ಹುಬ್ಬಳ್ಳಿ : ಧಾರವಾಡ ಜಿಲ್ಲಾ ಮದ್ಯ ಮಾರಾಟಗಾರರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಅಧ್ಯಕ್ಷರಾಗಿ ಸಾಮಾಜಿಕ ಹೋರಾಟಗಾರ ಹನುಮಂತಸಾ ನಿರಂಜನ, ಧಾರವಾಡದ ಹಿರಿಯ ಹೊಟೆಲ್ ಉದ್ಯಮಿ ಮಹೇಶ ಶೆಟ್ಟಿ ಉಪಾಧ್ಯಕ್ಷರಾಗಿ ಹಾಗೂ ಗೌರವ ಕಾರ್ಯದರ್ಶಿಯಾಗಿ ಹಿರಿಯ ಉದ್ಯಮಿ ಸಂಭಾಜಿ ಕಲಾಲ ಆಯ್ಕೆ ಆಗಿದ್ದಾರೆ.
ಖಜಾಂಚಿಯಾಗಿ ವೆಂಕಟೇಶ್ ನಿರಂಜನ, ಸಹ ಕಾರ್ಯದರ್ಶಿಯಾಗಿ ಅಳ್ನಾವರದ ಗಿರಿ ರೆಡ್ಡಿ, ತಾಲೂಕು ಸದಸ್ಯರಾಗಿ ನವಲಗುಂದದ ಪರಶುರಾಮ ದೊಡ್ಡಮನಿ, ಅಳ್ನಾವರದ ದಿನೇಶ್ ಕುಲಾಲ್, ಕಲಘಟಗಿಯಪ್ರಸಾದ ಗುರುವಾರ, ಕುಂದಗೋಳದ ಶ್ರೀಕಾಂತ್ ಕಲಾಲ ನೇಮಕಗೊಂಡಿದ್ದನ್ನು ರಾಜ್ಯ ಸಮಿತಿ ಸದಸ್ಯ ಟಿ.ಎಂ.ಮೆಹರವಾಡೆ ಪ್ರಕಟಿಸಿ ಅಭಿನಂದಿಸಿದರು.ಹುಬ್ಬಳ್ಳಿ ಅಧ್ಯಕ್ಷ ಸುನೀಲ್ ವಾಳವೆಕರ ಸೇರಿದಂತೆ ವಿವಿಧ ಪದಾಧಿಕಾರಿಗಳು ಇದ್ದರು.
ದಿ. 4ರಂದು ರಾಜ್ಯ ಸಮಿತಿ ಕರೆಯ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಿಗ್ಗೆ 10-30ಕ್ಕೆ ಒಂದು ಗಂಟೆ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಯಿತು.