*ಹಿರಿಯ ಸದಸ್ಯಗೆ ಮಹತ್ವದ ಹುದ್ದೆ*
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಬಿಜೆಪಿಯ ಆಡಳಿತ ಪಕ್ಷದ ಸಭಾನಾಯಕರಾಗಿ ಮಾಜಿ ಮಹಾಪೌರರು ಹಾಗೂ ಹಿರಿಯ ಸದಸ್ಯ ಈರೇಶ ಅಂಚಟಗೇರಿ ನೇಮಕಗೊಂಡಿದ್ದಾರೆ.
ಈ ನೇಮಕವನ್ನು ಇಂದು ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಪ್ರಕಟಿಸಿದ್ದಾರೆ. ತಮ್ಮ ಆಯ್ಕೆ ಮಾಡಿದ ಕೇಂದ್ರ ಸಚಿವರು ಪ್ರಲ್ಹಾದ ಜೋಶಿ ರವರಿಗೆ ಹಾಗೂ ಶಾಸಕರಾದ ಅರವಿಂದ ಬೆಲ್ಲದ ಮತ್ತು ಮಹೇಶ ತೆಂಗಿನಕಾಯಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ ಬಿಜೆಪಿಯ ಎಲ್ಲ ಹಿರಿಯ ಮುಖಂಡರು ಮಹಾನಗರ ಪಾಲಿಕೆ ಸದಸ್ಯರುಗಳು ಹಾಗೂ ಬಿಜೆಪಿಯ ಎಲ್ಲ ಕಾರ್ಯಕರ್ತರಿಗೆ ಅಂಚಟಗೇರಿ ಕೃತಜ್ಞತೆ ಸಲ್ಲಿಸಿದ್ದಾರೆ.
ಕಳೆದ 2022-23 ನೆಯ ಅವಧಿಯಲ್ಲಿ ಮಹಾಪೌರಾಗಿ ಪಕ್ಷಾತೀತವಾಗಿ ಜನರ ಸೇವೆಗೈದ ತೃಪ್ತಿ ಇದೆ. ಈಗ ಮಹತ್ವದ ಸಭಾನಾಯಕರಾಗಿ ಮುಂಬರುವ ದಿನಮಾನಗಳಲ್ಲಿ ಜನಸೇವೆ ಮಾಡುವೆ. ನೂತನ ಮಹಾಪೌರರಾದ ಆತ ಜೋತ್ಯಿ ಪಾಟೀಲ ರವರು ಹಾಗೂ ಉಪ ಮಹಾಪೌರರಾದ ಸಂತೋಷ ಚವ್ವಾಣ ರವರಿಗೂ ಸಹ ಮುಂಬರುವ ದಿನಗಳಲ್ಲಿ ಅವಳಿನಗರದ ಶ್ರೇಯೋಭಿವೃದ್ಧಿಗಾಗಿ ಸಹಕಾರ ನೀಡವುದಾಗಿ ಹೇಳಿರುವ ಅವರು ಮಹಾನಗರ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದ್ದಾರೆ.
ಸಾಮಾನ್ಯವಾಗಿ ಸಭಾನಾಯಕರಾಗಿ ಪಾಲಿಕೆ ಕಲಾಪದ ಬಗ್ಗೆ ಅರಿವಿರುವ ಹಿರಿಯ ಸದಸ್ಯರನ್ನೆ ಪರಿಗಣಿಸುವ ಪರಂಪರೆ ಇದೆ.
ಈ ಬಾರಿ ಹಿರಿಯ ಸದಸ್ಯರಾದ ರಾಜಣ್ಣ ಕೊರವಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ವಿಜಯಾನಂದ ಶೆಟ್ಟಿ ಹಾಗೂ ಶಿವು ಮೆಣಸಿನಕಾಯಿ ಇವರ ಹೆಸರುಗಳು ಕೋರ್ ಕಮಿಟಿ ಮುಂದೆ ಬಂದಿದ್ದು ಅಂಚಟಗೇರಿ ಅವರಿಗೆ ದೊರೆತಿದೆ.
ಈ ಅವಧಿಯಲ್ಲಿ ಸೆಂಟ್ರಲ್ ಗೆ ಎರಡು ಬಾರಿ, ಪಶ್ಚಿಮಕ್ಕೆ ಒಂದು ಬಾರಿ ದೊರೆತಿರುವ ಹಿನ್ನೆಲೆಯಲ್ಲಿ ಸಭಾನಾಯಕ ಸ್ಥಾನ ಪೂರ್ವ ಕ್ಷೇತ್ರದ ಅಥವಾ ಧಾರವಾಡ ಕ್ಷೇತ್ರದ ಪಾಲಾಗುವ ಸಾಧ್ಯತೆ ಇದೆ ಎಂಬುದನ್ನು “ಕನ್ನಡ ಧ್ವನಿ” ವಾರದ ಹಿಂದೆಯೇ ಪ್ರಕಟಿಸಿತ್ತು.