ಬೆಂಗಳೂರು : ವೃತ್ತಿಯಲ್ಲಿ ಉತ್ತಮ ಹಾಗೂ ದಕ್ಷ ಸೇವೆ ಸಲ್ಲಿಸಿದ
197 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ಘೋಷಣೆಯಾಗಿದೆ.
ಪೊಲೀಸ್ ಅಧೀಕ್ಷಕರಾದ ಸಿ.ಕೆ.ಬಾಬಾ,ಡಾ.ಅನೂಪ ಶೆಟ್ಟಿ, ವಿಜಯಪುರ ಹೆಚ್ಚುವರಿ ಡಿ ಎಸ್ ಪಿ ರಾಮನಗೌಡ ಹಟ್ಟಿ, ಹುಬ್ಬಳ್ಳಿ ಧಾರವಾಡ ಮಹಾನಗರದ ಕೇಶ್ವಾಪುರ ಇನ್ಸ್ಪೆಕ್ಟರ್ ಕೆ.ಎಸ್. ಹಟ್ಟಿ, ವಿದ್ಯಾಗಿರಿ ಇನ್ಸ್ಪೆಕ್ಟರ್ ಸಂಗಮೇಶ ದಿಡಿಗನಾಳ, ಈ ಹಿಂದೆ ಹುಬ್ಬಳ್ಳಿಯಲ್ಲಿ ಸೇವೆ ಸಲ್ಲಿಸಿ ಪ್ರಸಕ್ತ ಯಾದಗಿರಿ ಜಿಲ್ಲೆಯ ಹುಣಸಗಿ ವೃತ್ತದ ಇನ್ಸ್ಪೆಕ್ಟರ್ ಸಚಿನ್ ಚಲವಾದಿ ಮುಂತಾದವರಿಗೆ ಸಿಎಂ ಪದಕ ಲಭಿಸಿದೆ.