*ಹಳ್ಳಿಕೇರಿ ಮಡ್ಡಿ ಬಳಿ ಸಾರಿಗೆ ಬಸ್ – ಕಾರಿನ ಮಧ್ಯೆ ಅವಘಡ*
ಗದಗ: ಜಿಲ್ಲೆಯ ನರಗುಂದ ತಾಲೂಕಿನ ಹಳ್ಳಿಕೇರಿ ಮಡ್ಡಿಯ ಬಳಿ ಅಮರ ದಾಬಾ ಹತ್ತಿರ ಇಂದು ಬೆಳಿಗ್ಗೆ 6-30ರ ಸುಮಾರಿಗೆ ಕಾರು ಮತ್ತು ವಾಯುವ್ಯ ಸಾರಿಗೆ ಸಂಸ್ಥೆ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
ನರಗುಂದ ತಾಲೂಕಿನ ಕಲ್ಲಾಪುರದ ಬಸವೇಶ್ವರ ದೇವಸ್ಥಾನಕ್ಕೆ ಶ್ರಾವಣದ ಹಿನ್ನೆಲೆಯಲ್ಲಿ ಹೊರಟಿದ್ದ ಹಾವೇರಿ ಮೂಲದ ರುದ್ರಪ್ಪ ಅಂಗಡಿ ( 55) ಹಾಗೂ ರಾಜೇಶ್ವರಿ ಅಂಗಡಿ(45) ಐಶ್ವರ್ಯ (16) ಹಾಗೂ ವಿಜಯ (12)ನಾಲ್ವರೂ ಮೃತಪಟ್ಟಿದ್ದಾರೆ.
ಇಳಕಲ್ನಿಂದ ಹುಬ್ಬಳ್ಳಿಗೆ ಹೊರಟ್ಟಿದ್ದ ಸಾರಿಗೆ ಬಸ್, ಹಾವೇರಿಯಿಂದ ಕಲ್ಲಾಪುರ ಕಡೆಗೆ ಹೊರಟ್ಟಿದ್ದ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದೆ. ಸ್ಥಳಕ್ಕೆ ನರಗುಂದ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆ ನಡೆದ ಸ್ಥಳದಿಂದ ಕಲ್ಲಾಪುರ ಸುಮಾರು 5ಕಿ.ಮಿ ಇದ್ದು ತಲುಪುವ ಮೊದಲೇ ಅವಘಡ ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ.