ಕುಟುಂಬ ಪರವಾಗಿ ರಾಘವೇಂದ್ರ ಮುತ್ತಗಿಕರರಿಂದ ಆಕ್ಷೇಪಣೆ ಅರ್ಜಿ ಸಲ್ಲಿಕೆಯಾಗಿತ್ತು.ಉಭಯತರ ವಾದ ಪ್ರತಿವಾದ ಆಲಿಸಿ ನ್ಯಾಯಾಧೀಶರು ಇಂದು ಮಧ್ಯಾಹ್ನ ತೀರ್ಪು ನೀಡಿದ್ದಾರೆ.
ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ ಹಿನ್ನಲೆಯಲ್ಲಿ ಹೈಕೋರ್ಟ್ ಮೊರೆ ಹೋಗಲು ಫಯಾಜ್ ಪರ ವಕೀಲರ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ .
ನೇಹಾ ಹಿರೇಮಠ ಕೊಲೆ ಆರೋಪಿಗೆ ಜಾಮೀನು ನೀಡಬಾರದು ಎಂದು ಶ್ರೀ ರಾಮ ಸೇನಾ ವತಿಯಿಂದ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ಮೆರವಣಿಗೆ ನಡೆಸಲಾಯಿತು. ಗಂಗಾಧರ ಕುಲಕರ್ಣಿ, ಅಣ್ಣಪ್ಪ ದಿಟವಾಗಿ, ವೀರಯ್ಯ ಸಾಲಿಮಠ, ನಾಗರಾಜ ಸೌತಿಕಾಯಿ, ಮಂಜು ಕಾಟ್ಕರ್, ಪ್ರವೀಣ ಮಾಳದಕರ, ಪೂರ್ಣಿಮಾ ಕಾಡೆಮ್ಮೆ ವಿವರ, ವಾಸು ದುರ್ಗದ, ಗಂಗಾಧರ ದಢೂತಿ ಸೇರಿದಂತೆ ಅನೇಕರಿದ್ದರು.