*ಯುವ ಕಾಂಗ್ರೆಸ್ ಚುನಾವಣೆ ಹಿನ್ನೆಲೆಯಲ್ಲಿ ಹೊಡೆದಾಟ : ಮೂವರು ವಶಕ್ಕೆ*
ಧಾರವಾಡ : ಯುವ ಕಾಂಗ್ರೆಸ್ ಚುನಾವಣೆ ಹಿನ್ನೆಲೆಯಲ್ಲಿ ಎರಡು ಗುಂಪುಗಳ ಮಧ್ಯೆ ಕಳೆದ ರಾತ್ರಿ ಹೊಡೆದಾಟ ನಡೆದಿದ್ದು,ಈ ಘಟನೆಯಲ್ಲಿ ಧಾರವಾಡ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಟಾರ್ಗೆಟ್ ಮಾಡಿ ಅವರ ಸಹೋದರರ ಮೇಲೂ ಹಲ್ಲೆಗೂ ಯತ್ನಿಸಿದ ಬಗ್ಗೆ ವರದಿಯಾಗಿದೆ.
ರೌಡಿ ಶೀಟರ್ ಸೋಹೆಲ್ ಬಾಂದಾರ ಮತ್ತು ಇಸ್ಮಾಯಿಲ್ ತಮಾಟಗಾರ ಸಂಬಂದಿ ಸೋಹೆಲ್ ಹಾಲಬಾವಿ ಇಬ್ಬರೂ ಯುವ ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸಿದ್ದು ಇಬ್ಬರ ನಡುವೆ ರಾಜೀ ಮಾತುಕತೆ ನಡೆದ ನಂತರ ರಾತ್ರಿ ಕುಡಿದ ಮತ್ತಿನಲ್ಲಿ ಬಾಂದಾರ ಗುಂಪು ಇಸ್ಮಾಯಿಲ್ ತಂಡದವರದ್ದು ಅತಿಯಾಗಿದೆ ಅವರನ್ನು ಮುಗಿಸೇ ಬಿಡೋಣ ರಸೂಲಪುರ ಓಣಿ ಬಳಿ ದಾಳಿ ನಡೆಸಿದೆ ಎನ್ನಲಾಗಿದೆ.
ಇಸ್ಮಾಯಿಲ್ ತಮಾಟಗಾರ ಸಹೋದರ ಧಾರವಾಡ ಶಹರ ಠಾಣೆಗೆ ತಮ್ಮ ಕೊಲೆ ಯತ್ನಕ್ಕೆ ಸ್ಕೆಚ್ ಹಾಕಲಾಗಿದೆ. ಹಲ್ಲೆ ಯತ್ನ ನಡೆದಿದೆ ಎಂದು ದೂರು ನೀಡಿದ್ದು
ಈಗಾಗಲೇ ಶಹರ ಇನ್ಸಪೆಕ್ಟರ್ ಎನ್.ಸಿ.ಕಾಡದೇವರ ತಂಡ ಈ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದೆ ಎನ್ನಲಾಗಿದೆ.
ಇಸ್ಮಾಯಿಲ್ ಸಂಬಂಧಿ ಮತ್ತು ಅವರ ವಿರೋಧಿ ಗುಂಪುಗಳ ನಡುವಣ ವೈಷಮ್ಯದ ಜಗಳ ಇದು ಎನ್ನಲಾಗಿದೆ. ಈ ಘಟನೆಯ ಸಂಪೂರ್ಣವಾಗಿ ತನಿಖೆ ನಡೆಸಿ ಪತ್ತೆ ಹಚ್ಚಲು ಇಸ್ಮಾಯಿಲ್ ಸಹೋದರ ದೂರಿನಲ್ಲಿ ಹೇಳಿದ್ದಾರೆನ್ನಲಾಗಿದೆ.