*ರಾಜು ಕಾಳೆ, ಕಾಟ್ಕರ್,ಶೇಳಕೆ ಮಲ್ಲಿಗವಾಡಗೆ ಕ್ಷೇತ್ರಗಳ ಹೊಣೆಗಾರಿಕೆ*
ಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲೆಯ ಭಾರತೀಯ ಜನತಾ ಪಕ್ಷದ ನಾಲ್ಕು ಮಂಡಳಗಳಿಗೆ ನೂತನ ಅಧ್ಯಕ್ಷರ ಆಯ್ಕೆಯನ್ನು ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಇಂದು ಮಕರ ಸಂಕ್ರಾಂತಿ ದಿನವೇ ಪ್ರಕಟಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷರಾಗಿ ರಾಜು ಕಾಳೆ, ಪೂರ್ವದ ಅಧ್ಯಕ್ಷರಾಗಿ ಮಂಜುನಾಥ ಕಾಟ್ಕರ್, ಪಶ್ಚಿಮದ ಅಧ್ಯಕ್ಷರಾಗಿ ಮಂಜುನಾಥ ಮಲ್ಲಿಗವಾಡ ನಿರೀಕ್ಷೆಯಂತೆ ನೇಮಕಗೊಂಡಿದ್ದಾರೆ. ಧಾರವಾಡ ನಗರ ಅಧ್ಯಕ್ಷರಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಧಾರವಾಡದ ಶಂಕರ್ ಶೇಳಕೆ ನಿಯುಕ್ತಿಗೊಂಡಿದ್ದಾರೆ. ಇಲ್ಲಿ ಶೇಳಕೆ ಮತ್ತು ಶ್ರೀನಿವಾಸ್
ಕೋಟಿಯಾನ ಮಧ್ಯೆ ತೀವ್ರ ಪೈಪೋಟಿ ಇತ್ತು.
ಕಳೆದ ಒಂದು ತಿಂಗಳಿನಿಂದ ಮಂಡಳ ಅಧ್ಯಕ್ಷರ ಆಯ್ಕೆ ಇಂದು ನಾಳೆ ಎನ್ನುತ್ತಲೇ ಸಾಗಿ ಅಂತಿಮಗೊಂಡಿದೆ.
ಸುಮಾರು ಐದು ವರ್ಷಗಳ ನಂತರ ಹೊಸ ಅಧ್ಯಕ್ಷರ ಆಯ್ಕೆ ಆದಂತಾಗಿದೆ.
ಜಾಹೀರಾತು, ಸುದ್ದಿಗೆ ಸಂಪರ್ಕಿಸಿ : 94837 02325