*ಮೇಯರ್ ಜೊತೆ ಮಾತುಕತೆ ಪ್ರತಿ ತಿಂಗಳು ಮೊದಲ ಬುಧವಾರ*
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕಯ ಪ್ರಥಮ ಪ್ರಜೆಯಾಗಿ ಅಧಿಕಾರ ಸ್ವೀಕರಿಸಿದ ರಾಮಣ್ಣ ಬಡಿಗೇರ ಅವರು ಕಳೆದ 6 ತಿಂಗಳಲ್ಲಿ ಆ ಸ್ಥಾನಕ್ಕೆ ಅಕ್ಷರಶಃ ಘನತೆ ತಂದಿದ್ದಾರೆ.
ಸಾಮಾನ್ಯ ಸಭೆಯನ್ನೂ ವ್ಯವಸ್ಥಿತವಾಗಿ ನಡೆಸುತ್ತಿರುವ
ಇವರು, ಅವಳಿನಗರದ ಕುಡಿಯುವ ನೀರು, ಕಸ ವಿಲೇವಾರಿ, ರಸ್ತೆ, ಬೀದಿದೀಪ, ಒಳಚರಂಡಿ ಸೇರಿದಂತೆ ತಮ್ಮ ಸಮಸ್ಯೆಗಳಿಗಾಗಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಮೊದಲನೇ ಬುಧವಾರ ‘ಮೇಯರ್ ಜೊತೆ ಮಾತುಕತೆ’ ಕಾರ್ಯಕ್ರಮ ಆರಂಭಿಸಿದ್ದಾರೆ .
ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಈಗಾಗಲೇ ಬಳಿಕ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದೇನೆ. ಆದರೂ, ಅಲ್ಲಲ್ಲಿ ಜನರ ಸಮಸ್ಯೆಗಳು ಕಾಣುತ್ತಿವೆ. ಹೀಗಾಗಿ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಮೊದಲ ಬುಧವಾರ ಮೇಯರ್ ಜೊತೆ ಮಾತುಕತೆ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಾಳೆ ಬೆಳಗ್ಗೆ 11 ಗಂಟೆಯಿಂದ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ. ಆಯುಕ್ತರು, ಅಧಿಕಾರಿಗಳು ಇರಲಿದ್ದಾರೆ. ಬಂದ ದೂರುಗಳಿಗೆ 15 ದಿನಗಳಲ್ಲಿ ಪರಿಹಾರ ಒದಗಿಸಲಾಗುವುದು ಎಂದರು. ಸಾರ್ವಜನಿಕರು ಮೊ. 8277802331ಗೆ ಕರೆ ಮಾಡಿ ಅವರ ಸಮಸ್ಯೆ ಹೇಳಿಕೊಳ್ಳಬಹುದು. ದೂರುಗಳಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು.
ಆಡಳಿತ ಯಂತ್ರದ ಲೋಪ, ನೂನ್ಯತೆಯ ಭಾಗವಾಗಿ ಫೋನ್ ಇನ್ ಕಾರ್ಯಕ್ರಮ ಮಾಡುತ್ತಿಲ್ಲ.ಪ್ರಚಾರದ ಗಿಮಿಕ್ ಅಲ್ಲ, ಜನರಿಗೆ ತ್ವರಿತವಾಗಿ ಪರಿಹಾರ ಸಿಗಬೇಕು. ಅಲೇದಾಡುವುದನ್ನು ತಪ್ಪಿಸಬೇಕು ಎಂದು ಕಾರ್ಯಕ್ರಮ ಮಾಡಲಾಗುತ್ತಿದೆ. ಇಲ್ಲಿ 15 ದಿನಗಳಲ್ಲಿ ಪರಿಹಾರ ಒದಗಿಸದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಆಯುಕ್ತರಿಗೆ ಸೂಚಿಸಲಾಗುವುದು ಎಂದರು.