*UPSC ಸಿದ್ದತೆ ಮಾಡಿಕೊಂಡಿದ್ದ ಜೀವಿತಾ ಕುಸಗೂರ ಮೃತ ಯುವತಿ*
ಧಾರವಾಡ: ರಾಜ್ಯದಾದ್ಯಂತ ಹೃದಯಾಘಾತದ ಸಾವುಗಳ ಸರಣಿ ಮುಂದುವರೆದಿದ್ದು ಪೇಡೆನಗರಿಯಲ್ಲಿಯೂ ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ , ಅಲ್ಲದೇ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ.
ಇಲ್ಲಿನ ಕಲಘಟಗಿ ರಸ್ತೆಯಲ್ಲಿನ ಪುರೋಹಿತ ನಗರದ
ಕೃಷಿ ಪದವೀಧರೆ ಜೀವಿತಾ ಪ್ರಭಾಕರ ಕುಸಗೂರ ಎಂಬ 26 ವರ್ಷದ ಯುವತಿಯೇ ಹೃದಯಾಘಾತಕ್ಕೆ ಬಲಿಯಾದವಳಾಗಿದ್ದಾಳೆ.
ಮಂಗಳವಾರ ಮಧ್ಯಾಹ್ನ ಮನೆಯಲ್ಲಿದ್ದ ಜೀವಿತಾಗೆ ಎದೆ ನೋವು ಕಾಣಿಸಿಕೊಂಡಿತು. ತೀವ್ರ ಎದೆನೋವಿನಿಂದ ಬಳಲಿದ ಆಕೆಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರೊಳಗೆ ಜೀವಿತಾಳು ಇಹಲೋಕ ತ್ಯಜಿಸಿದ್ದಳು.ಜೀವಿತಾಳ ಸಾವಿನಿಂದ ಇಡೀ ಕುಟುಂಬ ಶೋಕದಲ್ಲಿ ಮುಳುಗಿದೆ.