*ನಾಲ್ಕನೆ ವರ್ಷದ ಗಣೇಶೋತ್ಸವ ಆಚರಣೆಗೆ ಬಂದಿದೆ ಸಿದ್ದತೆ/ಸುನಿಲ್ ಕುಮಾರ್ ಭಾಗವಹಿಸುವ ಸಾಧ್ಯತೆ
ಹುಬ್ಬಳ್ಳಿ : ರಾಣಿ ಚೆನ್ನಮ್ಮ ಮೈದಾನದಲ್ಲಿ (ಈದ್ಗಾ ಮೈದಾನ)
ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಆಶ್ರಯದಲ್ಲಿ ನಾಲ್ಕನೇ ಬಾರಿ ಗಣೇಶ ವಿರಾಜಿಸಲಿದ್ದಾನೆ.
ಕಳೆದ ಬಾರಿ ರಾಮಾವತಾರಿಯಾಗಿದ್ದ ಗಣಪತಿ ಈ ಬಾರಿ ಕೃಷ್ಣಾವತಾರದಲ್ಲಿ ಕಾಣಿಸಿಕೊಳ್ಳಲಿದ್ದು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಮಾಡಲಾಗಿದೆ.
ನಾಳೆ ದಿನಾಂಕ 26 ರ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಗಣೇಶ* *ಮಂಟಪದ ಹಾಲಗಂಬ ಪೂಜಾ* ಕಾರ್ಯಕ್ರಮವನ್ನು ರಾಣಿ ಚೆನ್ನಮ್ಮ ಮೈದಾನದಲ್ಲಿ ನೆರವೇರಿಸಲಾಗುವುದು.
ದಿ.27ರ ಬೆಳಿಗ್ಗೆ ಒಂಬತ್ತು ಗಂಟೆಗೆ ಮೂರುಸಾವಿರ ಮಠದಿಂದ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪನೆ ಮಾಡಲಿದ್ದು, ಸಂಜೆ ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ್ ಚವ್ಹಾಣ್ ವಿಶೇಷ ಆರತಿಯನ್ನು ಮಾಡುವರು.28 ರಂದು ಎರಡನೇ ದಿನ ಗಣಹೋಮ, ಮಹಾಪ್ರಸಾದ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಿಂದ ಗಣಪತಿ ಆರತಿ ನಡೆಯಲಿದೆ.
ಮೂರನೇ ದಿನ 11-45ಕ್ಕೆ ವಿಸರ್ಜನೆ ಮೆರವಣಿಗೆ ಆರಂಭಗೊಳ್ಳಲಿದೆ. ಕಾರ್ಕಳ ಶಾಸಕ ಸುನೀಲಕುಮಾರ ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಾದ್ಯತೆ ಇದೆ. ಸ್ಥಳೀಯ ಶಾಸಕರು, ಕೇಂದ್ರ ಸಚಿವರು ಭಾಗವಹಿಸುವರು.
ಮಂಡಳಿ ಅಧ್ಯಕ್ಷ ನ್ಯಾಯವಾದಿ ಸಂಜೀವ ಬಡಸ್ಕರ್, ಪದಾಧಿಕಾರಿಗಳಾದ ಸುಭಾಷ್ ಸಿಂಗ್ ಜಮಾದಾರ, ಜಯತೀರ್ಥ ಕಟ್ಟಿ, ಡಾ. ಚಿಗುರು ಪಾಟಿ ವಿ.ಎಸ್.ವಿ.ಪ್ರಸಾದ, ರಮೇಶ್ ಕದಂ, ರಘು ಯಲ್ಲಕ್ಕನವರ, ವಿವೇಕ ಮೊಕಾಶಿ ಮುಂತಾದವರು ಯಶಸ್ವಿ ಆಚರಣೆಗೆ ಸಜ್ಜಾಗಿದ್ದಾರೆ. ತಯಾರಿಗಳು ಭರದಿಂದ ಸಾಗಿದೆ.