*ಹುಧಾ ಪ್ರಥಮ ಪ್ರಜೆಯ ಅರಸಿ ಬಂದ ಉಪಾಧ್ಯಕ್ಷ ಹುದ್ದೆ*
ಹುಬ್ಬಳ್ಳಿ : ಅಖಿಲ ಭಾರತ ಮಹಾಪೌರರ ಮಂಡಳಿಯ ಉಪಾಧ್ಯಕ್ಷರಾಗಿ ಹುಬ್ಬಳ್ಳಿ ಧಾರವಾಡ ಮಹಾನಗರದ ಪ್ರಥಮ ಪ್ರಜೆ ಶ್ರೀಮತಿ ಜ್ಯೋತಿ ಪಾಟೀಲ ನೇಮಕಗೊಂಡಿದ್ದಾರೆ.
ಈ ನೇಮಕವನ್ನು ಆಲ್ ಇಂಡಿಯಾ ಕೌನ್ಸಿಲ್ ಆಪ್ ಮೇಯರ್ಸ ನೂತನ ಚೇರಮನ್ ಶ್ರೀಮತಿ ರೇಣು ಬಾಲಾ ಗುಪ್ತಾ ಪ್ರಕಟಿಸಿದ್ದಾರೆ ಎಂದು ಕಾರ್ಯದರ್ಶಿ ಮನೋಜ ಗುಪ್ತಾ ಆದೇಶದಲ್ಲಿ ತಿಳಿಸಿದ್ದಾರೆ.
ಮಹಾಪೌರರಾಗಿ ಅಧಿಕಾರ ಸ್ವೀಕರಿಸಿದ ಅಲ್ಪ ಅವಧಿಯಲ್ಲೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕವಾಗಿ ಅವಳಿನಗರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಲ್ಲದೇ ಭರವಸೆ ಹುಟ್ಟಿಸಿರುವ ಜ್ಯೋತಿ ಪಾಟೀಲ ಅವರ ಕಾರ್ಯ ತತ್ಪರತೆಗೆ ಈ ಅಪೂರ್ವ ಅವಕಾಶ ಅರಸಿ ಬಂದಿದೆ. ಉಪ ಮೇಯರ್ ಸಂತೋಷ ಚವ್ಹಾಣ ಸಹಿತ ಪಾಲಿಕೆಯ ಎಲ್ಲ ಸದಸ್ಯರು ಅವರನ್ನು ಅಭಿನಂದಿಸಿದ್ದಾರೆ.