*ನೂತನ ಉಪಾಧ್ಯಕ್ಷರಾಗಿ ಅಗಡಿ, ಕಮ್ಮಾರ ,ಕಲ್ಲೂರ,*
*ರೇವಣಕರ ಗೌರವ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಯಾಗಿ ಶೃಂಗೇರಿ*
ಹುಬ್ಬಳ್ಳಿ : ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ನೂತನ ಅಧ್ಯಕ್ಷರಾಗಿ 2025-26,2026-27 ನೇ ಸಾಲಿಗೆ ನೆರೆಯ ಗದಗ ಜಿಲ್ಲೆಯ ಹುಲಕೋಟಿ ಮೂಲದ ಉದ್ಯಮಿ ಜಿ.ಕೆ.ಆದಪ್ಪಗೌಡರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು (29ರಂದು)ನಡೆದ ಉತ್ತರ ಕರ್ನಾಟಕದ ವ್ಯಾಪಾರೋದ್ಯಮಿಗಳ ಪ್ರಾತಿನಿಧಿಕ ಸಂಸ್ಥೆಯ 96ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ಅಧಿಕೃತವಾಗಿ ಪ್ರಕಟಿಸಲಾಯಿತು. ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿದಾಗಲೇ ಅಧ್ಯಕ್ಷ ಸಹಿತ ಉಳಿದ ಪದಾಧಿಕಾರಿಗಳ ಹುದ್ದೆಗೆ ತಲಾ ಒಂದೊಂದೆ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಖಚಿತವಾಗಿತ್ತು.
ಉಪಾಧ್ಯಕ್ಷರಾಗಿ ಪ್ರವೀಣ ಅಗಡಿ, ಸಿದ್ದೇಶ್ವರ ಕಮ್ಮಾರ ಹಾಗೂ ವೀರಣ್ಣ ಕಲ್ಲೂರ , ಗೌರವ ಕಾರ್ಯದರ್ಶಿಯಾಗಿ ಉದಯ ರೇವಣಕರ, ಜಂಟಿ ಕಾರ್ಯದರ್ಶಿಯಾಗಿ ಪ್ರಕಾಶ ಶ್ರಂಗೇರಿ ಆಯ್ಕೆಯಾಗಿದ್ದಾರೆ.
*2025ರಿಂದ 2028ರ ಅವಧಿಗೆ ಆಯ್ಕೆಯಾದ ನೂತನ ಆಡಳಿತ ಮಂಡಳಿ ಸದಸ್ಯರ ವಿವರ ಇಂತಿದೆ*.
ಹುಬ್ಬಳ್ಳಿ ಧಾರವಾಡ ಕ್ಷೇತ್ರದಿಂದ ಕಾಂತಿಲಾಲ ಪುರೋಹಿತ, ಅಶೋಕ ಎನ್.ಲದವಾ, ಗಂಗನಗೌಡ ಎಸ್.ಪಾಟೀಲ, ಗಿರಿಧರಲಾಲ ಬಾಪನಾ, ಶಶಿಧರ ಶೆಟ್ಟರ್, ನೀಲಕಂಠಪ್ಪ ಹಂಪಣ್ಣವರ, ರಮೇಶ ಯಾದವಾಡ, ಸುಭಾಸ ಬಾಗಲಕೋಟ, ಮಲ್ಲಿಕಾರ್ಜುನ ಕಂಬಳ್ಯಾಳ ಆಯ್ಕೆಯಾದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹೊರತುಪಡಿಸಿ ಎಂ.ಬಿ.ಬಡ್ನಿ( ಗದಗ), ಮಂಜುನಾಥ ಹೆಗಡೆ ( ಹೊನ್ನಾವರ), ಬಸವರಾಜ ಜವಳಿ ( ಬೆಳಗಾವಿ), ರಾಜಶೇಖರ ಮಾಗನೂರ (ಬ್ಯಾಡಗಿ), ಜಿ.ಎಚ್.ಕೋತಂಬ್ರಿ ( ಹೊಸಪೇಟೆ).ರವಿ ಬಿ.ಕಮತಗಿ ( ಬಾಗಲಕೋಟ) ಚುನಾಯಿತರಾಗಿದ್ದಾರೆ.
ಮಾಜಿ ಅಧ್ಯಕ್ಷರಾದ ಶಂಕ್ರಣ್ಣ ಮುನವಳ್ಳಿ, ಎಂ.ಸಿ.ಹಿರೇಮಠ, ವಿ.ಪಿ.ಲಿಂಗನಗೌಡರ, ರಮೇಶ ಎ.ಪಾಟೀಲ, ವಿನಯ ಜವಳಿ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.