ಹುಬ್ಬಳ್ಳಿ : ಶತಮಾನದ ಇತಿಹಾಸ ಹೊಂದಿರುವ ಹುಬ್ಬಳ್ಳಿ ವಕೀಲರ ಸಂಘಕ್ಕೆ ಇದೇ ಮೊದಲ ಬಾರಿಗೆ ಅಡ್ಹಾಕ್ ಕಮೀಟಿ ನೇಮಿಸಲಾಗಿದ್ದು ಡಿಸೆಂಬರ್ 19ಕ್ಕೆ ಚುನಾವಣೆ ನಡೆಸಲು ನಿನ್ನೆ ಶನಿವಾರ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ನ್ಯಾಯವಾದಿಗಳಾದ ಎಂ.ವಿ.ಸೋಮಣ್ಣ, ಉದಯ ಇಟಗಿ, ಶ್ರೀಮತಿ ಜಿ.ಮೀರಾಬಾಯಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಉಚ್ಛ ನ್ಯಾಯಾಲಯದ ಆದೇಶದ ಪ್ರಕಾರ 1117 ಸದಸ್ಯರ ಪಟ್ಟಿ ಪರಿಗಣಿಸಲು, ಅಲ್ಲದೇ ಕೆ.ಬಿ.ಶಿವಕುಮಾರ ಇವರನ್ನು ಚುನಾವಣಾಧಿಕಾರಿಯಾಗಿ ಮುಂದುವರಿಸಲು ನಿರ್ಣಯಿಸಲಾಗಿದೆ.

ಚುನಾವಣಾ ಕಮೀಟಿ ಸದಸ್ಯರುಗಳಾಗಿ ಎಂ.ವಿ.ಸೋಮಣ್ಣ , ಸದಸ್ಯರುಗಳಾಗಿ ಜಿ. ಮೀರಾಬಾಯಿ, ಯು.ವಿ.ಇಟಗಿ, ಕೆ.ಬಿ.ಶಿವಕುಮಾರ, ಗೋಪಾಲ ಬಿ.ಪಾಟೀಲ, ಎಮ್.ಬಿ.ಕೆಂಬಾವಿ, ಎಂ.ಎಸ್.ಪಡೇಸೂರ, ಮಹೇಶ ಎಚ್.ಎನ್, ಬಿ.ಆರ್.ಮಹಮ್ಮದನವರ, ಸುಧೀರ ಪಾಟೀಲ ಇವರುಗಳನ್ನು ನೇಮಿಸಲಾಗಿದೆಯಲ್ಲದೇ ದಿ. 17ರಂದು ಚುನಾವಣೆ ಪ್ರಕ್ರಿಯೆ ( ಕ್ಯಾಲೆಂಡರ ಆಪ್ ಇವೆಂಟ್) ಪ್ರಕಟಿಸಲು ನಿರ್ಧರಿಸಲಾಗಿದೆ. ಚುನಾವಣೆ ಸಂಬಂಧ ಯಾವುದೇ ಹೆಚ್ಚಿನ ನಿರ್ಧಾರ ಕೈಗೊಳ್ಳಲು ಚುನಾವಣೆ ಕಮೀಟಿಗೆ ಅಧಿಕಾರ ನೀಡಲಾಗಿದೆ.
ಇದಕ್ಕೂ ಮೊದಲು ದಿ. 13ರಂದು ಸಹ ಎಂ ವಿ ಸೋಮಣ್ಣ ಉದಯ ಇಟಗಿ ಶ್ರೀಮತಿ ಜಿ ಮೀರಾಬಾಯ ಇವರ ಅಧ್ಯಕ್ಷ ತೆ ಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಸದ್ಯದ ಆಡಳಿತ ಮಂಡಳಿ ಅವಧಿ ಮೀರಿದ ಕಾರಣ ವಜಾಗೊಳಿಸಲು, ಅಲ್ಲದೇ ವಜಾ ಆದ ಮಂಡಳಿಯವರನ್ನು ಯಾವುದೇ ಸಭೆಗೆ ಕರೆಯದಂತೆ ನ್ಯಾಯಾಧೀಶರಿಗೆ ತಿಳಿಸಲು, ಅಲ್ಲದೇ ಸಂಘದ ಖಾತೆ ಚಲಾಯಿಸದಂತೆ ಪತ್ರ ಬರೆಯಲು, ಚುನಾವಣಾ ದಿನಾಂಕ ನಿಗದಿಪಡಿಸಲು, ಸವೋಚ್ಛ ನ್ಯಾಯಾಲಯದ ಆದೇಶದಂತೆ ಮಹಿಳಾ ವಕೀಲರಿಗೆ ಮೀಸಲಾತಿ ನೀಡಲು ಅಲ್ಲದೇ ದಿ. 15ರಂದು ಮಧ್ಯಾಹ್ನ ಸರ್ವ ಸದಸ್ಯರ ಸಭೆ ಕರೆದು ಅಡ್ಹಾಕ್ ಕಮೀಟಿ ಅಧ್ಯಕ್ಷರನ್ನು ಆಯ್ಕೆ ಮಾಡಲು ನಿರ್ಣಯ ಕೈಗೊಳ್ಳಲಾಗಿತ್ತು.



