*ಲಕ್ಕಿ ಸುರೇಶ ಜೈನ್ ಸರಣಿ ಶ್ರೇಷ್ಠ*
ಹುಬ್ಬಳ್ಳಿ: ಶ್ರೀ ಸಿವಾಂಚಿ ಜೈನ್ ಯುವ ಸಂಘಟನೆ ಹುಬ್ಬಳ್ಳಿ ವತಿಯಿಂದ ಭಾನುವಾರ ಆಯೋಜಿಸಲಾದ ಜೈನ್ ಕ್ರಿಕೆಟ್ ಲೀಗ್ ಸೀನಿಯರ್ – ಸೀಸನ್ ೬ರಲ್ಲಿ ತೇಜ್ ವಾರಿಯರ್ಸ ಚಾಂಪಿಯನ್ನ ಪಟ್ಟ ಧರಿಸಿದ್ದು ಆಡಿದ ಎಲ್ಲ ಪಂದ್ಯಗಳಲ್ಲೂ ಪಂದ್ಯ ಪುರುಷರಾದ ಸುರೇಶ ಜೈನ( ಲಕ್ಕಿ) ಸರಣಿ ಶ್ರೇಷ್ಠರಾಗಿ ಹೊರಹೊಮ್ಮಿದರು.

ಹುಬ್ಬಳ್ಳಿಯ ಒಟ್ಟು 10 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ತೇಜ್ ವಾರಿಯರ್ಸ ಟ್ರೆಂಡ್ಜ್ ಸಿಸಿ 1 ತಂಡವನ್ನು ಹಿಮ್ಮೆಟ್ಟಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಪಂದ್ಯಾವಳಿಯ ಎಲ್ಲ ಪಂದ್ಯಗಳಲ್ಲೂ ಸುರೇಶ ಜೈನ ಶ್ರೇಷ್ಠ ಪ್ರದರ್ಶನ ಗಮನ ಸೆಳೆಯಿತಲ್ಲದೇ ಕಳೆದ ಬಾರಿಯೂ ಇವರು ಇದೇ ರೀತಿ ಮಿಂಚು ಹರಿಸಿದ್ದರು. ಪ್ರದೀಪ್ ಮೆಹತಾ ಬೆಸ್ಟ್ ಬ್ಯಾಟ್ಸ್ಮನ್ ಹಾಗೂ ಕಮಲೇಶ್ ಗಾಂಧಿಮುಥಾ ಬೆಸ್ಟ್ ಬೌಲರ್ ಆಗಿ ಹೊರ ಹೊಮ್ಮಿದರು.
ವಿಜೇತ ತಂಡಕ್ಕೆ ಟ್ರೋಫಿಯನ್ನು ಸಿವಾಂಚಿ ಜೈನ್ ಓಸ್ತ್ವಾಲ್ ಸಂಘದ ಅಧ್ಯಕ್ಷ ಹಾಗೂ ಟ್ರೋಫಿ ಪ್ರಾಯೋಜಕ ಜೈನಮ್ ಸಿಂಡಿಕೇಟ್ನ ಅಶೋಕಜಿ ಕಾನೂಂಗಾ ಹಾಗೂ ಟೂರ್ನಮೆಂಟ್ನ ಮುಖ್ಯ ಪ್ರಾಯೋಜಕ ದೇವಜಿ ಚೌಧರಿ ಹಾಗು ಭವರಲಾಲ ಸಿ.ಜೈನ ವಿತರಿಸಿದರು.

ಕಾರ್ಯಕ್ರಮದ ಈವೆಂಟ್ ಚೇರ್ಮನ್ ಭೋಮರಾಜ್ ಭನ್ಸಾಲಿ, ಸಂಘಟನೆಯ ಅಧ್ಯಕ್ಷ ಮನೋಜ್ ಬಾಗ್ರೆಚಾ, ದಿಲೀಪ್ ಸಂಕ್ಲೇಚಾ, ಮನೀಷ್ ನಾಹಟಾ, ಪಿಂಟು ಬಾಗ್ರೆಚಾ, ಸುಶೀಲ್ ಮಂಡೋತ್, ಸಂಘಟನೆಯ ಕಾರ್ಯದರ್ಶಿ ಸಂದೀಪ್ ಮೆಹತಾ ¸ ಕಲ್ಪೇಶ್ ಕಾಂಕರಿಯಾ, ಮಹಾವೀರ್ ಛಾಜೇಡ್, ಧರ್ಮೇಂದ್ರ ಬಾಗ್ರೆಚಾ, ಜಿನೇಂದ್ರ ಛಾಜೇಡ್, ಕಮಲೇಶ್ ಧಾನೇಶಾ, ಅಮಿತ್ ಬಾಗ್ರೆಚಾ, ಅರವಿಂದ್ ಬಾಗ್ರೆಚಾ, ಭಾರತ್ ಬಾಲರ್, ತನಿಷಾ ಮೆಹತಾ, ದೇವೇಂದ್ರ ವೇದಮೂಥಾ, ವಿನೀತ್ ಗೋಲೇಛಾ, ವಿಪಿನ್ ರಾಂಕಾ, ಪ್ರವೀಣ್ ಗೋಲೇಛಾ, ಉತ್ತಮ್ ಶ್ರೀಶ್ರೀಮಾಲ್, ಗೌತಮ್ ಲುಂಕಡ್, ಮನೋಜ್ ಮೆಹತಾ, ಹಿತೇಶ್ ಮುನೋತ್, ಜಸರಾಜ್ ಓಸ್ತ್ವಾಲ್, ರಾಕೇಶ್ ಬಾಫ್ನಾ, ಅಭಿಷೇಕ್ ಶ್ರೀಶ್ರೀಮಾಲ್, ವಿಕಾಸ್ ಬಂದಾಮೂಥಾ, ಸಂದೀಪ್ ನಾಹಟಾ ಮುಂತಾದವರು ಉಪಸ್ಥಿತರಿದ್ದರು.



