ಹುಬ್ಬಳ್ಳಿ: ಅಯೋಧ್ಯೆ ಮತ್ತು ಕಾಶಿಯ ಗಂಗಾ ಆರತಿ ಮಾದರಿಯಲ್ಲಿ ಹುಬ್ಬಳ್ಳಿಯ ನಡೆದಾಡುವ ಮಹಾದೇವರೆಂದೆ ಕರೆಸಿಕೊಳ್ಳುವ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಮಠದ ಎದುರಿನ ಪುಷ್ಕರಣಿಯಲ್ಲಿ ಸಹ ಆರೂಢ ಆರತಿಗೆ ಭರ್ಜರಿ ಸಿದ್ಧತೆ ನಡೆದಿದೆ.

ಈಗಾಗಲೇ ಗಂಗಾ ಆರತಿಯ ಮಾದರಿಯಲ್ಲಿ ಕಾವೇರಿ ಆರತಿ ಸಹ ಕಾವೇರಿ ತೀರ್ಥೋದ್ಭವದಲ್ಲಿ ನಡೆದಿದ್ದು, ಇದೀಗ ಸಿದ್ಧಾರೂಢರಿಗೆ ಆರೂಢ ಆರತಿ ಬೆಳಗಲು ಟ್ರಸ್ಟ್ ಕಮೀಟಿ ಮುಂದಾಗಿದ್ದು, ದಿ. 19 ರಂದು ಉದ್ಘಾಟನೆಗೊಳ್ಳಲಿದೆ.
ಟ್ರಸ್ಟ್ ಕಮೀಟಿ ಚೇರ್ಮನ್ ಚನ್ನವೀರ ಮುಂಗರವಾಡಿ ಈ ವಿಷಯ ಇಂದು ಪತ್ರಿಕಾಗೋಷ್ಠಿಯಲ್ಲಿ ಅಂದು ಸಂಜೆ 6.15 ಕ್ಕೆ ಭಕ್ತಾದಿಗಳ ಸಮ್ಮುಖದಲ್ಲಿ ಜರುಗಲಿದೆ. ಆರೂಢ ಆರತಿಯು ಗಂಗೆಗೆ ತುಪ್ಪ ಮತ್ತು ಕರ್ಪೂರ ದೀಪಗಳನ್ನು ಅರ್ಪಿಸುವ ಮೂಲಕ ಗಂಟೆ ಬಾರಿಸುವ ಮತ್ತು ಮಂತ್ರಗಳನ್ನು ಪಠಿಸುವ ಮೂಲಕ ಸುಮಾರು 30ರಿಂದ 35 ನಿಮಿಷ ಈ ಆರತಿ ಬೆಳಗಲಾಗುವುದು ಎಂದು ಹೇಳಿದರು.

ನಾಡಿದ್ದು ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಶಾಂತಾಶ್ರಮದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ ಹಾಗೂ ಪಂಢರಪುರದ ಶ್ರೀ ಪ್ರಭಾಕರ ಭುವಾ ಬೋಧಲೆ ಮಹಾರಾಜರು, ಯಶವಂತ ಭುವಾ ಬೋಧಲೆ ಮಹಾರಾಜರು ಸಾನಿಧ್ಯ ವಹಿಸಲಿದ್ದಾರೆ. ಶ್ರೀಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಉದ್ಘಾಟನೆಯನ್ನು ನೆರವೇರಸಲಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ಆರತಿಗೆ ಬೇಕಾಗುವ ಸಾಮಗ್ರಿಗಳು, ಧರಿಸುವ ವಸ್ತçಗಳನ್ನು ಉತ್ತರ ಪ್ರದೇಶದಿಂದ ಖರೀದಿಸಿ ತರಲಾಗಿದ್ದು, ಗಣಪತಿ ಸ್ತೋತ್ರ, ಸಿದ್ಧಾರೂಢರ ಸ್ತೋತ್ರ, ಢಮರು ತಾಂಡವ ಹಾಡು, ನಾಗಾರ್ಚನೆ ಸ್ತೋತ್ರ ನಂತರ ಸಿದ್ಧಾರೂಢರ ಮಂಗಳಾರತಿಯೊAದಿಗೆ ಆರತಿ ನಡೆಯಲಿದ್ದು, ತರಬೇತುದಾರರಾದ ಶಿವರಾಜ ಸುಲಾಖೆ 10-12ಯುವಕರಿಗೆ ಆರತಿ ತರಬೇತಿ ಸಹ ನೀಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಸಿದ್ಧಾರೂಢ ಮಠಕ್ಕೆ ಮತ್ತಷ್ಟು ಭಕ್ತರನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ.
ಗೋಷ್ಠಿಯಲ್ಲಿ ತರಬೇತಿ ನೀಡುತ್ತಿರುವ ಶಿವರಾಜ್ ಸುಲಾಕೆ, ಮಾಜಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ್, ಉಪಾಧ್ಯಕ್ಷ ವಿನಾಯಕ ಘೋಡಕೆ, ಉದಯ ನಾಯಕ, ಗೀತಾ ಕಲಬುರ್ಗಿ, ಇತರರಿದ್ದರು.




