ಧಾರವಾಡ: ಅಣ್ಣನೇ ತನ್ನ ತಂಗಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಯುಗಾದಿ ಹಬ್ಬದ ದಿನವೇ ನಡೆದಿದೆ.
ಗ್ರಾಮದ ಶಿವಲೀಲಾ ಈಶ್ವರ ಸಂಗೊಳ್ಳಿ
ಕೊಲೆಯಾದ ನತದೃಷ್ಟ ತಂಗಿಯಾಗಿದ್ದು,
ಆಕೆಯ ಅಣ್ಣ ಹನಮಂತ ಯಲಿವಾಳ ಕೊಲೆಗೈದವನಾಗಿದ್ಧಾನೆ.

ಗುರುವಾರ ಮಧ್ಯಾಹ್ನ ಹೊಲದಲ್ಲಿ ಆಕೆಯನ್ನು
ಕುಡಗೋಲಿನಿಂದ ಕೊಚ್ಚಿ ಕೊಲೆಗೈದಿದ್ದಾನೆ.
ತಾಲೂಕಿನ ತಡಕೋಡ ಗ್ರಾಮದ ಈಶ್ವರ ಸಂಗೊಳ್ಳಿ ಎಂಬಾತನಿಗೆ ಈಕೆಯನ್ನು ಮದುವೆ ಮಾಡಿಕೊಡಲಾಗಿತ್ತು.
ಆದರೆ,ಕೆಲದಿನಗಳ ಹಿಂದೆ ಗಂಡನೊಂದಿಗೆ ಜಗಳವಾಡಿದ್ದ ಶಿವಲೀಲಾ ತನ್ನ ತವರೂರಾದ ಅಮ್ಮಿನಬಾವಿ ಯಲ್ಲಿ ವಾಸಿಸುತ್ತಿದ್ದಳು.
ಈ ಮಧ್ಯೆ ಅಣ್ಣ ಹನಮಂತನ ಜೊತೆ ಈಕೆಗಿದ್ದ
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಸ್ಥಳಕ್ಕೆ ಗ್ರಾಮೀಣ ಸಿಪಿಐ ಶಿವಾನಂದ ಕಮತಗಿ ಭೇಟಿ ನೀಡಿದ್ದು, ತನಿಖೆ ಮುಂದುವರೆದಿದೆ.




