*ನೀ ಅತ್ತಂಗೆ ಮಾಡು ನಾನು ಸತ್ತಂಗೆ ಮಾಡ್ತೀನಿ ನಾಟಕ ಬಿಡಿ : ಬೆಲ್ಲದ*
ಧಾರವಾಡ: ನೀನು ಅತ್ತಂಗೆ ಮಾಡು ಅನ್ನೋತರ ಆಯ್ತು! ತಮ್ಮ ಪತ್ನಿ ಬರೆದ ಪತ್ರ, ಸಿದ್ದರಾಮಯ್ಯನವರಿಗೇ ಗೊತ್ತಿರಲಿಲ್ಲವಂತೆ ಎನ್ನುವುದು ಹಾಸ್ಯಾಸ್ಪದ ಸಂಗತಿ! ಎಂದು
ವಿಪಕ್ಷ ಉಪ ನಾಯಕರು ಹಾಗೂ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಶ್ರೀಮತಿ ಪಾರ್ವತಿ ಸಿದ್ದರಾಮಯ್ಯನವರ ಪತ್ರ ಬಹುಶಃ @Siddaramaiah ನವರ ತಪ್ಪೊಪ್ಪಿಗೆಯ ಪತ್ರ ಹಾಗೂ ಮೂಡಾ ಹಗರಣದ ಒಂದು ಸ್ಪಷ್ಟತೆ ಎಂಬಂತಿದೆ! ಎಂದು ಪ್ರತಿಕ್ರಿಯಿಸಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳೇ, ತಪ್ಪೇ ಮಾಡದವರು ಪತ್ನಿಯ ನಿರ್ಧಾರ ತಿರಸ್ಕರಿಸಿ ಕಾನೂನು ಹೋರಾಟ ಮಾಡಬೇಕಿತ್ತು! ಆದರೆ ಕಳ್ಳ ತಾನು ಕದ್ದ ಮಾಲನ್ನು ವಾಪಸ್ಸು ಮಾಡಿದರೆ ನಿರಪರಾಧಿ ಆಗಿಬಿಡುವನೇ!?
ಎಂದು ಬೆಲ್ಲದ ಹೇಳಿದ್ದಾರೆ
ಅಕ್ರಮವಾಗಿ ಪಡೆದಿದ್ದ 14 ನಿವೇಶನಗಳನ್ನು ವಾಪಸ್ಸು ಮಾಡುವ ಉದಾರತನ ತೋರಿಸುತ್ತಿರುವ ನಿಮಗೆ, ಇದು ಸರ್ಕಾರದ ಆಸ್ತಿ, ಇಂದಲ್ಲ ನಾಳೆ ಕೋರ್ಟ್ ಆದೇಶದ ಮೇಲೆ ಅದನ್ನು ಹಿಂದಿರುಗಿಸಲೇಬೇಕು ಎಂಬುದು ತಿಳಿದಿರಬೇಕಲ್ಲವೇ!?
ನೀವು ಹೇಗೆ ಸೈಟು ವಾಪಾಸ್ ನೀಡಿದ್ದೀರೋ ಅದೇ ಮಾದರಿಯಲ್ಲಿ ರಾಜೀನಾಮೆ ನೀಡುವ ಪರಿಸ್ಥಿತಿ ಕೂಡಾ ನಿರ್ಮಾಣವಾಗಲಿದೆ❕ತನಿಖೆಯನ್ನು ಎದುರಿಸಿ ನೀವು ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲದು ಎಂದಿದ್ದಾರೆ.