*ಡಿಜಿಟಲಿಕರಣದಲ್ಲಿ ಭಾರಿ ಅವ್ಯವಹಾರ* – *ಜಾತಕ ಜಾಲಾಡಿರುವ ಸವಡಿ ನೇತೃತ್ವದ ಸಮಿತಿ*
ಧಾರವಾಡ :ಕೇಂದ್ರ ಸರ್ಕಾರದ ನೆರವಿನಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸ್ಮಾರ್ಟಸಿಟಿ ಯೋಜನೆಯಲ್ಲಿ ಸಾಕಷ್ಟು ಅನುದಾನ ಬಳಕೆಯಲ್ಲಿ ಅವ್ಯವಹಾರವಾಗಿದೆ ಎಂಬ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ರಚಿಸಲ್ಪಟ್ಟಿದ್ದ ತನಿಖಾ ಸಮಿತಿ ಇಂದು ಮೇಯರ್ ಜ್ಯೋತಿ ಪಾಟೀಲ್ ಅವರಿಗೆ ಅಂತಿಮ ವರದಿ ಸಲ್ಲಿಸಿದೆ.

ಡಿಜಿಟಲಿಕರಣನಲ್ಲಿ ನಡೆದ ಅವ್ಯವಹಾರದ ಅಂತಿಮ ತನಿಖಾ ವರದಿಯನ್ನ ಸಮಿತಿ ಅಧ್ಯಕ್ಷ ವೀರಣ್ಣ ಸವಡಿ ಹಾಗೂ ಸಮಿತಿ ಸದಸ್ಯರಾದ ಮಾಜಿಮಹಾಪೌರರಾದ ಈರೇಶ ಅಂಚಟಗೇರಿ, ಶಿವು ಹಿರೇಮಠ ಹಾಗೂ ಮಯೂರ ಮೋರೆ ಅವರ ಸಮಿತಿ ಧಾರವಾಡ ಪಾಲಿಕೆ ಆವರಣದದಲ್ಲಿ ಮಹಾಪೌರರಾದ ಜ್ಯೋತಿ ಪಾಟೀಲ ಅವರ ಕೊಠಡಿಯಲ್ಲಿ ಉಪಮಹಾಪೌರರ ಸಂತೋಷ ಚವ್ವಾಣ ಉಪಸ್ಥಿತಿಯಲ್ಲಿ ನೀಡಿತು.
ಈ ವರದಿಯಲ್ಲಿ ಕೇಂದ್ರ ಸರಕಾರದ ನೆರವಿನಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸ್ಮಾರ್ಟಸಿಟಿ ಯೋಜನೆಯಡಿ ಡಿಜಿಟೀಲಕರಣ ಮಹತ್ವಾಕಾಂಕ್ಷಿ ಸ್ಮಾರ್ಟ ಹೆಲ್ತಕೇರನಲ್ಲಿ ನಡೆದ ಅವ್ಯವಹಾರದ ಕುರಿತು ಮಹಾನಗರ ಪಾಲಿಕೆಯ ಸಭಾ ಭವನದಲ್ಲಿ ಎರಡು ಸಮೀತಿ ಸಭೆಗಳು ಜರುಗಿದ್ದವು.
ಮಾಜಿಮಹಾಪೌರರು ವೀರಣ್ಣ ಸವಡಿ ಅಧ್ಯಕ್ಷತೆಯಲ್ಲಿ , ಮಾಜಿ ಮಹಾಪೌರರಾದ ಈರೇಶ ಅಂಚಟಗೇರಿ, ಶಿವು ಹಿರೇಮಠ, ಉಪಸ್ಥಿತಿಯಲ್ಲಿ ನಡೆದ ಸಭೆಗೆ ಅಭಿಯಂತರರಾದ ವಿಜಯಕುಮಾರ, ಆರೋಗ್ಯ ಅಧಿಕಾರಿಗಳಾದ ದಂಡೆಪ್ಪನವರ, ಸ್ಮಾರ್ಟಸಿಟಿ ಅಧಿಕಾರಿ ಬಸವರಾಜ ಸಮಿತಿಗೆ ಒದಗಿಸಿದ ಮಾಹಿತಿ ಅಸಮರ್ಪಕವಾಗಿದೆ ಎಂದು ಮಾಹಿತಿ ನೀಡಿದ್ದರು.
ಜತೆಗೆ ಸಭೆಯಲ್ಲಿ 3.26ಕೋಟಿ ವೆಚ್ಚದಲ್ಲಿ ಜರುಗಿದ ಕಾಮಗಾರಿಗಳು ಸಮರ್ಪಕವಾಗಿರದೆ ಇರುವುದು ಕಂಡುಬಂದಿದ್ದು, ಹಾಗೂ ಪಾಲಿಕೆ ಅಧಿಕಾರಿಗಳು ಸ್ಮಾರ್ಟ್ ಸಿಟಿ ಅಧಿಕಾರಿಗಳ ನಡುವೆ ಯಾವುದೇ ಸಮನ್ವಯ ಇರುವದಿಲ್ಲದ್ದು ಕಂಡುಬಂದಿರುತ್ತದೆ.ಹಿಂದಿನ ಸಭೆಯಲ್ಲಿ ಟೆಂಡರ ಹಾಗೂ ಇನ್ನಿತರ ಸಮಗ್ರ ಮಾಹಿತಿಯನ್ನು ಸಮಿತಿಗೆ ನೀಡಲು ಸೂಚಿಸಲಾಗಿತ್ತು.ಆದರೆ ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ಮಾಹಿತಿ ನೀಡದೆ ಇರುವದು ಕಂಡುಬಂದಿದೆ.
ಮಹತ್ತರ ದಾಖಲೆಗಳಾದ ಕಾಂಪಿಟಿಟರ ಬಿಡ್ಡಿಂಗ ಸರಕಾರದ ಮಾರ್ಗಸೂಚಿ, ತಾಂತ್ರಿಕ ಪರಿಣಿತರ ಸೇವೆ , ಮಾಹಿತಿ ವಿವಿಧ ಏಜನ್ಸಿಗಳ ಕಾರ್ಯಪದ್ದತಿ , ವಿವಿಧ ವೈದ್ಯರ ಸೇವೆ ಪಡೇದ ಮಾಹಿತಿ ಬಳಸಲಾದ ತಂತ್ರಜ್ಞಾನ ವಿಭಾಗದಲ್ಲಿ ಹಾಗು ವಿವಿಧ ತಾಂತ್ರಿಕ ತರಬೇತಿಗಳ ಮಾಹಿತಿಯನ್ನು ಅಚ್ಚುಕಟ್ಟಾಗಿ ನಡೆಯದೆ ಇರುವುದನ್ನು ವರದಿಯಲ್ಲಿ ಪ್ರಸ್ತಾಪಿಸಿದೆ.
ಈ ವರದಿಯಲ್ಲಿ ಮಾನವಸಂಪನ್ಮೂಲ ವಿಭಾಗದಲ್ಲಿ ಪಾಲಿಕೆ ಸಿಬ್ಬಂದಿ ಬಳಕೆ ಮಾಡಿ ಐದು ವರ್ಷಗಳಿಂದ ಗುತ್ತಿಗೆ ಕಾರ್ಮಿಕರ ಹೊರತುಪಡಿಸಿ ಪಾಲಿಕೆಯಲ್ಲಿ ನಡೆಯುತ್ತಿರುವ ಅವ್ಯವಹಾರವನ್ನ ಮಹಾಪೌರರ ಗಮನಕ್ಕೆ ತರಲಾಯಿತು. ಅಲ್ಲದೇ ಕೂಡಲೇ ಸಂಭಂದಪಟ್ಟ ಅಧಿಕಾರಿಗಳಿಂದ ಹಣ ವಸೂಲಾತಿ ಮಾಡಬೇಕು ಹಾಗೂ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲು ಸಮಿತಿ ಸಲಹೆ ನೀಡಿದೆ.




